ಓಟರ್ ಐಡಿಯಲ್ಲಿ ಪ್ರತ್ಯಕ್ಷವಾದ ಸನ್ನಿ ಲಿಯೋನ್, ಆನೆ, ಪಾರಿವಾಳ!

ಮತದಾರನ ಗುರುತಿನ ಚೀಟಿಯಲ್ಲಿ ಅವರ ಹೆಸರಿನ ಮುಂದೆ ಅವರ ಭಾವಚಿತ್ರಕ್ಕೆ ಬದಲಾಗಿ ಸನ್ನಿಲಿಯೋನ್, ಆನೆ, ಕುದುರೆ, ಜಿಂಕೆಗಳ ಫೋಟೊ ಮುದ್ರಣವಾಗಿದೆ. 

Last Updated : Aug 25, 2018, 10:59 AM IST
ಓಟರ್ ಐಡಿಯಲ್ಲಿ ಪ್ರತ್ಯಕ್ಷವಾದ ಸನ್ನಿ ಲಿಯೋನ್, ಆನೆ, ಪಾರಿವಾಳ! title=
ಸಾಂದರ್ಭಿಕ ಚಿತ್ರ

ಲಖನೌ: ಮತದಾರರ ಗುರುತಿನ ಚಿಟಿ ಎಂದಮೇಲೆ ಅದರಲ್ಲಿ ಮತದಾರನ ಭಾವಚಿತ್ರ ಇರೋದು ಸಹಜ. ಆದರೆ ಇಲ್ಲೊಂದು ಪ್ರದೇಶದಲ್ಲಿ ಮತದಾರನ ಗುರುತಿನ ಚೀಟಿಯಲ್ಲಿ ಅವರ ಹೆಸರಿನ ಮುಂದೆ ಅವರ ಭಾವಚಿತ್ರಕ್ಕೆ ಬದಲಾಗಿ ಸನ್ನಿಲಿಯೋನ್, ಆನೆ, ಕುದುರೆ, ಜಿಂಕೆಗಳ ಫೋಟೊ ಮುದ್ರಣವಾಗಿದೆ. ಪ್ರಾಣಿಗಳ ಫೋಟೋ ಇದ್ದರೆ ಹೋಗ್ಲಿ ಬಿಡಿ ಅನ್ನಬಹುದು. ಆದರೆ ಸನ್ನಿ ಲಿಯೋನ್ ಫೋಟೊ ಪ್ರಿಂಟ್ ಆದ್ರೆ ಹೇಗನ್ನಿಸಬಹುದು ಆಲ್ವಾ?

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲಾಡಳಿತ ಈ ಯಡವಟ್ಟು ಮಾಡಿದ್ದು, ಮತದಾರರ ಗುರುತಿನ ಚಿಟಿ ವಿತರಣೆಯಾದ ನಂತರ ಈ ತಪ್ಪುಗಳು ಬೆಳಕಿಗೆ ಬಂದಿವೆ. 51 ವರ್ಷದ ಮಹಿಳೆಯ ಹೆಸರಿನ ಮುಂದೆ ಸನ್ನಿ ಲಿಯೋನ್ ಫೋಟೋ ಮುದ್ರಣವಾಗಿದೆ. 56 ವರ್ಷ ವಯಸ್ಸಿನ ವ್ಯಕ್ತಿ ಹೆಸರಿನ ಮುಂದೆ ಆನೆಯ ಫೋಟೋ ಪ್ರಿಂಟ್ ಆಗಿದೆ. ಹೀಗಾಗಿ ಜನತೆ ಅಲ್ಲಿನ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದೆ. 

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಲ್ಲಿಯಾ ಜಿಲ್ಲಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್, ಸುಮಾರು 7 ರಿಂದ 8 ಮತದಾರರ ಗುರುತಿನ ಚೀಟಿಗಳಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳ ಫೋಟೋ ಮುದ್ರಣವಾಗಿರುವ ಬಗ್ಗೆ ಆಗಸ್ಟ್ 15 ರಂದು ನಮಾಗೇ ತಿಳಿಯಿತು. ಈ ತಪ್ಪು ನಮ್ಮ ಆಪರೇಟರ್'ಗಳಿಂದಲೇ ಆಗಿದೆ ಎಂಬುದು ಖಚಿತವಾದ ಮೇಲೆ ವಿಚಾರಣೆ ನಡೆಸಿದಾಗ ಆಪರೇಟರ್ ವಿಷ್ಣು ದೇವ್ ವರ್ಮ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ" ಎಂದಿದ್ದಾರೆ.

Trending News