ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿನ ಸಂಸದರಿಗೆ ಕ್ಯಾಂಟೀನ್ ನ ಆಹಾರ ಪದಾರ್ಥಗಳ ಮೇಲೆ ನೀಡಲಾಗುವ ಎಲ್ಲಾ ರೀತಿಯ ಸಬ್ಸಿಡಿಗಳನ್ನು ಗುರುವಾರ (ಡಿಸೆಂಬರ್ 5, 2109) ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಸಂಸತ್ತಿನ ಕ್ಯಾಂಟೀನ್‌ನಲ್ಲಿ ಎಲ್ಲಾ ರೀತಿಯ ಆಹಾರ ಪದಾರ್ಥಗಳ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲು ವಿವಿಧ ಪಕ್ಷಗಳ ಸಂಸದರು ಸರ್ವಾನುಮತದಿಂದ ಒಪ್ಪಿದ ಸೂಚಿಸಿದ ಬಳಿದ ವ್ಯಾಪಾರ ಸಲಹಾ ಸಮಿತಿ (ಬಿಎಸಿ) ಸಭೆ ಈ ನಿರ್ಣಯ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಈ ಕುರಿತು ಎಲ್ಲ ಸಂಸತ್ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಹೀಗಾಗಿ ನಿನ್ಮುಂದೆ ಕ್ಯಾಂಟೀನ್ ನ ಎಲ್ಲ ಆಹಾರ ಪದಾರ್ಥಗಳು ಮಾರುಕಟ್ಟೆಯಲ್ಲಿ ಚಾಲ್ತಿ ಇರುವ ನಿಯಮಿತ ಬೆಲೆಯಲ್ಲಿಯೇ ಲಭ್ಯವಾಗಿರಲಿವೆ.
ಸಬ್ಸಿಡಿ ರದ್ದುಗೊಳಿಸುವ ಮೊದಲು ಆಹಾರ ಕ್ಯಾಂಟೀನ್ ನಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಪಟ್ಟಿ ಈ ಕೆಳಗಿನಂತಿದೆ:
ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರಿಗೆ ಆಹಾರ ಪದಾರ್ಥಗಳ ಮೇಲೆ ನೀಡಲಾಗುವ ಸಬ್ಸಿಡಿ ವೆಚ್ಚ 17 ಕೋಟಿ ರೂ. ಆಗಿತ್ತು. ಕಳೆದ ಲೋಕಸಭಾ ಅಧಿವೇಶನದಲ್ಲಿ, ಸಂಸತ್ ಭವನದ ಮೇಲಿನ ಹೊರೆ ಕಡಿಮೆ ಮಾಡಲು ಸಂಸತ್ ಕ್ಯಾಂಟೀನ್‌ನಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು.
ಸದ್ಯ ಸಂಸತ್ತಿನ ಕೆಳಮನೆ ಅಂದರೆ ಲೋಕಸಭೆಯಲ್ಲಿ ಒಟ್ಟು 545 ಸಂಸದರಿದ್ದಾರೆ, ಮೇಲ್ಮನೆ ಅಥವಾ ರಾಜ್ಯಸಭೆಯು ಪ್ರಸ್ತುತ ಒಟ್ಟು 245 ಸಂಸದರನ್ನು ಹೊಂದಿದೆ.