Supreme Court Big Verdict: ಕೊವಿಡ್-19ನಿಂದ ಮೃತಪಟ್ಟ ಜನರ ಕುಟುಂಬ ಸದಸ್ಯರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಆದರೆ, ಪರಿಹಾರದ ಮೊತ್ತ ಸರ್ಕಾರ ಖುದ್ದಾಗಿ ನಿರ್ಧರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇನ್ನೊಂದೆಡೆ ಕೊವಿಡ್-19 (Covid-19)ನಿಂದಾಗಿರುವ ಪ್ರತಿ ಸಾವುಗಳಿಗೆ 4 ಲಕ್ಷ ರೂ. ಪರಿಹಾರ ಒದಗಿಸುವುದು ಸಾಧ್ಯವಿಲ್ಲ ಎಂದೂ ಕೂಡ ನ್ಯಾಯಾಲಯ ಹೇಳಿದೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ ಕನಿಷ್ಠ ಪರಿಹಾರ ಒದಗಿಸುವ ವ್ಯವಸ್ಥೆಯನ್ನುNDMA ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ನಿಟ್ಟಿನಲ್ಲಿ ಕೋವಿಡ್ಗೆ ಸಂಬಂಧಿಸಿದ ಮರಣ ಪ್ರಮಾಣಪತ್ರಗಳನ್ನು (Corona Death Certificate) ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈಗಾಗಲೇ ನೀಡಲಾಗಿರುವ ಪ್ರಮಾಣಪತ್ರಗಳನ್ನು ಸರಿಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದಕ್ಕೂ ಮೊದಲು ಕೊವಿಡ್ ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರವಾಗಿ 4 ಲಕ್ಷ ರೂ. ಪಾವತಿಸಲು ಸರ್ಕಾರ ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿತ್ತು.
ಸರ್ಕಾರ ಖುದ್ದಾಗಿ ಪರಿಹಾರ ಮೊತ್ತವನ್ನು ನಿರ್ಧರಿಸಬೇಕು
ಈ ಕುರಿತು ಬುಧವಾರ ನೀಡಿರುವ ತನ್ನ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯ (Supreme Court) ಕೊವಿಡ್ (Coronavirus) ನಿಂದ ಮೃತಪಟ್ಟವರ ಕುಟುಂಬಸ್ತರಿಗೆ ಸರ್ಕಾರ ಪರಿಹಾರ ಒದಗಿಸಬೇಕು. ಆದರೆ, ಈ ಪರಿಹಾರದ ಮೊತ್ತ ಎಷ್ಟಾಗಿರಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು ಎಂದಿದೆ.
ಇದನ್ನೂ ಓದಿ-ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಿ- ಕೇಂದ್ರಕ್ಕೆ ಸಿಜೆಐ ಪತ್ರ
ಕರ್ತವ್ಯ ನಿರ್ವಹಣೆಯಲ್ಲಿ NDMA ವಿಫಲ: SC
ಕೊವಿಡ್ ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಕನಿಷ್ಠ ಮೊತ್ತ ಒದಗಿಸುವುದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಕೆಲಸವಾಗಿದೆ. ಆದರೆ, ಈ ಪರಿಹಾರವನ್ನು ಒದಗಿಸದೆ NDMA ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ-ಒಂದೇ ಸಾವನ್ನಪ್ಪಿದರೂ ಆಂಧ್ರಪ್ರದೇಶದ ಸರ್ಕಾರವೇ ಹೊಣೆ-ಸುಪ್ರೀಂಕೋರ್ಟ್
ಕೊರೊನಾದಿಂದ ಸುಮಾರು 4 ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಇದುವರೆಗೆ ಸುಮಾರು 3 ಕೋಟಿ, ಮೂರು ಲಕ್ಷ, 62 ಸಾವಿರದ 484 ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದು, ಇದುವರೆಗೆ ಸುಮಾರು 3 ಲಕ್ಷ 98 ಸಾವಿರದ 454 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಸುಮಾರು 2 ಕೋಟಿ 94 ಲಕ್ಷ 27 ಸಾವಿರದ 330 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶಾದ್ಯಂತ ಸುಮಾರು 5 ಲಕ್ಷ 37 ಸಾವಿರ ಸಕ್ರೀಯ ಪ್ರಕರಣಗಳಿವೆ.
ಇದನ್ನೂ ಓದಿ- ಕೋವಿಡ್ ಸಂತ್ರಸ್ತರಿಗೆ ₹ 4 ಲಕ್ಷ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.