ಕಾರ್ತಿಕ ಮಾಸ ಎಫೆಕ್ಟ್‌ : ಶ್ರೀಶೈಲ ಮಲ್ಲಯ್ಯನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ..!

ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಶೈಲ ಮಹಾಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಸುಮಾರು ಒಂದು ತಿಂಗಳ ಕಾಲ ಉತ್ಸವಗಳು ಅದ್ದೂರಿಯಾಗಿ ನಡೆದವು. ಕಾರ್ತಿಕ ಮಾಸವನ್ನು ಆಚರಿಸಲು ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಮೂಲ ದೈವ ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ದರ್ಶನ ಪಡೆದಿದ್ದಾರೆ.

Written by - Krishna N K | Last Updated : Nov 26, 2022, 10:17 AM IST
  • ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಶೈಲ ಮಹಾಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ
  • ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ
  • ರೂ. 30 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ
ಕಾರ್ತಿಕ ಮಾಸ ಎಫೆಕ್ಟ್‌ : ಶ್ರೀಶೈಲ ಮಲ್ಲಯ್ಯನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ..! title=

ಆಂಧ್ರಪ್ರದೇಶ : ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀಶೈಲ ಮಹಾಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಸುಮಾರು ಒಂದು ತಿಂಗಳ ಕಾಲ ಉತ್ಸವಗಳು ಅದ್ದೂರಿಯಾಗಿ ನಡೆದವು. ಕಾರ್ತಿಕ ಮಾಸವನ್ನು ಆಚರಿಸಲು ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಮೂಲ ದೈವ ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ದರ್ಶನ ಪಡೆದಿದ್ದಾರೆ.

ಇನ್ನು ಕಾರ್ತಿಕ ಮಾಸ ಸಮಾರಂಭದಲ್ಲಿ ಶ್ರೀಶೈಲಂ ದೇವಸ್ತಾನಕ್ಕೆ ಭಾರಿ ಆದಾಯ ಬಂದಿದೆ. ದರ್ಶನ ಟಿಕೆಟ್, ಆರ್ಜಿತ ಸೇವೆ, ಲಡ್ಡು ಪ್ರಸಾದ, ಟೋಲ್ ಗೇಟ್, ಪ್ರಕಟಣೆಗಳ ಮಾರಾಟ, ತುಲಾಭಾರ, ಕ್ಷೌರ, ಆನ್ ಲೈನ್ ಸೇವೆ, ಹುಂಡಿ ಆದಾಯ ಸೇರಿದಂತೆ ಇತ್ಯಾದಿಗಳ ಮೂಲಕ ರೂ. 30 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: 26/11 Mumbai Attackಗೆ 14 ವರ್ಷ: ಆ ಕರಾಳ 4 ದಿನ ಹೇಗಿತ್ತು? ಏನಾಗಿತ್ತು? ಇಲ್ಲಿದೆ ಕಂಪ್ಲೀಟ್ ವರದಿ

ಈ ಕುರಿತು ಮಾಹಿತಿ ನೀಡಿರುವ ದೇವಸ್ತಾನ ಇಒ ಎಸ್.ಲವಣ್ಣ, ಶ್ರೀಶೈಲ ಮಲ್ಲಣ್ಣನ ಕಾರ್ತಿಕ ಮಾಸದ ಆದಾಯ 30,89,27,503 ರೂ. ಕಳೆದ ವರ್ಷಕ್ಕಿಂತ ರೂ.11.02 ಕೋಟಿ ಆದಾಯ ಹೆಚ್ಚಾಗಿದೆ. ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಬಂದಿರುವುದು ಇದೇ ಮೊದಲು ಎಂಬುದು ಇಲ್ಲಿ ಗಮನಾರ್ಹ. ಮಲ್ಲಣ್ಣನ ಕ್ಷೇತ್ರದಲ್ಲಿ ಕಾರ್ತಿಕ ಮಾಸೋತ್ಸವವನ್ನು ಅಕ್ಟೋಬರ್ 26 ರಿಂದ ನವೆಂಬರ್ 23 ರವರೆಗೆ ಆಚರಿಸಲಾಯಿತು. ಕಾರ್ತಿಕ ಮಾಸದ ಕೊನೆಯ ದಿನದಂದು ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ತೆಲುಗು ರಾಜ್ಯಗಳಲ್ಲದೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಶ್ರೀಶೈಲ ಮಲ್ಲಿಕಾರ್ಜುನ ಅವರು ಸಾಮಾನ್ಯ ಆದಾಯ ರೂ.19,95,73,883, ಹುಂಡಿ ಕಾಣಿಕೆ ಮೂಲಕ ರೂ.6,73,79,922, ಆನ್‌ಲೈನ್ ಮೂಲಕ ರೂ.3,25,68,719, ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೂಲಕ ರೂ.94,04,979 ಒಟ್ಟು ಆದಾಯ ಬಂದಿದೆ. ರೂ.8,08,928, ಪ್ರದೋಷಕಾಲದ ಸೇವೆಯಿಂದ ರೂ.22,35,324 ಆದಾಯ ಬಂದಿದೆ ಎಂದು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಮಂಡಳಿಯ ಇಓ ಲವಣ್ಣ ಮಾಹಿತಿ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News