ತೆಲಂಗಾಣ (Telangana) ಸಿಎಂ ಕೆ ಚಂದ್ರಶೇಖರ್ ರಾವ್ (K Chandrasekhar Rao) ಅವರ ಪುತ್ರಿ ಕವಿತಾ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು "ಹಮ್ ಸಬ್ ಹಿಂದೂಸ್ತಾನಿ" ಎಂಬ ಕವಿತೆಯನ್ನು ಬರೆದಿದ್ದಾರೆ. ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾ ಶುಲ್ಕ ಪಾವತಿ: ಫೆ.21ರವರೆಗೆ ಅವಧಿ ವಿಸ್ತರಣೆ
ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಸದಸ್ಯೆ ಹಾಗೂ ಮಾಜಿ ಸಂಸದೆ ಕವಿತಾ (Kavita) ತಮ್ಮ ಕವಿತೆಯಲ್ಲಿ ವಿಭಜಕ ಶಕ್ತಿಗಳ ಕೃತ್ಯಗಳ ನಡುವೆಯೂ ನಾವೆಲ್ಲರೂ ಒಂದೇ ಮತ್ತು ನಾವು ಭಾರತೀಯರು ಎಂದು ಬಲವಾಗಿ ಹೇಳಿದ್ದಾರೆ.
ಕವಿತಾ ಅವರು ಬರೆದ ಕವಿತೆ ಹೀಗಿದೆ:
Wearing and applying Sindoor is my conscious choice
Wearing Hijab is Muskan’s choice.Let women decide what they are comfortable in embracing and wearing.#DontTeachUs pic.twitter.com/wDuYVW6X5O
— Kavitha Kalvakuntla (@RaoKavitha) February 10, 2022
ಮಂಡ್ಯದಲ್ಲಿ 'ಅಲ್ಲಾ ಹು ಅಕ್ಬರ್' ಎಂದ ಹುಡುಗಿಯನ್ನು ಅಭಿನಂದಿಸಿದ ಕವಿತಾ, "ಸಿಂಧೂರವನ್ನು ಧರಿಸುವುದು ನನ್ನ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಹಿಜಾಬ್ (Hijab) ಧರಿಸುವುದು ಮುಸ್ಕಾನ್ ಅವರ ಆಯ್ಕೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಂಗಾರ ಅಸಲಿಯೋ/ನಕಲಿಯೋ? ಈ 4 ಸುಲಭ ತಂತ್ರಗಳ ಮೂಲಕ ಚಿಟಿಕಿ ಹೊಡೆಯುವಷ್ಟರಲ್ಲಿ ಕಂಡುಹಿಡಿಯಬಹುದು
ಜೀವನಶೈಲಿಯ ಆಯ್ಕೆ ಮತ್ತು ಬಟ್ಟೆಯ ಆಯ್ಕೆಯು ವೈಯಕ್ತಿಕ ನಿರ್ಧಾರ ಎಂದು ಅವರು ಹೇಳಿದ್ದಾರೆ. ಸಮಾಜದ ಒಂದು ನಿರ್ದಿಷ್ಟ ವರ್ಗವು ಮಹಿಳೆಯರು ಮತ್ತು ಧರ್ಮಗಳು ಹೇಗೆ ವರ್ತಿಸಬೇಕೆಂದು ನಿರೀಕ್ಷಿಸುತ್ತದೆ ಎಂಬ ಕಲ್ಪನೆಯೊಂದಿಗೆ ಭಾರತವನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದಲ್ಲಿ ಉಡುಪಿಯ ಕಾಲೇಜಿನಲ್ಲಿ ಶುರುವಾದ ಹಿಜಾಬ್-ಕೇಸರಿ ಶಾಲಿನ ವಿವಾದ ಇದೀಗ ರಾಜ್ಯಾದ್ಯಂತ ವ್ಯಾಪಿಸಿ, ಇಡೀ ದೇಶಾದ್ಯಂತ ಸುದ್ದಿಯಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.