ನಿಮ್ಮ ಜೀವನ ಚರಿತ್ರೆ ಚಿತ್ರಕ್ಕೆ ಹೀರೋಯಿನ್ ಯಾರು? ಎಂದಿದ್ದಕ್ಕೆ ರಾಹುಲ್ ಗಾಂಧಿ ಹೇಳಿದ್ದು ಹೀಗೆ...!

ರಾಜಕೀಯ ನಾಯಕರ ಜೀವನ ಚರಿತ್ರೆ ಕುರಿತ ಚಲನಚಿತ್ರಗಳು ಈ ಚುನಾವಣೆಗೂ ಮುನ್ನ ಸಾಕಷ್ಟು ಹವಾ ಮಾಡುತ್ತಿವೆ. ಅದರಲ್ಲಿ ಬಾಳ್ ಠಾಕ್ರೆ, ಜಯಲಲಿತಾ,ಎನ್ಟಿಆರ್, ನರೇಂದ್ರ ಮೋದಿ ಕುರಿತಾದ ಚಿತ್ರಗಳು ಪ್ರಮುಖವಾದವುಗಳು.ಈಗ ರಾಹುಲ್ ಗಾಂಧಿ ಕುರಿತಾದ ಚಿತ್ರವೂ ಕೂಡ ತೆರೆಗೆ ಬರುತ್ತಿದೆ ಎನ್ನಲಾಗಿದೆ.

Last Updated : Apr 5, 2019, 05:59 PM IST
ನಿಮ್ಮ ಜೀವನ ಚರಿತ್ರೆ ಚಿತ್ರಕ್ಕೆ ಹೀರೋಯಿನ್ ಯಾರು? ಎಂದಿದ್ದಕ್ಕೆ ರಾಹುಲ್ ಗಾಂಧಿ ಹೇಳಿದ್ದು ಹೀಗೆ...! title=

ನವದೆಹಲಿ: ರಾಜಕೀಯ ನಾಯಕರ ಜೀವನ ಚರಿತ್ರೆ ಕುರಿತ ಚಲನಚಿತ್ರಗಳು ಈ ಚುನಾವಣೆಗೂ ಮುನ್ನ ಸಾಕಷ್ಟು ಹವಾ ಮಾಡುತ್ತಿವೆ. ಅದರಲ್ಲಿ ಬಾಳ್ ಠಾಕ್ರೆ, ಜಯಲಲಿತಾ,ಎನ್ಟಿಆರ್, ನರೇಂದ್ರ ಮೋದಿ ಕುರಿತಾದ ಚಿತ್ರಗಳು ಪ್ರಮುಖವಾದವುಗಳು.ಈಗ ರಾಹುಲ್ ಗಾಂಧಿ ಕುರಿತಾದ ಚಿತ್ರವೂ ಕೂಡ ತೆರೆಗೆ ಬರುತ್ತಿದೆ ಎನ್ನಲಾಗಿದೆ.

ಈಗ ಮಹಾರಾಷ್ಟ್ರದ ಪುಣೆ ವಿದ್ಯಾರ್ಥಿಗಳು ರಾಹುಲ್ ಗಾಂಧೀ ಯವರಿಗೆ  ತಮ್ಮ ಜೀವನದ ಕುರಿತಾಗಿ ಬರುತ್ತಿರುವ ಸಿನಿಮಾದ ಬಗ್ಗೆ ಗಮನ ಸೆಳೆದರು. ಕೇವಲ ಅಷ್ಟೇ ಅಲ್ಲದೆ ಇನ್ನೂ ಮುಂದುವರೆದು ನಿಮ್ಮ ಈ ಜೀವನ ಚರಿತ್ರೆ ಕುರಿತ ಸಿನಿಮಾಗೆ ಯಾರನ್ನು ಹಿರೋಯಿನ್ ಆಗಿ ಕಾಣಲು ಇಚ್ಚಿಸುತ್ತಿರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ರಾಹುಲ್ ಗಾಂಧೀ ತಾವು ಕಾಯಕಕ್ಕೆ ಮದುವೆಯಾಗಿರುವುದಾಗಿ ಹೇಳಿದರು.ಅಷ್ಟಕ್ಕೂ ರಾಹುಲ್ ಗಾಂಧೀ ಈ ಪ್ರಶ್ನೆ ಎದುರಾಗುತ್ತಿರುವುದು ಇದೇ ಮೊದಲೇನಲ್ಲ ಕಳೆದ ವರ್ಷ ಹೈದರಾಬಾದ್ ನಲ್ಲಿ  ಪತ್ರಕರ್ತರು ಯಾವಾಗ ಮದುವೆಯಾಗುತ್ತೀರಿ ಎಂದು ಪ್ರಶ್ನಿಸಿದ್ದರು.ಇದಕ್ಕೆ ಅವರು ಕಾಂಗ್ರೆಸ್ ಪಕ್ಷವನ್ನು ಮದುವೆಯಾಗಿರುವುದಾಗಿ ಹೇಳಿದ್ದರು.

ಇದೇ ವೇಳೆ ವಯನಾಡ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಬಗ್ಗೆ ಪ್ರಿಯಾಂಕಾ ಗಾಂಧಿಯವರ ಟ್ವೀಟ್ ಬಗ್ಗೆ ಗಮನ ಸೆಳೆದಾಗ "ಧೈರ್ಯ ಎನ್ನುವುದು ನಾವೇನು ಅನುಭವಿಸಿರುತ್ತೆವೋ ಅಥವಾ ಸ್ವೀಕರಿಸಿರುತ್ತೆವೋ ಅಂತಹ ಅನುಭವದಿಂದ ಬರುತ್ತದೆ.ನೀವು ಸತ್ಯವನ್ನು ಸ್ವೀಕರಿಸಿದ್ದೆ ಆದಲ್ಲಿ ನಿಮಗೆ ಧೈರ್ಯ ಬರುತ್ತದೆ. ಒಂದು ವೇಳೆ ನೀವು ಸುಳ್ಳನ್ನು ಸ್ವೀಕರಿಸಿದ್ದಾದಲ್ಲಿ ನಿಮಗೆ ಭಯವಿರುತ್ತದೆ "ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಿಯಾಂಕಾ ಗಾಂಧಿ ತಮ್ಮ ಅತ್ಯುತ್ತಮ ಸ್ನೇಹಿತೆ ಎಂದು ರಾಹುಲ್ ಗಾಂಧಿ ಹೇಳಿದರು.

 

Trending News