ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು

 ತೆಲಂಗಾಣದಲ್ಲಿನ ಕಾಮರೆಡ್ಡಿ ಜಿಲ್ಲೆಯ ಜಾಲ್ಡಿಪಲ್ಲಿ ಎನ್ನುವ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

Last Updated : Jun 12, 2019, 12:40 PM IST
ತೆಲಂಗಾಣ: ದಲಿತ ಕುಟುಂಬಗಳನ್ನು ಬಹಿಷ್ಕ್ರರಿಸಿದ ಗ್ರಾಮಸ್ಥರು title=
Photo courtesy: Oxford Dictionaries Blog (ಸಾಂದರ್ಭಿಕ ಚಿತ್ರ )

ನವದೆಹಲಿ:  ತೆಲಂಗಾಣದಲ್ಲಿನ ಕಾಮರೆಡ್ಡಿ ಜಿಲ್ಲೆಯ ಜಾಲ್ಡಿಪಲ್ಲಿ ಎನ್ನುವ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಗ್ರಾಮದ  ಸರ್ಪಂಚ್ ಕಲ್ಲು ರವೀಂದರ್ ಮತ್ತು ಮಾಜಿ ವಾರ್ಡ್ ಸದಸ್ಯ ಪೊತುಗಂಟಿ ಪೆಡ್ಡಾ ಸೈಲೂ ನಡುವಿನ ವಿವಾದವು ಈ ಬಹಿಷ್ಕಾರಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ.

ಸೈಲೂ ಅವರು ಗ್ರಾಮ ಪಂಚಾಯತ್ ಕಚೇರಿಯನ್ನು ತಲುಪಿಅಲ್ಲಿ ಸರ್ಪಂಚ್ ಜೊತೆ ಜಗಳಕ್ಕೆ ಇಳಿದಿದ್ದಾರೆ .ಸೈಲೂನ ಬೆಂಬಲಕ್ಕಾಗಿ, ಎಸ್ಸಿ ಕುಟುಂಬಗಳು ಭಾನುವಾರದಂದು ಸರ್ಪಂಚ್ ನ ಜೊತೆ ವಾದಿಸಿದರು ಎನ್ನಲಾಗಿದೆ. ಎಸ್.ಸಿ. ಕಾಲೊನೀಗೆ ನೀರನ್ನು ಸರಬರಾಜು ಮಾಡುವುದನ್ನು ನಿಲ್ಲಿಸಲು ಮತ್ತು ಒಳಚರಂಡಿಯನ್ನು ಸ್ವಚ್ಛಗೊಳಿಸುವುದನ್ನು ಸ್ಥಗಿತಗೊಳಿಸುವುದಕ್ಕೆ ಸರಪಂಚ್ ಗ್ರಾಮ ಪಂಚಾಯತ್ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.

ಕಾಮರೆಡ್ಡಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಎನೋನಾ, ಡಿ.ಎಸ್.ಪಿ ಸಠೇನನ, ಸಿ.ಐ.ಸುಧಕರ್, ಎಸ್.ಐ.ಸುಖೇಂದರ್ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಜಲ್ಡಿಪಲ್ಲಿಗೆ ಭೇಟಿ ನೀಡಿದಾಗ ಈ ವಿಷಯವು ಬೆಳಕಿಗೆ ಬಂದಿದೆ. ಸರ್ಪಂಚ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
 

Trending News