ಪಿ.ಚಿದಂಬರಂ ಭೇಟಿಗೆ ತಿಹಾರ್ ಜೈಲಿಗೆ ತೆರಳಿದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಭೇಟಿ ಮಾಡಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್  ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ತಿಹಾರ್ ಜೈಲಿಗೆ ತೆರಳಲಿದ್ದಾರೆ.

Last Updated : Sep 23, 2019, 10:29 AM IST
ಪಿ.ಚಿದಂಬರಂ ಭೇಟಿಗೆ ತಿಹಾರ್ ಜೈಲಿಗೆ ತೆರಳಿದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ title=

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಭೇಟಿ ಮಾಡಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್  ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ತಿಹಾರ್ ಜೈಲಿಗೆ ತೆರಳಲಿದ್ದಾರೆ.

ಆದರೆ, ಚಿದು ಮತ್ತು ಕಾಂಗ್ರೆಸ್ ನಾಯಕರ ನಡುವಿನ ಭೇಟಿಗೆ ಯಾವುದೇ ವಿಶೇಷ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದು ತಿಹಾರ್ ಜೈಲಿನ ಮೂಲಗಳು ಝೀ ನ್ಯೂಸ್‌ಗೆ ತಿಳಿಸಿವೆ. 

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸೆ.5 ರಿಂದ ಜೈಲಿನಲ್ಲಿರುವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿ ಸೆ.19ಕ್ಕೆ ಮುಕ್ತಾಯಗೊಂಡಿತ್ತಾದರೂ ಮತ್ತೆ ನ್ಯಾಯಾಲಯ 14 ದಿನಗಳ ಕಾಲ ಬಂಧನವನ್ನು ವಿಸ್ತರಿಸಿದೆ. ಅದರಂತೆ ಅಕ್ಟೋಬರ್ 3ಕ್ಕೆ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಳ್ಳಲಿದೆ.
 

Trending News