Jute Coats For Cows: ಚಳಿಯಿಂದ ಬಚಾವಾಗಲು ಹಸುಗಳು ಧರಿಸಲಿವೆ Coat, ಸರ್ಕಾರದ ವಿಶಿಷ್ಠ ಉಪಕ್ರಮ

ಉತ್ತರ ಪ್ರದೇಶದಲ್ಲಿ ಹಸು ಅಥವಾ ಗೋವುಗಳಿಗೆ ವಿಪರೀತ ಚಳಿಯಿಂದ ಪಾರಾಗಲು ವಿಶೇಷ ರೀತಿಯ ಕೊಟ್ ಸಿಗಲಿವೆ.

Last Updated : Dec 3, 2020, 06:14 PM IST
  • ವಿಪರೀತ ಹವಾಮಾನ ಬಡವರು ಹಾಗೂ ಪಶುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
  • ಹೀಗಾಗಿ ವಿವಿಧ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಕೂಡ ಬಡವರಿಗೆ ಆಶ್ರಯ ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡುತ್ತವೆ.
  • ಆದರೆ, ಪ್ರಾಣಿಗಳ ಗತಿ ಏನು? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.
Jute Coats For Cows: ಚಳಿಯಿಂದ ಬಚಾವಾಗಲು ಹಸುಗಳು ಧರಿಸಲಿವೆ Coat, ಸರ್ಕಾರದ ವಿಶಿಷ್ಠ ಉಪಕ್ರಮ title=

Jute Coats For Cows:ವಿಪರೀತ ಹವಾಮಾನ ಬಡವರು ಹಾಗೂ ಪಶುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ವಿವಿಧ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಕೂಡ ಬಡವರಿಗೆ ಆಶ್ರಯ ಹಾಗೂ ಇತರೆ ವ್ಯವಸ್ಥೆಗಳನ್ನು ಮಾಡುತ್ತವೆ. ಆದರೆ, ಪ್ರಾಣಿಗಳ ಗತಿ ಏನು? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

ಇದನ್ನು ಓದಿ- ವಿರೋಧ ಪಕ್ಷದವರಿಗೆ ಭಾರತೀಯ ಸಂಸ್ಕೃತಿಯ ಜ್ಞಾನವಿಲ್ಲ: ಯೋಗಿ ಆದಿತ್ಯನಾಥ್

ಆದರೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ತೆರೆದ ಆಗಸದ ಕೆಳಗೆ ಅಲೆದಾಡುವ ಹಸುಗಳನ್ನು ಚಳಿಯಿಂದ ರಕ್ಷಿಸಲು ಒಂದು ವಿಶಿಷ್ಠ ಉಪಕ್ರಮ ಜಾರಿಗೆ ತಂದಿದೆ. ಉತ್ತರ ಪ್ರದೇಶದಲ್ಲಿ ಹಸು ಅಥವಾ ಗೋವುಗಳಿಗೆ ವಿಪರೀತ ಚಳಿಯಿಂದ ಪಾರಾಗಲು ವಿಶೇಷ ರೀತಿಯ ಕೊಟ್ (Coat) ಸಿಗಲಿವೆ.

ಪಶು ಸಂಗೋಪನೆ ಇಲಾಖೆಯ ಜವಾಬ್ದಾರಿ (Responsibility Of Animal Husbandary Department)
ಈ ಕುರಿತು ಎಲ್ಲಾ ಜಿಲ್ಲೆಗಳ ಪಶು ಚಿಕಿತ್ಸಕ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿರುವ ರಾಜ್ಯ ಪಶುಸಂಗೋಪನಾ ಇಲಾಖೆ ಚಳಿಗಾಲದ ತಿಂಗಳಿನಲ್ಲಿ ಗೋಶಾಲೆಗಳಲ್ಲಿರುವ ಹಸುಗಳನ್ನು ಚಳಿಯಿಂದ ರಕ್ಷಿಸಲು ಉಚಿತ ಕ್ರಮಗಳನ್ನು ಕೈಗೊಳ್ಳಲು ಹೇಳಿದೆ.

ಇದನ್ನು ಓದಿ- ಉತ್ತರಪ್ರದೇಶದಲ್ಲಿ ಅಕ್ರಮ ಮದ್ಯ ವ್ಯಾಪಾರದಲ್ಲಿ ತೊಡಗಿರುವವವರಿಗೆ ಸಿಎಂ ಯೋಗಿ ಎಚ್ಚರಿಕೆ!

ಜೂಟ್ ನಿಂದ ಕೊಟ್ ಗಳು ಸಿದ್ಧಗೊಳ್ಳಲಿವೆ (Jute Coats For Cows)
ಸರ್ಕಾರದ ನಿರ್ದೇಶನದಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಗೋವುಗಳಿಗೆ ಸೇಣಬಿನಿಂದ ತಯಾರಿಸಲಾಗಿರುವ ಕೊಟ್ ಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಇದರಿಂದ ಹಸುಗಳು ಚಳಿಯಿಂದ ಬಚಾವಾಗಲಿವೆ. ಅಷ್ಟೇ ಅಲ್ಲ ಗೋಶಾಲೆಗಳಿಗೆ  ದಪ್ಪ ಪಾಲಿಥೀನ್ ಪರದೆ ಅಥವಾ ತಾಡಪತ್ರಿ ಹೊದಿಸಲಾಗುತ್ತಿದೆ. ಇದರಿಂದ ಚಳಿ ಒಳಗೆ ಪ್ರವೇಶಿಸುವುದಿಲ್ಲ.

ದಪ್ಪ ಪರದೆಗಳು ಹಾಗೂ ಕವರ್ ತಯಾರಿಸಲು ಸೆಣಬಿನ ಚೀಲಗಳು ಒಂದುಗೂಡಿಸಿ ಹೊಲಿಯಲಾಗುತ್ತಿದೆ. ಹಸುಗಳ ಕೊಟ್ ತಯಾರಿಕೆಗೆ ಅದೇ ಜೂಟ್ ಚೀಲಗಳ ಬಳಕೆ ಮಾಡಲಾಗುವುದು. ಇವುಗಳನ್ನು ಹಸುಗಳಿಗೆ ಧರಿಸಿ ಅವುಗಳನ್ನು ಚಳಿಯಿಂದ ಕಾಪಾಡಲಾಗುವುದು. ಜಿಲ್ಲೆಯ ಪೂರೈಕೆ ವಿಭಾಗ ಈ ಸೆಣಬಿನ ಚೀಲಗಳನ್ನು ಪೂರೈಸಲಿದೆ.

ಇದನ್ನು ಓದಿ-ಬಿಜೆಪಿ ಗೆಲ್ಲಿಸಿದ್ರೆ ಹೈದರಾಬಾದ್ ಗೆ ಭಾಗ್ಯನಗರ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್

ಕೆಲ ಜಿಲ್ಲೆಗಳಲ್ಲಿ ಗ್ರಾಮಪಂಚಾಯಿತಿಗಳು ಮನರೆಗಾ ಅಡಿ ಸಿಕ್ಕ ಬಜೆಟ್ ಅನ್ನು ಈ ಜೂಟ್ ಕೋಟ್ ತಯಾರಿಸಲು ಬಳಸಲಿವೆ ಹಾಗೂ ಗೋಶಾಲೆಗಳಿಗೆ ಪಾಲಿಥಿನ್ ಪರದೆ ಹಾಗೂ ಜೂಟ್ ಕವರ್ ಹೊದಿಸಲಾಗುವುದು.

Trending News