ನವದೆಹಲಿ: ಅಕ್ಟೋಬರ್ 5 ರಂದು ಕೆಸಿಆರ್ ಸರ್ಕಾರದ ನಿರ್ಧಾರ ವಿರೋಧಿಸಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಎಸ್‌ಆರ್‌ಟಿಸಿ) ನೌಕರರು ಕರೆ ನೀಡಿದ ಮುಷ್ಕರದಿಂದಾಗಿ ಈಗ ಹೈದರಾಬಾದ್ ಮತ್ತು ಇತರ 32 ಜಿಲ್ಲೆಗಳಲ್ಲಿ ದೈನಂದಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಸುದ್ದಿಮೂಲಗಳ ಪ್ರಕಾರ, ಓಲಾ ಮತ್ತು ಉಬರ್ ಕ್ಯಾಬ್ ಚಾಲಕರು ಸಾರಿಗೆ ಮುಷ್ಕರಕ್ಕೆ ಸೇರ್ಪಡೆಯಾದ ಕಾರಣ ರಾಜ್ಯಾದ್ಯಂತ 50,000 ಕ್ಕೂ ಹೆಚ್ಚು ಕ್ಯಾಬ್‌ಗಳು ರಸ್ತೆಗಿಳಿದಿಲ್ಲ ಎನ್ನಲಾಗಿದೆ. 12 ಗಂಟೆಗಳ ಬಂದ್ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಯಿತು ಮತ್ತು ಸೋಮವಾರದವರೆಗೆ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ಒತ್ತಾಯಿಸಿದೆ.
Amid incidents of stone pelting in a few places, the day-long shutdown began in #Telangana on a call given by the employees of the Telangana State Road Transport Corporation (#TSRTC), whose indefinite #strike entered the 15th day on October 19.
Photo: IANS pic.twitter.com/PbqRp0lSwp
— IANS Tweets (@ians_india) October 19, 2019
ಈಗ ಸಾರಿಗೆ ನೌಕರರು ನೀಡಿರುವ ಕರೆಗೆ ಕಾಂಗ್ರೆಸ್, ಬಿಜೆಪಿ, ತೆಲುಗು ದೇಶಂ ಪಕ್ಷ (ಟಿಡಿಪಿ), ತೆಲಂಗಾಣ ಜನ ಸಮಿತಿ (ಟಿಜೆಎಸ್), ಜನಸೇನೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ (ಸಿಪಿಐ-ಎಂ) ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಕಾರ್ಮಿಕ ಸಂಘಗಳು ಮತ್ತು ನೌಕರರು, ಶಿಕ್ಷಕರು ಮತ್ತು ಕಾರ್ಮಿಕರ ವಿವಿಧ ಸಂಸ್ಥೆಗಳು, ವಿದ್ಯಾರ್ಥಿ ಸಂಘಗಳು ಮತ್ತು ಜನರ ಗುಂಪುಗಳು ಸಹ ಬೆಂಬಲ ವ್ಯಕ್ತಪಡಿಸಿವೆ.
ಪ್ರತಿಭಟನಾ ನಿರತ ಟಿಎಸ್‌ಆರ್‌ಟಿಸಿ ನೌಕರರು ಸರ್ಕಾರದೊಂದಿಗೆ ವಿಲೀನ ಸೇರಿದಂತೆ ತಮ್ಮ 26 ಬೇಡಿಕೆಗಳನ್ನು ಈಡೇರಿಸಬೇಕೆಂದು ಐಎಎನ್‌ಎಸ್ ವರದಿ ಮಾಡಿದೆ. ಆದಾಗ್ಯೂ, ಕೆಸಿಆರ್ ಸರ್ಕಾರವು ಅವರ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದೆ ಮತ್ತು ಪ್ರತಿಭಟನೆಯಲ್ಲಿ ಸೇರಿದ 48,000 ಉದ್ಯೋಗಿಗಳನ್ನು ಸರ್ಕಾರ ವಜಾ ಮಾಡಿದೆ.