ಪ್ರಧಾನಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ

ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಆರಂಭಿಸಿದೆ

Last Updated : May 13, 2020, 11:18 AM IST
ಪ್ರಧಾನಿ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನಂತರ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ title=

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಆರಂಭಿಸಿದೆ. ಪ್ರಧಾನಿ ಮೋದಿ ಘೋಷಿಸಿರುವ ಈ ಪರಿಹಾರದ ಪ್ಯಾಕೇಜ್ ಭರವಷೆಯ ಮೇಲೆ ಇಂದು ಷೇರು ಮಾರುಕಟ್ಟೆ ಆರಂಭಬೊಂಡಿದೆ. ಬೆಳಿಗ್ಗೆ ಮಾರುಕಟ್ಟೆ ತೆರೆದ ತಕ್ಷಣ, ವ್ಯವಹಾರದಲ್ಲಿ ಭರಾಟೆ ಕಂಡುಬರುತ್ತದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಅಂದರೆ, 30-ಷೇರುಗಳ ಬಿಎಸ್ಇ ಸೆನ್ಸಿಟಿವ್ ಇಂಡೆಕ್ಸ್ ಸೆನ್ಸೆಕ್ಸ್ 877 ಪಾಯಿಂಟ್ ಗಳಿಸಿ 32,248 ತೆರೆದುಕೊಂಡಿದೆ. ಇದೆ ರೀತಿಯ ವಾತಾವರಣ ಇತರ ಮಾರುಕಟ್ಟೆಗಳಲ್ಲಿಯೂ ಕಂಡು ಬಂದಿದ್ದು,  ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ 50-ಷೇರು ಸೂಕ್ಷ್ಮ ಸೂಚ್ಯಂಕ ನಿಫ್ಟಿ ಸಹ 257 ಪಾಯಿಂಟ್ ಗಳಿಸಿ 9,878 ಕ್ಕೆ ತನ್ನ ವಹಿವಾಟು ಆರಂಭಿಸಿದೆ.

ಕಳೆದ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಸರಿನಲ್ಲಿ ದೊಡ್ಡ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಪ್ರಧಾನಿ ಘೋಷಿಸಿರುವ ಈ ಆರ್ಥಿಕ ಪ್ಯಾಕೇಜ್ ಭಾರತವನ್ನು 'ಸ್ವಾವಲಂಬಿಯನ್ನಾಗಿ' ಮಾಡುವ ಪ್ರಮುಖ ಹೆಜ್ಜೆಯಾಗಿದೆ. ಈ ಪ್ಯಾಕೇಜ್ ಸುಮಾರು 20 ಲಕ್ಷ ಕೋಟಿಗಳಾಗಿದ್ದು, ಇದು ಆರ್‌ಬಿಐ ನಿರ್ಧಾರ ಸೇರಿದಂತೆ ಜಿಡಿಪಿಯ ಶೇ.10 ಆಗಿದೆ ಎಂದು ಪ್ರಧಾನಿ ಹೇಳಿದ್ದಾರೆ, ಈ ಆರ್ಥಿಕ ಪ್ಯಾಕೇಜ್ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿನಿಂದ ವಿಸ್ತೃತ ಮಾಹಿತಿಯನ್ನು ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಎಲ್ಲದರ ಮೂಲಕ ದೇಶದ ವಿವಿಧ ವಿಭಾಗಗಳು ಹಾಗೂ ಆರ್ಥಿಕ ಕೊಂಡಿಗಳಿಗೆ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಬೆಂಬಲ ಸಿಗಲಿದೆ ಎಂದಿದ್ದಾರೆ. 20 ಲಕ್ಷ ಕೋಟಿ ರೂ.ಗಳ ಈ ಆರ್ಥಿಕ ಪ್ಯಾಕೇಜ್, 2020ರಲ್ಲಿ ದೇಶದ ವಿಕಾಸ ಯಾತ್ರೆ ಮತ್ತು ಸ್ವಾವಲಂಭಿ ಭಾರತ ಅಭಿಯಾನಕ್ಕೆ ಹೊಸ ಪ್ರಚೋದನೆ ನೀಡಲಿದೆ ಎಂದು ಪ್ರಧಾನಿ ಹೇಳಿದ್ದಾರೆ. 'ಸ್ವಾವಲಂಭಿ ಭಾರತ' ಅಭಿಯಾನದ ಸಂಕಲ್ಪವನ್ನು ಒತ್ತು ನೀಡುವ ಉದ್ದೆಶಧಿಂದ ಈ ಪ್ಯಾಕೇಜ್ ನಲ್ಲಿ ಭೂಮಿ, ಕಾರ್ಮಿಕರು ಇತ್ಯಾದಿ ವರ್ಗಗಳನ್ನು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Trending News