ಕಾವೇರಿ ನೀರು ಹಂಚಿಕೆ ವಿವಾದ: ನಾಲ್ಕು ವಾರಗಳಲ್ಲಿ ಸುಪ್ರಿಂಕೋರ್ಟ್ ನಿಂದ ಅಂತಿಮ ತೀರ್ಪು

    

Last Updated : Jan 9, 2018, 09:00 PM IST
ಕಾವೇರಿ ನೀರು ಹಂಚಿಕೆ ವಿವಾದ: ನಾಲ್ಕು ವಾರಗಳಲ್ಲಿ ಸುಪ್ರಿಂಕೋರ್ಟ್ ನಿಂದ ಅಂತಿಮ ತೀರ್ಪು  title=
ಸಂಗ್ರಹ ಚಿತ್ರ

ನವದೆಹಲಿ: ಸುಪ್ರಿಂಕೋರ್ಟ್ ನಾಲ್ಕು ವಾರಗಳಲ್ಲಿ ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ತನ್ನ ತೀರ್ಪನ್ನು ನೀಡಲಿದೆ ಎಂದು ತಿಳಿಸಿದೆ. 

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯ ಕುರಿತಾಗಿ ಕಿರಣ್ ಮುಜುಮದಾರ್ 2007 ರಲ್ಲಾದ ನೀರು ಹಂಚಿಕೆಯ ಕುರಿತಾಗಿ ಅವರು ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ವೇಳೆಯಲ್ಲಿ ಅಭಿಪ್ರಾಯ ಪಟ್ಟಿರುವ ನ್ಯಾಯಾಧೀಶರು ಇನ್ನು ನಾಲ್ಕು ವಾರಗಳಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿ ನ್ಯಾ. ಎ.ಎಂ ಖನ್ವಿಲ್ಕರ್, ನ್ಯಾ. ಡಿ.ವೈ ಚಂದ್ರಚೂಡ್ ತ್ರಿಪೀಠವು  ಕಾವೇರಿ ವಿಚಾರವಾಗಿ ತನ್ನ ಅಂತಿಮ ತೀರ್ಪನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕಳೆದ ಎರಡು ದಶಕಗಳಲ್ಲಿ ಕೇರಳ, ಕರ್ನಾಟಕ, ಹಾಗೂ ತಮಿಳುನಾಡಿನ ಮೂರು ರಾಜ್ಯಗಳಿಂದ ಪ್ರತ್ಯೇಕ ಅರ್ಜಿಗಳು ನ್ಯಾಯಾಲಯದ ಮುಂದೆ ಸಲ್ಲಿಕೆಯಾಗಿವೆ. ಈಗ ಈ  ಇವೆಲ್ಲ ಅರ್ಜಿಗಳನ್ನು ವಿಚಾರಣೆ ನಡೆಸಿ ಇನ್ನು ನಾಲ್ಕು ವಾರಗಳಲ್ಲಿ ಸುಪ್ರಿಕೋರ್ಟ್ ತನ್ನ ತೀರ್ಪನ್ನು ನೀಡಲಿದೆ ಎಂದು ಹೇಳಲಾಗಿದೆ. ಸುಪ್ರಿಂಕೋರ್ಟ್ 2017 ಸೆಪ್ಟೆಂಬರ್ 20 ರಂದು ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರವಾಗಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.  

Trending News