Bihar Political Crisis: ಸುಶೀಲ್ ಮೋದಿಯ ಈ ಸವಾಲು ಸ್ವೀಕರಿಸುತ್ತಾರಾ ನಿತೀಶ್ ಕುಮಾರ್?

ಸುದ್ದಿ ಸಂಸ್ಥೆ ಎಎನ್‌ಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮೋದಿ, 'ನಿತೀಶ್‌ಗೆ ಬಿಜೆಪಿಯಿಂದ ಸಿಗುತ್ತಿದ್ದ ಗೌರವ ಆರ್‌ಜೆಡಿಯಲ್ಲಿ ಸಿಗುವುದಿಲ್ಲ. ಹೆಚ್ಚು ಸ್ಥಾನ ಪಡೆದರೂ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಮತ್ತು ಅವರ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡಲೇ ಇಲ್ಲ.

Written by - Bhavishya Shetty | Last Updated : Aug 10, 2022, 10:21 AM IST
    • 'ನಿತೀಶ್‌ಗೆ ಬಿಜೆಪಿಯಿಂದ ಸಿಗುತ್ತಿದ್ದ ಗೌರವ ಆರ್‌ಜೆಡಿಯಲ್ಲಿ ಸಿಗುವುದಿಲ್ಲ
    • ಶಿವಸೇನೆ ಅನುಭವಿಸಿದ ಸಮಸ್ಯೆ ನಿತೀಶ್ ಸಹ ಅನುಭವಿಸುತ್ತಾರೆ
    • ನಿತೀಶ್ ಕುಮಾರ್ ವಿರುದ್ಧ ಸುಶೀಲ್ ಮೋದಿ ಆಕ್ರೋಶ
Bihar Political Crisis: ಸುಶೀಲ್ ಮೋದಿಯ ಈ ಸವಾಲು ಸ್ವೀಕರಿಸುತ್ತಾರಾ ನಿತೀಶ್ ಕುಮಾರ್?  title=
Nitish Kumar

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಜೆಡಿಯು ನಾಯಕ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ನಂತರ ಸುಶೀಲ್ ಮೋದಿ ಅವರು, ಹೊಸ ಸರ್ಕಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಆರ್‌ಜೆಡಿಯಿಂದ ಸಿಗುತ್ತಿದ್ದ ಗೌರವ ಬಿಜೆಪಿಯೊಂದಿಗೆ ಸಿಗುವುದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ ನಿತ್ಯ 2.5GB ಡೇಟಾ , ಅನ್ಲಿಮಿಟೆಡ್ ಕಾಲಿಂಗ್ .!

ಸುದ್ದಿ ಸಂಸ್ಥೆ ಎಎನ್‌ಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮೋದಿ, 'ನಿತೀಶ್‌ಗೆ ಬಿಜೆಪಿಯಿಂದ ಸಿಗುತ್ತಿದ್ದ ಗೌರವ ಆರ್‌ಜೆಡಿಯಲ್ಲಿ ಸಿಗುವುದಿಲ್ಲ. ಹೆಚ್ಚು ಸ್ಥಾನ ಪಡೆದರೂ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ ಮತ್ತು ಅವರ ಪಕ್ಷವನ್ನು ಒಡೆಯುವ ಪ್ರಯತ್ನ ಮಾಡಲೇ ಇಲ್ಲ. ನಮಗೆ ದ್ರೋಹ ಬಗೆದವರಿಗೆ ತಕ್ಕ ಪಾಠ ಕಲಿಸುತ್ತೇವೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನಮಗೆ ದ್ರೋಹ ಬಗೆದಿದ್ದು, ಅದರ ಪರಿಣಾಮವನ್ನು ಈಗ ಎದುರಿಸುತ್ತಿದೆ” ಎಂದರು.

ಇಂದು ಮಧ್ಯಾಹ್ನ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆರ್‌ಜೆಡಿ ಅಧಿಕೃತ ಹ್ಯಾಂಡಲ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣ ವಚನವು ರಾಜಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಹೇಳಿದೆ.

ಏನಾಗಲಿದೆ ಸಂಪುಟ ಸೂತ್ರ?

ಹೊಸ ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮಂತ್ರಿ ಸ್ಥಾನ, ಯಾರಿಗೆ ಎಷ್ಟು ಖಾತೆಗಳು ಸಿಗುತ್ತವೆ ಎಂಬ ಚರ್ಚೆ ಹರಿದಾಡುತ್ತಿದೆ. ಈ ಕುರಿತು 2015ರಲ್ಲಿ ಮಹಾಮೈತ್ರಿಕೂಟದ ಸೂತ್ರದ ಮೇಲೆ ಸಚಿವ ಸಂಪುಟ ರಚನೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಇದರ ಅಡಿಯಲ್ಲಿ, 35 ಮಂತ್ರಿಗಳನ್ನು ಮಾಡಬಹುದು, ಅದರಲ್ಲಿ 16 RJD, 13 JDU ಮತ್ತು 2 ಕಾಂಗ್ರೆಸ್‌ನವರು ಆಗಿರಬಹುದು. ವಿಧಾನಸಭೆಯ ಸ್ಪೀಕರ್ ಅನ್ನು ಆರ್‌ಜೆಡಿಯಿಂದ ಆಯ್ಕೆ ಮಾಡಬಹುದು.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆಯಲಿದೆ ವರುಣಾರ್ಭಟ, ಕರಾವಳಿಯಲ್ಲಿ ಭಾರೀ ಬಿರುಗಾಳಿ ಸಾಧ್ಯತೆ

ನಿತೀಶ್ ಕುಮಾರ್ 9 ವರ್ಷಗಳಲ್ಲಿ ಎರಡು ಬಾರಿ ಮೈತ್ರಿ ಬದಲಾಯಿಸಿದ್ದಾರೆ: 2013ರಲ್ಲಿ ಬಿಜೆಪಿ ಮತ್ತು 2017ರಲ್ಲಿ ಆರ್‌ಜೆಡಿ ಜತೆಗಿನ ಮೈತ್ರಿಯನ್ನು ನಿತೀಶ್ ಕುಮಾರ್ ಮುರಿದಿದ್ದರು. ಎರಡೂ ಬಾರಿ ಅವರು ಸರ್ಕಾರ ರಚಿಸಿ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ ಇದೀಗ ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿಯುವ ಸರದಿಯನ್ನು ನಿತೀಶ್ ಕುಮಾರ್ ಅವರು ಅತ್ಯಂತ ಮೌನವಾದ ರಾಜಕೀಯ ಶೈಲಿಯಲ್ಲಿ ನಡೆಸಿದ್ದಾರೆ ಎನ್ನಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News