ನವದೆಹಲಿ: ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ತಮ್ಮ ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸಲು ಪ್ರಾರಂಭಿಸಿದ್ದಾರೆ.
ತೇಜ್ ಪ್ರತಾಪ್ ಅವರು ಮಾಜಿ ಬಿಹಾರ ಮುಖ್ಯಮಂತ್ರಿ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರೊಂದಿಗೆ ಮದುವೆಯಾಗಲಿದ್ದಾರೆ. ಈಗ ಈ ಮದುವೆಗೆ ಅವರು ಬಿಹಾರದ ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸಿದ್ದಾರೆ.
ಆದರೆ ಈ ಮಧ್ಯ ಜೆಡಿಯು ವಿಧಾನಪರಿಷತ್ ಸದಸ್ಯ ನೀರಜ್ ಕುಮಾರ್, ಈ ಮದುವೆಯಲ್ಲಿ ಭಾಗವಹಿಸಲು ಒಂದ ಷರತ್ತು ವಿಧಿಸಿದ್ದಾರೆ. ಈ ಷರತ್ತಿನಲ್ಲಿ ಅವರು ವಧುವರರು ಯಾವುದೇ ರೀತಿಯ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂದು ತಿಳಿಸಬೇಕು. ಅಲ್ಲದೆ, ಯಾವುದೇ ಆಡಂಬರವಿಲ್ಲದೆ ಈ ಮದುವೆಯನ್ನು ನಡೆಸಲಾಗುತ್ತದೆ ಎಂದು ಘೋಷಿಸಬೇಕು ಆಗ ಮಾತ್ರ ಅವರು ಈ ಮದುವೆಯಲ್ಲಿ ಪಾಲ್ಗೊಳ್ಳುವುದಾಗಿ ಎಂದು ತಿಳಿಸಿದ್ದಾರೆ.