Kissan Mahapanchayath : ರೈತ ಮಹಾಪಂಚಾಯತ್ ವೇಳೆ ಮುರಿದ ಬಿತ್ತು ವೇದಿಕೆ..!

ಕಿಸಾನ್ ಮಹಾ ಪಂಚಾಯತ್ ನಡೆಯುತ್ತಿದ್ದ ವೇಳೆ ಅಧಿಕ ಜನಸಂದಣಿಯ ಕಾರಣದಿಂದ ವೇದಿಕೆ ಮುರಿದು ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಕೆಲ ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

Written by - Ranjitha R K | Last Updated : Feb 3, 2021, 04:59 PM IST
  • ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಹರಿಯಾಣದ ಜಿಂದ್‌ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌
  • ಅಧಿಕ ಜನಸಂದಣಿಯ ಕಾರಣ ಮುರಿದು ಬಿದ್ದ ಮಹಾಪಂಚಾಯತ್ ವೇದಿಕೆ
  • ರೈತ ಮುಖಂಡ ರಾಕೇಶ್ ಟಿಕೈಟ್ ಸೇರಿ ರೈತರಿಗೆ ಸಣ್ಣಪುಟ್ಟ ಗಾಯ
Kissan Mahapanchayath : ರೈತ ಮಹಾಪಂಚಾಯತ್ ವೇಳೆ ಮುರಿದ ಬಿತ್ತು ವೇದಿಕೆ..! title=
ಮುರಿದು ಬಿದ್ದ ಮಹಾಪಂಚಾಯತ್ ವೇದಿಕೆ (photo Zee News)

ನವದೆಹಲಿ : ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನೆಯನ್ನು(Farmer protest) ಬೆಂಬಲಿಸಿ ಹರಿಯಾಣದ ಜಿಂದ್‌ನಲ್ಲಿ ಬುಧವಾರ ಕಿಸಾನ್ ಮಹಾಪಂಚಾಯತ್‌ (Kissana Maha Panchayath) ಆಯೋಜಿಸಲಾಗಿತ್ತು. ಕಿಸಾನ್ ಮಹಾ ಪಂಚಾಯತ್ ನಡೆಯುತ್ತಿದ್ದ ವೇಳೆ ಅಧಿಕ ಜನಸಂದಣಿಯ ಕಾರಣದಿಂದ ವೇದಿಕೆ ಮುರಿದು ಬಿದ್ದ ಘಟನೆಯೂ ನಡೆದಿದೆ. ಘಟನೆಯಲ್ಲಿ ಕೆಲ ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ರೈತ ಮುಖಂಡ ರಾಕೇಶ್ ಟಿಕೈಟ್ ಗೂ ಸಣ್ಣ ಪುಟ್ಟ ಗಾಯ :  
ವೇದಿಕೆ ಮುರಿದಾಗ, ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ (Rakesh Tikait) ಸೇರಿದಂತೆ ಅನೇಕ ರೈತ ಮುಖಂಡರು ವೇದಿಕೆಯ ಮೇಲಿದ್ದರು.  ವೇದಿಕೆ ಒಮ್ಮಿಂದೊಮ್ಮೆಲೆ ಬಿದ್ದ ಕಾರಣದಿಂದಾಗಿ ರೈತರಿಗೆ (Farmers) ಸಣ್ಣಪುಟ್ಟ ಗಾಯಗಳಾಗಿವೆ.  ವೇದಿಕೆ ಬಿದ್ದ ಹೊರತಾಗಿಯೂ ರಾಕೇಶ್ ಟಿಕೈಟ್  ರೈತರನ್ನು  ಉದ್ದೇಶಿಸಿ ಮಾತನಾಡಿದರು. 

 

ಇದನ್ನೂ ಓದಿ : Red fort ಅನಿರ್ದಿಷ್ಟಾವಧಿ ಬಂದ್ ಮಾಡಿ ASI ಆದೇಶ

ರೈತರನ್ನು ಉದ್ದೇಶಿಸಿ ರಾಕೇಶ್ ಟಿಕೈಟ್  ಮಾತು : 
ಈ ವೇಳೆ, ರೈತರನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕೈಟ್, ನಮ್ಮದು ಕಚೇರಿಯೂ ಬದಲಾಗುವುದಿಲ್ಲ, ವೇದಿಕೆಯೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ರಾಜ ಹೆದರಿದರೆ ಕೋಟೆಯ ಬಾಗಿಲು ಮುಚ್ಚುತ್ತಾನೆ. ಕೋಟೆಗಳಿಂದ ನಮ್ಮನ್ನು ತಡೆಯುವ ಧೈರ್ಯ ಸರ್ಕಾರಕ್ಕಿಲ್ಲ(Government) ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಯುದ್ದದ ವೇಲೆ ಕುದುರೆಗಳನ್ನು ಬದಲಾಯಿಸಲಾಗುವುದಿಲ್ಲ ಎಂದಿದ್ದಾರೆ. ಇದೇ ವೇಳೆ ನೀವು ದೆಹಲಿಗೆ (Delhi) ಹೋಗುವ ಅಗತ್ಯವಿಲ್ಲ ನಿಮ್ಮ ರೋಷವನ್ನು ನಮಗೆ ನೀಡಿ ಸಾಕು ಎಂದು ರಾಕೇಶ್ ರೈತರಿಗೆ ಕರೆ ನೀಡಿದರು. 

70 ದಿನಗಳಿಂದ ನಡೆಯುತ್ತಿರುವ ರೈತ ಪ್ರತಿಭಟನೆ:
ಕೃಷಿ ಕಾನೂನು (Farm law) ವಿರೋಧಿಸಿ ಕಳೆದ 70 ದಿನಗಳಿಂದ ರೈತರು ಪ್ರತಿಭಟನೆ (Farmer protest) ನಡೆಸುತ್ತಿದ್ದಾರೆ. ಮೂರೂ ಕಾನೂನುಗಳನ್ನು ಒತ್ತಾಯಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ. ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿ ನೀಡಬೇಕು ಎನ್ನುವುದು ಕೂಡಾ ರೈತರ ಬೇಡಿಕೆಯಾಗಿದೆ.

ಇದನ್ನೂ ಓದಿ : Farmer Protest: ಅಕ್ಟೋಬರ್ ವರೆಗೂ ಮುಂದುವರೆಯಲಿದೆ ದೆಹಲಿ ರೈತರ ಪ್ರತಿಭಟನೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News