ಮೋದಿ ಸರ್ಕಾರದ ಈ ಸ್ಕೀಮ್ ಮೂಲಕ ಮನೆಯಿಂದಲೇ ಬಿಸಿನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ

ದೇಶದ ನಾಗರಿಕರಿಗಾಗಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದ್ದು, ಈ ಯೋಜನೆಗಳ ಮೂಲಕ ನೀವು ಮನೆಯಿಂದಲೇ ನಿಮ್ಮ ಸ್ವಂತ ವ್ಯಾಪಾರ ಆರಂಭಿಸಬಹುದಾಗಿದೆ. ಅಷ್ಟೇ ಅಲ್ಲ ಈ ಯೋಜನೆಗಳ ಪ್ರಕ್ರಿಯೆಯನ್ನು ಸಹ ಸರ್ಕಾರ ತುಂಬಾ ಸುಲಭಗೊಳಿಸಿದೆ.  

Last Updated : May 7, 2020, 12:21 PM IST
ಮೋದಿ ಸರ್ಕಾರದ ಈ ಸ್ಕೀಮ್ ಮೂಲಕ ಮನೆಯಿಂದಲೇ ಬಿಸಿನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ title=

ನವದೆಹಲಿ: ದೇಶದ ನಾಗರಿಕರು ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗ ಸೃಷ್ಟಿಕರ್ತರಾಗಬೇಕು ಎಂಬುದು ಮೋದಿ ಸರ್ಕಾರದ ಪ್ರಮುಖ ಗುರಿಗಳಲ್ಲಿ ಒಂದು. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ. ಇದರಲ್ಲಿ ಜರರ ಕೌಶಲ್ಯ ಅಭಿವೃದ್ಧಿಗೊಳಿಸಿ ಅವರನ್ನು ವ್ಯಾಪಾರ ಮಾಡಲು ಪ್ರೇರೇಪಿಸುವುದು ಕೂಡ ಒಂದು. ನೀವೂ ಕೂಡ ನಿಮ್ಮ ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುತ್ತಿದ್ದರೆ, ಮೋದಿ ಸರ್ಕಾರದ ಈ ಯೋಜನೆಗಳನ್ನು ಬಳಸಿ ಅವುಗಳನ್ನು ಆರಂಭಿಸಬಹುದು.ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ, ಅದರ ಮೂಲಕ ನೀವು ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಮೋದಿ ಸರ್ಕಾರ ಯೋಜನೆಗಳ ಪ್ರಕ್ರಿಯೆಯನ್ನು ಬಹಳ ಸುಲಭಗೊಳಿಸಿದೆ. ವಾಸ್ತವವಾಗಿ, ಯೋಜನೆಗಳು ಯಾವುವು ಎಂದು ತಿಳಿಯೋಣ ...

ಅರುಣ್ ಯೋಜನೆ
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಗುರಿಯನ್ನು ಸುಮಾರು ಐದು ಪಟ್ಟು ಹೆಚ್ಚಿಸಿದ್ದಾರೆ. ಜನರು ತಮ್ಮ ಮನೆಯ ಮೇಲ್ಛಾವಣಿಗಳ ಮೇಲೆ ಸೌರ ಸ್ಥಾವರಗಳನ್ನು ಸ್ಥಾಪಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಅವರು ಸೌರ ಸ್ಥಾವರದಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಸರ್ಕಾರ ಮತ್ತು ವಿದ್ಯುತ್ ಕಂಪನಿಗಳಿಗೆ ಮಾರಾಟ ಮಾಡಬಹುದು. ಈ ಯೋಜನೆಗೆ ಹೇಗೆ ಸೇರಬೇಕು ಮತ್ತು ವ್ಯವಹಾರವನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಅರುಣ್ ಎಂಬ ಮೊಬೈಲ್ ಅಪ್ಲಿಕೇಶನ್‌ನಿಂದ ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನೀವು http://solarrooftop.gov.in/login ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಮನೆಯಿಂದಲೇ ಆರಂಭಿಸಿ ಈ ಆನ್ಲೈನ್ ಬಿಸಿನೆಸ್
ಒಂದು ವೇಳೆ ನೀವು ಮನೆಯಲ್ಲಿ ಕುಳಿತು ವ್ಯಾಪಾರ ಮಾಡಲು ಬಯಸಿದರೆ, ಮೋದಿ ಸರ್ಕಾರವು ಜೆಮ್ (ಸರ್ಕಾರಿ ಇ-ಮಾರುಕಟ್ಟೆ) ಅಂದರೆ ಇ-ಪೋರ್ಟಲ್ ಮೂಲಕ ಆನ್‌ಲೈನ್ ಮಾರುಕಟ್ಟೆಯನ್ನು ಸಿದ್ಧಪಡಿಸಿದೆ. ನಿಮ್ಮ ಮನೆಯಲ್ಲಿಯೇ ಇದ್ದು, ಜಿಎಂನೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನೀವು ಸರ್ಕಾರದೊಂದಿಗೆ ವ್ಯವಹಾರ ಮಾಡಬಹುದು. ಇದಕ್ಕಾಗಿ ನೀವು GeM ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ನಂತರ, ನೀವು ಸರ್ಕಾರಿ ಇಲಾಖೆಗಳ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಬಹುದು. ಇದನ್ನು ಮಾಡಲು, ನೀವು ವಿತರಕರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಬೇಡಿಕೆಗೆ ಅನುಗುಣವಾಗಿ, ನೀವು ಅಲ್ಲಿಂದ ಸರಕುಗಳನ್ನು ಮತ್ತಷ್ಟು ಸರಬರಾಜು ಮಾಡಬಹುದು. ಈ ಆನ್‌ಲೈನ್ ವಹಿವಾಟನ್ನು ಪ್ರಾರಂಭಿಸಲು, ನೀವು https://gem.gov.in/ ಗೆ ಭೇಟಿ ನೀಡಬೇಕು. ಅಲ್ಲಿನ ಸೈನ್ ಅಪ್ ವಿಭಾಗದಲ್ಲಿ ಹಲವು ವಿಕಲ್ಪಗಳಲ್ಲಿ ಒಂದನ್ನು ಆಯ್ಕೆಮಾಡಬಹುದು. ನೇರ ಸಂಪರ್ಕಕ್ಕಾಗಿ, https://mkp.gem.gov.in/registration/signup#!/buyer ಕ್ಲಿಕ್ ಮಾಡಿ.

