ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಕಿರುತೆರೆ ನಟನ ಬಂಧನ

ಮುಂಬೈಯಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಆಕೆಗೆ ಬೆದರಿಕೆಯೋಡ್ಡಿದ ಕಿರುತೆರೆ ನಟ ಕರಣ್ ಒಬೆರಾಯ್ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಹೇಳಿರುವಂತೆ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

Last Updated : May 6, 2019, 02:24 PM IST
ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಕಿರುತೆರೆ ನಟನ ಬಂಧನ title=
Photo courtesy: Facebook

ಮುಂಬೈ: ಮುಂಬೈಯಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಆಕೆಗೆ ಬೆದರಿಕೆಯೋಡ್ಡಿದ ಕಿರುತೆರೆ ನಟ ಕರಣ್ ಒಬೆರಾಯ್ ಅವರನ್ನು ಸೋಮವಾರದಂದು ಪೊಲೀಸರು ಬಂಧಿಸಿದ್ದಾರೆ.ಪೊಲೀಸರು ಹೇಳಿರುವಂತೆ ಮಹಿಳೆಯನ್ನು ಮದುವೆಯಾಗುವುದಾಗಿ ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

"ಕರಣ್ ಒಬೆರಾಯ್ ಕೇವಲ ಮಹಿಳೆಯನ್ನು ಅತ್ಯಾಚಾರ ಮಾಡಿ ಆ ದೃಶ್ಯಗಳನ್ನು ಚಿತ್ರಿಕರಿಸಿದ್ದಾನೆ. ಒಂದು ವೇಳೆ ಹಣ ನೀಡದೆ ಹೋದಲ್ಲಿ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ನೀಡಿದ್ದಾನೆ" ಎಂದು ಒಶಿವಾರಾ ಪೋಲಿಸ್ ಸ್ಟೇಶನ್  ಅಧಿಕಾರಿಗಳು ಹೇಳಿದ್ದಾರೆ.ಈಗ ಆತನ ಮೇಲೆ ಅವರು ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ. 

ಈಗ ಪೋಲೀಸರ ವಶವಾಗಿರುವ ಆರೋಪಿ ನಟ ಮಹೇಶ್ ಭಟ್ ಅವರ ಸ್ವಾಭಿಮಾನ್ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ಬಾಬ್ಬಿ ಪಾತ್ರವಹಿಸಿದರು. ಮುಂದೆ ಸಾಯಾ, ಜಸ್ಸಿ ಜೈಸಿ ಕೊಯಿ ನಹಿನ್, ಇನ್ಸೈಡ್ ಎಡ್ಜ್ ಮುಂತಾದ ಶೋಗಳಲ್ಲಿ ನಟಿಸಿದರು. ಎ ಬ್ಯಾಂಡ್ ಆಫ್ ಬಾಯ್ಸ್ ತಂಡದ ಸದಸ್ಯರಾಗಿರುವುದಲ್ಲದೆ ಫ್ಯಾಷನ್ ಮತ್ತು ಫಿಟ್ನೆಸ್ ಮಾಡೆಲ್ ಆಗಿ ಸಕ್ರೀಯರಾಗಿದ್ದಾರೆ.

 

Trending News