ಕಾಶ್ಮೀರದಲ್ಲಿನ ಸಂಪರ್ಕ ಕಡಿತವನ್ನು15 ದಿನಗಳಲ್ಲಿ ಸರಿಪಡಿಸಲಾಗುವುದು- ಅಮಿತ್ ಶಾ

ಜಮ್ಮುಮತ್ತು ಕಾಶ್ಮೀರದಲ್ಲಿ ಸಂಪರ್ಕ ದಿಗ್ಬಂಧನವನ್ನು 15 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.  ಷಾ ಅವರು ಗ್ರಾಮದ ಮುಖ್ಯಸ್ಥರನ್ನು ಭೇಟಿಯಾಗಿ ಎಲ್ಲಾ ಪಂಚ ಮತ್ತು ಸರ್ಪಂಚ್‌ಗಳಿಗೆ 2 ಲಕ್ಷ ರೂ ವಿಮೆ ಘೋಷಿಸಿದ್ದಾರೆ.

Last Updated : Sep 3, 2019, 04:49 PM IST
ಕಾಶ್ಮೀರದಲ್ಲಿನ ಸಂಪರ್ಕ ಕಡಿತವನ್ನು15 ದಿನಗಳಲ್ಲಿ ಸರಿಪಡಿಸಲಾಗುವುದು- ಅಮಿತ್ ಶಾ  title=

ನವದೆಹಲಿ: ಜಮ್ಮುಮತ್ತು ಕಾಶ್ಮೀರದಲ್ಲಿ ಸಂಪರ್ಕ ದಿಗ್ಬಂಧನವನ್ನು 15 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.  ಷಾ ಅವರು ಗ್ರಾಮದ ಮುಖ್ಯಸ್ಥರನ್ನು ಭೇಟಿಯಾಗಿ ಎಲ್ಲಾ ಪಂಚ ಮತ್ತು ಸರ್ಪಂಚ್‌ಗಳಿಗೆ 2 ಲಕ್ಷ ರೂ ವಿಮೆ ಘೋಷಿಸಿದ್ದಾರೆ.

ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿ ಮೂಲಕ ನೀಡಿದ್ದ ಸಂವಿಧಾನದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ  ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಆಗಸ್ಟ್ 5 ರಂದು ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಕ್ರಮದಿಂದಾಗಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿತ್ತು. ಆದರೆ ಈ ಕ್ರಮವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರವು ಉಗ್ರರ ಸಂಪರ್ಕ ಸಂವಹನವನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಂಡಿತು. 

ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ರಾಜ್ಯಪಾಲ ಮಲಿಕ್ "ಈ ಹಿಂದೆ ಕಾಶ್ಮೀರದಲ್ಲಿ ಸಂಭವಿಸಿದ ಎಲ್ಲಾ ಬಿಕ್ಕಟ್ಟಿನಲ್ಲಿ, ಮೊದಲ ವಾರದಲ್ಲಿಯೇ ಕನಿಷ್ಠ 50 ಜನರು ಸಾಯುತ್ತಿದ್ದರು. ನಮ್ಮ ವರ್ತನೆ ಮಾನವ ಜೀವಗಳಿಗೆ ಯಾವುದೇ ನಷ್ಟವಾಗಬಾರದು.10 ದಿನ್ ಟೆಲಿಫೋನ್ ನಹಿ ಹೊಂಗೆ, ನಹಿ ಹೊಂಗೆ, ಲೆಕಿನ್ ಹಮ್ ಬಹೂತ್ ಜಲ್ಡಿ ಸಬ್ ವಾಪಾಸ್ ಕರ್ ದೇಂಗೆ ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐ ಹೇಳಿದ್ದರು.

Trending News