ಸುಷ್ಮಾ ಸ್ವರಾಜ್ LOVE ಸ್ಟೋರಿ; ಕಾನೂನು ಅಧ್ಯಯನ ಮಾಡುವಾಗ ಹುಟ್ಟಿದ ಪ್ರೀತಿ ಅದು!

ಸುಷ್ಮಾ ಸ್ವರಾಜ್ ಈಗ ನಮ್ಮೊಂದಿಗಿಲ್ಲ. ಅವರ ಅಭಿಮಾನಿಗಳು ಸುಷ್ಮಾ ಸ್ವರಾಜ್ ಸಂಬಂಧಿಸಿದ ಹೆಚ್ಚು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ, ಅವರ ಮದುವೆಗೆ ಸಂಬಂಧಿಸಿದ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ.

Last Updated : Aug 8, 2019, 07:06 AM IST
ಸುಷ್ಮಾ ಸ್ವರಾಜ್ LOVE ಸ್ಟೋರಿ; ಕಾನೂನು ಅಧ್ಯಯನ ಮಾಡುವಾಗ ಹುಟ್ಟಿದ ಪ್ರೀತಿ ಅದು! title=

ನವದೆಹಲಿ: ದೇಶದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ(ಆಗಸ್ಟ್ 6) ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಉತ್ತಮ ಸಂಸದೀಯ ಪಟುವಾಗಿದ್ದ ಸುಷ್ಮಾ ಸ್ವರಾಜ್, ಪಕ್ಷದಲ್ಲಿ ಮೆಚ್ಚುಗೆ ಮತ್ತು ಮಹತ್ವದ ಸ್ಥಾನ ಪಡೆದಿದ್ದರು. ಸುಷ್ಮಾ ಉತ್ತಮ ಭಾಷಣಕಾರರೂ ಹೌದು. 

ಸಂಭಾಷಣೆಯ ವಿಧಾನ ಮತ್ತು ಅವರ ಉಡುಗೆಯಿಂದಾಗಿ ಅವರು ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯನ್ನು ಹರಡಿದ್ದರು. ಕುತೂಹಲಕಾರಿಯಾಗಿ, ಸುಷ್ಮಾ ಸ್ವರಾಜ್ ಅವರ ಇಡೀ ಜೀವನವು ಸಾರ್ವಜನಿಕವಾಗಿ ಉಳಿಯಿತು. ಆದರೆ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವೇ ಕೆಲವು ವಿಷಯಗಳು ಮುನ್ನೆಲೆಗೆ ಬಂದವು. ಸುಷ್ಮಾ ಸ್ವರಾಜ್ ಈಗ ನಮ್ಮೊಂದಿಗಿಲ್ಲ. ಅವರ ಅಭಿಮಾನಿಗಳು ಸುಷ್ಮಾ ಸ್ವರಾಜ್ ಸಂಬಂಧಿಸಿದ ಹೆಚ್ಚು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ, ಅವರ ಮದುವೆಗೆ ಸಂಬಂಧಿಸಿದ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ.

ಮೊದಲು ಪ್ರೀತಿ, ನಂತರ ಮದುವೆ!
ದೇಶದ ಪ್ರಸಿದ್ಧ ವಕೀಲರಲ್ಲಿ ಒಬ್ಬರಾದ ಸ್ವರಾಜ್ ಕೌಶಲ್, ಸುಷ್ಮಾ ಸ್ವರಾಜ್ ಅವರ ಪತಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರದ್ದು ಪ್ರೇಮ ವಿವಾಹ ಎಂದು ನಿಮಗೆ ತಿಳಿದಿದೆಯೇ? ಹೌದು, ಸುಷ್ಮಾ ಚಂಡೀಗಢದಲ್ಲಿ ಕಾನೂನು ಪದವಿ ಓದುತ್ತಿದ್ದಾಗ ಸ್ವರಾಜ್ ಕೌಶಲ್ ಅವರೊಂದಿಗೆ ಸ್ನೇಹ ಬೆಳೆಸಿದರು. ಆರಂಭಿಕ ದಿನಗಳಲ್ಲಿ, ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಪ್ರೀತಿಯಂತಹ ಯಾವುದೇ ವಿಷಯ ಇರಲಿಲ್ಲ. 

