ಕರೋನಾ ಹೊಸ ರೂಪಾಂತರ ಡೆಲ್ಟಾಕ್ರಾನ್ ಎಷ್ಟು ಅಪಾಯಕಾರಿ ಮತ್ತು ಅದರ ಲಕ್ಷಣಗಳೇನು ?

ಕರೋನಾ ವೈರಸ್‌ನ ಹೊಸ ರೂಪಾಂತರವು ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ ರೂಪಾಂತರವಾಗಿದೆ.  ಇದು ಈಗ ಭಾರತದಲ್ಲಿಯೂ ಪತ್ತೆಯಾಗಿದೆ. 

Written by - Ranjitha R K | Last Updated : Mar 25, 2022, 09:13 AM IST
  • ಡೆಲ್ಟಾಕ್ರಾನ್ ಡೆಲ್ಟಾ ಮತ್ತು ಓಮಿಕ್ರಾನ್‌ನ ಹೈಬ್ರಿಡ್ ರೂಪಾಂತರವಾಗಿದೆ
  • ಡೆಲ್ಟಾಕ್ರಾನ್‌ನ ಗುಣಲಕ್ಷಣಗಳು ಓಮಿಕ್ರಾನ್ ಮತ್ತು ಡೆಲ್ಟಾವನ್ನು ಹೋಲುತ್ತವೆ
  • ಕೋವಿಡ್‌ನ ಹೊಸ ರೂಪಾಂತರಗಳೊಂದಿಗೆ ಸೋಂಕು ಹೆಚ್ಚಾಗುತ್ತದೆ
ಕರೋನಾ ಹೊಸ ರೂಪಾಂತರ ಡೆಲ್ಟಾಕ್ರಾನ್ ಎಷ್ಟು ಅಪಾಯಕಾರಿ ಮತ್ತು ಅದರ ಲಕ್ಷಣಗಳೇನು ? title=
ಡೆಲ್ಟಾಕ್ರಾನ್ ಡೆಲ್ಟಾ ಮತ್ತು ಓಮಿಕ್ರಾನ್‌ನ ಹೈಬ್ರಿಡ್ ರೂಪಾಂತರವಾಗಿದೆ (file photo)

ನವದೆಹಲಿ :  ಕೋವಿಡ್ -19 ನ (Coronavirus) ಹೊಸ ರೂಪಾಂತರವು ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಇದು ಮೊದಲಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತಿದೆ. ಕರೋನಾ ವೈರಸ್‌ನ ಹೊಸ ರೂಪಾಂತರ ಡೆಲ್ಟಾ (Delta) ಮತ್ತು ಓಮಿಕ್ರಾನ್ (Omicrom) ರೂಪಾಂತರಗಳಿಂದ ರೂಪುಗೊಂಡಿದೆ. ಇದನ್ನು ಡೆಲ್ಟಾಕ್ರಾನ್ (Deltacron) ಎಂದು ಹೆಸರಿಸಲಾಗಿದೆ. ಇದೀಗ ಭಾರತದಲ್ಲಿಯೂ ಡೆಲ್ಟಾಕ್ರಾನ್  ಅಪಾಯ ಎದುರುರಾಗಿದೆ. 

ಡೆಲ್ಟಾಕ್ರಾನ್ ರೋಗಲಕ್ಷಣಗಳು ಯಾವುವು?
- ತಲೆನೋವು
- ತೀವ್ರ ಜ್ವರ, ಜ್ವರ ಬಂದ ನಂತರ ಅತಿಯಾಗಿ ಬೆವರುವುದು ಅಥವಾ ಚಳಿ 
- ಗಂಟಲು ನೋವು
- ನಿರಂತರ ಕೆಮ್ಮು
- ಆಯಾಸ, ಸುಸ್ತು  
- ವಾಸನೆ ಅಥವಾ ರುಚಿಯ ಸಾಮರ್ಥ್ಯದ ನಷ್ಟ

ಇದನ್ನೂ ಓದಿ : 'ಚಲನಚಿತ್ರಗಳ ಪೋಸ್ಟರ್‌ಗಳನ್ನು ಹಾಕಲು ನೀವು ರಾಜಕೀಯಕ್ಕೆ ಬಂದಿದ್ದೀರಾ?'

ದೇಶದ ಈ ರಾಜ್ಯಗಳಲ್ಲಿ ಪತ್ತೆಯಾಗಿದೆ ಡೆಲ್ಟಾಕ್ರಾನ್  : 
ದೇಶದಲ್ಲಿ 568 ಪ್ರಕರಣಗಳು ಅಧ್ಯಯನ ಹಂತದಲ್ಲಿವೆ ಎಂದು, ಭಾರತದ ಕೋವಿಡ್ (COVID) ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ಮತ್ತು GSAID ಗಳು  ತಿಳಿಸಿವೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ 221 ಪ್ರಕರಣಗಳಲ್ಲಿ ಡೆಲ್ಟಾಕ್ರಾನ್ (Deltacron) ರೂಪಾಂತರಗಳು ಪತ್ತೆಯಾಗಿದ್ದು, ಇದು ಹಾಟ್‌ಸ್ಪಾಟ್ ಆಗಿದೆ. ಇದಾದ ನಂತರ ತಮಿಳುನಾಡಿನಲ್ಲಿ 90, ಮಹಾರಾಷ್ಟ್ರದಲ್ಲಿ 66, ಗುಜರಾತ್‌ನಲ್ಲಿ 33, ಪಶ್ಚಿಮ ಬಂಗಾಳದಲ್ಲಿ 32 ಮತ್ತು ತೆಲಂಗಾಣದಲ್ಲಿ 25 ಮತ್ತು ನವದೆಹಲಿಯಲ್ಲಿ 20 ಪ್ರಕರಣಗಳ ಅಧ್ಯಯನ ನಡೆಯುತ್ತಿದೆ.  

ಕೋವಿಡ್‌ನ ಹೊಸ ರೂಪಾಂತರಗಳೊಂದಿಗೆ ಸೋಂಕು ಹೆಚ್ಚಾಗುತ್ತದೆ
ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ (Omicron) ಕೂಡಿದ ಹೊಸ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. SARSCov2 ನ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳು ಒಟ್ಟಿಗೆ ಹರಡುವ ಸಾಧ್ಯತೆಯಿದೆ ಎಂದು WHO ವಿಜ್ಞಾನಿ ಮಾರಿಯಾ ವ್ಯಾನ್ ಕಾರ್ಖೋವ್ ಹೇಳಿದ್ದಾರೆ.  ಇದು ಅತಿ ವೇಗವಾಗಿ ಹರಡುತ್ತವೆ ಎನ್ನಲಾಗಿದೆ. 

ಇದನ್ನೂ ಓದಿ : Big Breaking: ದೇಶದ ಈ ರಾಜ್ಯದಲ್ಲಿ ಜಾರಿಯಾಗಲಿದೆ Uniform Civil Code, ಧಾಮಿ ಸರ್ಕಾರದ ಮಹತ್ವದ ನಿರ್ಧಾರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News