ಮಹಿಳೆಯರೂ ಕೂಡ ವ್ಯಾಪಾರ ಆರಂಭಿಸಬಹುದು
ಮಹಿಳೆಯರೂ ಕೊ೦ಒದ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ವ್ಯಾಪಾರ ಮಾಡಲು ಮೋದಿ ಸರ್ಕಾರ ಅವಕಾಶ ಕಲ್ಪಿಸದೆ.ಈ ಯೋಜನೆಗೆ ಮಹಿಲಾ ಇ-ಹಾಟ್  ಎಂದು ಹೆಸರಿಸಲಾಗಿದೆ. ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಸಹ ಮಾರಾಟ ಮಾಡಬಹುದು. ಇದಲ್ಲದೆ, ಮಹಿಳೆಯರು ಸರಕುಗಳನ್ನು ತಯಾರಿಸುವ ಮೂಲಕ ಮಾರಾಟ ಮಾಡಬಹುದು. ಈ ವೇದಿಕೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಿದ್ಧಪಡಿಸಿದೆ. ಈ ವೇದಿಕೆಯಲ್ಲಿ, ಮಹಿಳೆಯರು ತಮ್ಮ ನೋಂದಣಿಯನ್ನು ಉಚಿತವಾಗಿ ಮಾಡಬಹುದು ಮತ್ತು ಅವರ ಉತ್ಪನ್ನಗಳನ್ನು ಪ್ರದರ್ಶಿಸಬಹುದು, ಯಾವುದೇ ಮಾರಾಟಗಾರರು ನಿಮ್ಮ ಉತ್ಪನ್ನವನ್ನು ಇಷ್ಟಪಟ್ಟರೆ ಅವರು ನಿಮ್ಮನ್ನು ನೇರವಾಗಿ ಸಂಪರ್ಕಿಸಬಹುದು. ಇತರ ಆನ್‌ಲೈನ್ ಟ್ರೇಡಿಂಗ್ ಪೋರ್ಟಲ್‌ಗಳಂತೆ ನೀವು ಕಮಿಷನ್ ಪಾವತಿಸಬೇಕಾಗಿಲ್ಲ. ಈ ಪೋರ್ಟಲ್‌ಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ http://mahilaehaat-rmk.gov.in/en/join-us/ ಮೇಲೆ ಕ್ಲಿಕ್ಕಿಸಿ.

ಡಿಜಿಟಲ್ ಗಳಿಕೆಗೂ ಅವಕಾಶ ಕಲ್ಪಿಸಲಾಗಿದೆ
ಕಾಲಕಾಲಕ್ಕೆ, ಮೋದಿ ಸರ್ಕಾರ ನನ್ನ ಸರ್ಕಾರಿ ಪೋರ್ಟಲ್‌ನಲ್ಲಿ ವಿಭಿನ್ನ ರಸಪ್ರಶ್ನೆಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುತ್ತದೆ. ಈ ರಸಪ್ರಶ್ನೆಗಳ ಕಾರ್ಯಕ್ರಮದ ಮೂಲಕ ಗಳಿಕೆ ಮಾಡಬಹುದಾಗಿದೆ. ಇದೇ ವೇಳೆ, ಸರ್ಕಾರದ ಡಿಜಿಟಲ್ ಪಾವತಿ ಅಪ್ಲಿಕೇಶನ್ BHIM ಮೂಲಕವೂ ಹಣವನ್ನು ಗಳಿಸಬಹುದು. ಒಬ್ಬ ವ್ಯಕ್ತಿಯನ್ನು ಸೇರಿಸುವ ಮೂಲಕ ಮತ್ತು ಆ ವ್ಯಕ್ತಿಯಿಂದ ಮೂರು ವಹಿವಾಟುಗಳನ್ನು ಮಾಡಿಸುವ ಮೂಲಕ ಒಬ್ಬ ವ್ಯಕ್ತಿಗೆ 10 ರೂಪಾಯಿ ಸಿಗುತ್ತದೆ. ಈ ರೀತಿಯಾಗಿ, ಮಹಿಳೆಯರು ಅಥವಾ ವಿದ್ಯಾರ್ಥಿಗಳು ಪ್ರತಿದಿನ 20 ಜನರನ್ನು ಸೇರಿಸಿದರೆ, ಅವರು 200 ರೂಪಾಯಿಗಳವರೆಗೆ ಗಳಿಸಬಹುದು. ಇದೇ ವೇಳೆ ಅಂಗಡಿ ಮಾಲೀಕರು ತಮ್ಮ ಅಂಗಡಿಯಲ್ಲಿ ಭೀಮ್  ಆ್ಯಪ್ ಅನ್ನು ಬಳಸುವ ಮೂಲಕ ತಮ್ಮ ಖಾತೆಗೆ 25 ರೂಪಾಯಿ ಪಡೆಯಬಹುದಾಗಿದೆ.

Trending News