ಕಾನೂನು ಅಧ್ಯಯನ ಮುಗಿದ ನಂತರ ಪ್ರಾಕ್ಟೀಸ್ ಗಾಗಿ ಇಬ್ಬರೂ ದೆಹಲಿಗೆ ಬಂದರು. ದಿಲ್ಲಿಗೆ ಬಂದ ನಂತರ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಇದರ ನಂತರ, ಸುಷ್ಮಾ ತನ್ನ ಮನೆಯಲ್ಲಿ ಈ ವಿಷಯವನ್ನು ಹೇಳಿದರು. ಸುಷ್ಮಾ ಅವರ ತಂದೆ ಹರ್ದೇವ್ ಶರ್ಮಾ ಅವರು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದರು. ಮಗಳ ಪ್ರೀತಿಯ ವಿಷಯ ಕೇಳುತ್ತಿದ್ದಂತೆ ಅವರ ತಂದೆಗೆ ಕೋಪ ಬಂದಿತ್ತು. ಆದಾಗ್ಯೂ, ಅವರು ಮಗಳು ಸುಷ್ಮಾ ಅವರೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದರು, ಆದ್ದರಿಂದ ಅವರು ಮಗಳ ಪ್ರೇಮಕ್ಕೆ ಸಮ್ಮತಿಸಿ ಮದುವೆಗೆ ಒಪ್ಪಿದರು. ಬಳಿಕ ಸುಷ್ಮಾ ಸ್ವರಾಜ್, ಸ್ವರಾಜ್ ಕೌಶಲ್ ಅವರನ್ನು ವಿವಾಹವಾದರು.  

ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಸಹ 1999-2004ರವರೆಗೆ ಸಂಸದರಾಗಿದ್ದರು. ಇದಲ್ಲದೆ ಅವರು ಮಿಜೋರಾಂನ ರಾಜ್ಯಪಾಲರೂ ಆಗಿದ್ದರು. ಇದರ ಹೊರತಾಗಿಯೂ, ಅವರು ಹೆಚ್ಚು ಪ್ರಚಾರದಲ್ಲಿ ಉಳಿಯಲಿಲ್ಲ. ಕೇವಲ 34 ವರ್ಷ ವಯಸ್ಸಿನಲ್ಲಿ ಅವರನ್ನು ದೇಶದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು. ಸ್ವರಾಜ್ ಕೌಶಲ್ 37 ನೇ ವಯಸ್ಸಿನಲ್ಲಿ ಮಿಜೋರಾಂನ ರಾಜ್ಯಪಾಲರಾದರು. 1990 ರಿಂದ 1993 ರವರೆಗೆ ಅವರು ಆ ಸ್ಥಾನವನ್ನು ಅಲಂಕರಿಸಿದ್ದರು. ಕಾರ್ವಾಚೌತ್‌ನಲ್ಲಿ ಸುಷ್ಮಾ ಸ್ವರಾಜ್ ಮತ್ತು ಅವರ ಪತಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2017 ರಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಟ್ವೀಟ್‌ಗಳ ಬಗ್ಗೆ ಸುಷ್ಮಾ ಅವರ ಪತಿ ಕೂಡ ಚರ್ಚೆಯಲ್ಲಿದ್ದರು. ಸ್ವರಾಜ್ ಕೌಶಲ್ ಅವರ ಟ್ವೀಟ್ ವೈರಲ್ ಆಗಿದ್ದು, ಅದರಲ್ಲಿ ಯಾರೋ ಒಬ್ಬರು 'ಸರ್, ನೀವು ಟ್ವಿಟ್ಟರ್ನಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಏಕೆ ಅನುಸರಿಸಬಾರದು' ಎಂದು ಕೇಳಿದರು. ಅದಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದ ಸ್ವರಾಜ್ ಕೌಶಲ್ 'ನಾನು ಲಿಬಿಯಾ ಅಥವಾ ಯೆಮನ್‌ನಲ್ಲಿ ಸಿಲುಕಿಕೊಂಡಿಲ್ಲ' ಎಂದು ಹಾಸ್ಯದ ಚಟಾಕಿ ಹಾರಿಸಿದ್ದರು.

