ವಿಧಾನಸಭೆಯಲ್ಲೂ ಬಿಜೆಪಿ ಜೊತೆಗಿನ ಎಐಎಡಿಎಂಕೆ ಮೈತ್ರಿ ಮುಂದುವರೆಯಲಿದೆ- ತಮಿಳುನಾಡು ಸಿಎಂ ಪಳನಿಸ್ವಾಮಿ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಮೈತ್ರಿ ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಅಮಿತ್ ಷಾ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಇ ಪಳನಿಸ್ವಾಮಿ ಶನಿವಾರ ಪ್ರಕಟಿಸಿದರು.

Last Updated : Nov 21, 2020, 06:17 PM IST
ವಿಧಾನಸಭೆಯಲ್ಲೂ ಬಿಜೆಪಿ ಜೊತೆಗಿನ ಎಐಎಡಿಎಂಕೆ  ಮೈತ್ರಿ ಮುಂದುವರೆಯಲಿದೆ- ತಮಿಳುನಾಡು ಸಿಎಂ ಪಳನಿಸ್ವಾಮಿ title=
file photo

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಮೈತ್ರಿ ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಅಮಿತ್ ಷಾ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಇ ಪಳನಿಸ್ವಾಮಿ ಶನಿವಾರ ಪ್ರಕಟಿಸಿದರು.

ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ನೇಮಕ

'ವಿಧಾನಸಭಾ ಚುನಾವಣೆಗೆ ಲೋಕಸಭಾ ಮೈತ್ರಿ ಮುಂದುವರಿಯಲಿದೆ. ನಾವು 10 ವರ್ಷಗಳ ಉತ್ತಮ ಆಡಳಿತವನ್ನು ನೀಡಿದ್ದೇವೆ.ನಮ್ಮ ಮೈತ್ರಿ 2021 ರ ಚುನಾವಣೆಯಲ್ಲಿ ಗೆಲ್ಲುತ್ತದೆ.ತಮಿಳುನಾಡು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸುತ್ತದೆ 'ಎಂದು ಪಳನಿಸ್ವಾಮಿ ಹೇಳಿದರು.

2021 ರಲ್ಲಿ ತಮಿಳುನಾಡಿನ ಜನರು ರಾಜಕೀಯದಲ್ಲಿ ಅದ್ಭುತವನ್ನು ಸೃಷ್ಟಿಸುತ್ತಾರೆ- ರಜನಿಕಾಂತ್

2011 ರ ವಿಧಾನಸಭಾ ಚುನಾವಣೆಯಲ್ಲಿ ಜೆ.ಜಯಲಲಿತಾ ಅವರು ಪಕ್ಷವನ್ನು ಅದ್ಭುತ ಗೆಲುವಿನತ್ತ ಕೊಂಡೊಯ್ದಾಗ ಎಐಎಡಿಎಂಕೆ ಡಿಎಂಕೆ ಪಕ್ಷವನ್ನು ಸೋಲಿಸಿತು. ಇದಾದ ನಂತರ ಅದು 2016 ರಲ್ಲಿ ಮತ್ತೆ ಜಯಗಳಿಸಿತು.

Trending News