ಕೋಲ್ಕತ್ತಾ: ವಿಧಾನ ಸಭಾ ಚುನಾವಣೆಗೆ ಮುಂದಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ದೊಡ್ಡದಾಗಿಯೇ ನಡೆಯುತ್ತಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ತಾವು ಪ್ರತಿನಿಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲು ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸವಾಲೆಸೆದಿದ್ದಾರೆ. ತಾವು ಈ ಕ್ಷೇತ್ರದಿಂದ ಈ ಬಾರಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿದ ಟಿಎಂಸಿ ನೇತಾರೆ ಮಮತಾ ಭಾರೀ ಅಚ್ಚರಿ ಮೂಡಿಸಿದ್ದಾರೆ.
'ಪ್ರೈವಸಿ ಪಾಲಿಸಿ ಇಷ್ಟವಿಲ್ಲದಿದ್ದರೆ WhatsApp ಬಳಸಬೇಡಿ'- ದಿಲ್ಲಿ ಹೈಕೋರ್ಟ್ ಸಲಹೆ
ಈ ಸವಾಲನ್ನು ಸ್ವೀಕರಿಸಿರುವ ಅಧಿಕಾರಿ, ಈ ಬಾರಿ ಮಮತಾರನ್ನು ಸೋಲಿಸದೇ ಇದ್ದಲ್ಲಿ ತಾವು ಸಕ್ರಿಯ ರಾಜಕೀಯದಿಂದ ನಿವೃತ್ತರಾಗುವುದಾಗಿ ಶಪಥಗೈದಿದ್ದಾರೆ.
Digvijaya Singh: ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ..!
'ನಂದಿಗ್ರಾಮದಿಂದ ಕಣಕ್ಕಿಳಿಯಲು ನನ್ನ ಪಕ್ಷ ಅವಕಾಶ ಕೊಟ್ಟರೆ ನಾನು ಮಮತಾರನ್ನು ಕನಿಷ್ಠ 50000 ಮತಗಳ ಅಂತರದಿಂದ ಸೋಲಿಸುತ್ತೇನೆ ಇಲ್ಲವಾದಲ್ಲಿ ರಾಜಕೀಯ ಬಿಡುತ್ತೇನೆ' ಎಂದಿರುವ ಅಧಿಕಾರಿ, 'ನಾನು ಎಲ್ಲಿಂದ ಕಣಕ್ಕಿಳಿಯುತ್ತೇನೆ ಅಥವಾ ಇಳಿಯಲಿದ್ದೇನೋ ಎಂಬುದನ್ನು ಪಕ್ಷ ನಿರ್ಧರಿಸಲಿದೆ' ಎಂದು ಕೇಸರಿ ಪಡೆಯ ರೋಡ್ ಶೋ ಒಂದರ ವೇಳೆ ಹೇಳಿದ್ದಾರೆ.
CBSE Board Exam 2021: ಪರಿಷ್ಕೃತ ಪಠ್ಯಕ್ರಮದ ಆಡಿಯೇ ಪ್ರಶ್ನೆಗಳನ್ನು ಕೇಳಲಾಗುವುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.