ಮತ್ತೊಂದು ಘಟನೆಯಲ್ಲಿ, ಟ್ವಿಟರ್ ಬಳಕೆದಾರ ಆಕಾಶ್ ಎಂಬುವವರು ಸ್ವರಾಜ್ ಅವರನ್ನು - ಸರ್ ಪ್ಯಾನ್ ಕಾರ್ಡ್ಗಾಗಿ ಅರ್ಜಿಯಲ್ಲಿ ಬ್ಯಾಂಕಿನ ಪಾಸ್ಬುಕ್ ಅನ್ನು ಬಳಸಬಹುದೇ ಎಂದು  ಕೇಳಿದರು. ಈ ಕುರಿತು ಉತ್ತರ ನೀಡಿದ್ದ ಸ್ವರಾಜ್ - 'ದಯವಿಟ್ಟು ನನ್ನನ್ನು ಆದಾಯ ತೆರಿಗೆ ಆಯುಕ್ತರೆಂದು ಪರಿಗಣಿಸುವ ತಪ್ಪನ್ನು ಮಾಡಬೇಡಿ' ಎಂದಿದ್ದರು. ಇನ್ನು ಭಾನುವಾರ ಅವರ ನೆಚ್ಚಿನ ಗಾಯಕರ ಬಗ್ಗೆ ಕೇಳಿದಾಗ, ಸ್ವರಾಜ್ ಅವರ ಉತ್ತರ - ಮುಖೇಶ್, ಸುರೈಯಾ ಮತ್ತು ಕಿಶೋರ್. ರಾಜ್ಯಪಾಲರು ಮತ್ತು ಸಂಸದರಾದ ನಂತರ ನಾನು ನನ್ನ ಸ್ವಂತ ಧ್ವನಿಯನ್ನು ಇಷ್ಟಪಡಲಾರಂಭಿಸಿದೆ ಎಂಬುದಾಗಿತ್ತು.

ದೇಶದ ರಾಜಕೀಯದಲ್ಲಿ ಮಹತ್ವದ ಸ್ಥಾನ ಹೊಂದಿರುವ ಸುಷ್ಮಾ ಸ್ವರಾಜ್ ಅವರು ತಮ್ಮ ರಾಜಕೀಯ ಜೀವನದ ಜೊತೆಗೆ ಅವರ ವೈಯಕ್ತಿಕ ಜೀವನದ ಎಲ್ಲ ಜವಾಬ್ದಾರಿಗಳನ್ನು ಪೂರೈಸುತ್ತಿದ್ದರು. ತನ್ನ ಕೌಟುಂಬಿಕ ಮತ್ತು ವೈಯಕ್ತಿಕ ಜೀವನದ ಬಗ್ಗೆ ಅವರು  ಬಹಳ ಗಂಭೀರವಾಗಿರುತ್ತಿದ್ದರು.

ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಹೊಂದಿದ್ದರೂ ಸಹ, ಅವರು ತಮ್ಮ ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಪ್ರತಿ ಹಬ್ಬದಲ್ಲೂ ತನ್ನ ಕುಟುಂಬದೊಂದಿಗೆ ಇಡೀ ಸಂಪ್ರದಾಯಬದ್ಧವಾಗಿ ಹಬ್ಬವನ್ನು ಆಚರಿಸುತ್ತಿದ್ದರು. ಮಾಜಿ ವಿದೇಶಾಂಗ ಸಚಿವರು ಕಾರ್ವಾ ಚೌತ್‌ಗಾಗಿ ತಮ್ಮ ಪತಿ ಸ್ವರಾಜ್ ಕೌಶಲ್ ಅವರಿಗಾಗಿ ಇಡೀ ದಿನ ಉಪವಾಸ ಮಾಡುತ್ತಿದ್ದರು. (ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುವ ಹಬ್ಬವನ್ನು ಉತ್ತರ ಭಾರತದಲ್ಲಿ ಆಚರಿಸಲಾಗುವ ಕಾರ್ವಾಚೌತ್‌ ಎಂದು ಆಚರಿಸಲಾಗುತ್ತದೆ.)

ಮಾತೃ ಹೃದಯಿ ಸುಷ್ಮಾ ಸ್ವರಾಜ್ ರಾಜಕೀಯವಾಗಿ, ಕೌಟುಂಬಿಕವಾಗಿ ಓರ್ವ ಪರಿಪೂರ್ಣ ಮಹಿಳೆ ಎಂದರೆ ತಪ್ಪಾಗಲಾರದು.
 

Trending News