ಪ್ರಧಾನಿ ಮೋದಿ ತಿನ್ನುವ ಒಂದು ಅಣಬೆಯ ಬೆಲೆ 80,000 ರೂಪಾಯಿಗಳಂತೆ..!

     

Last Updated : Dec 12, 2017, 08:10 PM IST
ಪ್ರಧಾನಿ ಮೋದಿ ತಿನ್ನುವ ಒಂದು ಅಣಬೆಯ ಬೆಲೆ 80,000 ರೂಪಾಯಿಗಳಂತೆ..! title=

ಗಾಂಧಿನಗರ್: ಹೌದು ,ನೀವು ನಂಬುತ್ತಿರೋ ಬಿಡುತ್ತಿರೋ ನರೇಂದ್ರ ಮೋದಿ ದಿನವೊಂದಕ್ಕೆ ಪ್ರತಿ ಒಂದು ಅಣಬೆಗೆ 80.000 ರೂಪಾಯಿಗಳಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿಗಳನ್ನು ಪ್ರತಿ ದಿನಕ್ಕೆ ಖರ್ಚು ಮಾಡುತ್ತಾರಂತೆ!   ಹೀಗಂತ ಕಾಂಗ್ರೆಸ್ ನ ಹಿಂದುಳಿದ ವರ್ಗದ ನಾಯಕ  ಗುಜರಾತಿನಲ್ಲಿ ಎರಡನೇಯ ಹಂತದ ಚುನಾವಣೆಗಾಗಿ ನಡೆದ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅದೇಗೆ ಕಪ್ಪು ವರ್ಣದಿಂದ  ಬಿಳಿಬಣ್ಣಕ್ಕೆ ತಿರುಗಿದರು ಎನ್ನುವ ರಹಸ್ಯದ ಬಗ್ಗೆ ವ್ಯಂಗ್ಯವಾಡಿದ ಅಲ್ಪೇಶ್ ಠಾಕೂರ್  "ನನಗೆ ನನ್ನ ಸ್ನೇಹಿತನೊಬ್ಬ ಹೇಳುತ್ತಿದ್ದ ಮೋದಿ ಏನನ್ನು ತಿನ್ನುತ್ತಾರೋ ಅದನ್ನು ಬಡ ಜನರು ತಿನ್ನಲು ಸಾದ್ಯವಿಲ್ಲ ಎಂದನು. ಅದಕ್ಕೆ ಅದೇನು ಎಂದು ಪ್ರಶ್ನಿಸಿದಾಗ, ಅವರು ಅಣಬೆಯನ್ನು ತಿನ್ನುತ್ತಾರೆ ಎಂದು ಅವನು ಉತ್ತರ ನೀಡಿದ. ಅದಕ್ಕೆ ನಾನು ಅದರಲ್ಲೇನು ತಪ್ಪು? ಅಣಬೆ ಎಲ್ಲ ಕಡೆ ದೊರೆಯುತ್ತವೆ ಎಂದು ಪ್ರಶ್ನಿಸಿದಾಗ. ಅದು ನಮ್ಮಂತವರು ತಿನ್ನುವ ಅಣಬೆಯಲ್ಲ ಬದಲಾಗಿ  ತೈವಾನ್ ದೇಶದಿಂದ ಆಮದು ಮಾಡಿಕೊಳ್ಳುವ ಅಣಬೆ. ಅದರ ಒಂದು ಅಣಬೆ ಬೆಲೆ ಸುಮಾರು 80.000 ರೂಪಾಯಿಗಳು. ಅದರಂತೆ ಪ್ರತಿ ದಿನ ಮೋದಿ ಸುಮಾರು ನಾಲ್ಕು ಲಕ್ಷದ ರೂಪಾಯಿಗಳ ಆಮದು ಮಾಡಿಕೊಂಡ  ಐದು ಅಣಬೆಯನ್ನು ತಿನ್ನುತ್ತಾರೆ "ಎಂದರು. 

ಅಲ್ಪೇಶ್ ಇನ್ನು ಮುಂದುವರೆದು ಮಾತನಾಡುತ್ತಾ ಈ ಪ್ರಕ್ರಿಯೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಅವರ 35 ವರ್ಷಗಳ ಹಿಂದಿನ ಫೋಟೋವನ್ನು ನಾನು ನೋಡಿದ್ದೇನೆ ಅದರಲ್ಲಿ ಅವರು ನನ್ನಂತೆ ಕಪ್ಪಗೆ ಇದ್ದಾರೆ ಎಂದರು. ಅಲ್ಲದೆ ಅವರು ತಿನ್ನುವ  ಈ ಅಣಬೆಯ ತಿಂಗಳ ವೆಚ್ಚ ಒಂದು ಕೋಟಿ ಇಪ್ಪತ್ತು ಲಕ್ಷವಾಗುತ್ತದೆ ಎಂದು ಇಲ್ಲಿನ ರ್ಯಾಲಿಯಲ್ಲಿ ತಿಳಿಸಿದರು. 

Trending News