ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ

ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ, ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು.

Written by - Yashaswini V | Last Updated : Oct 21, 2020, 12:00 PM IST
  • ಸಾರ್ವಜನಿಕರ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ನಿಯಮಗಳನ್ನು ಆಗಾಗ್ಗೆ ತಿದ್ದುಪಡಿ ಮಾಡುತ್ತದೆ.
  • ನಿಮ್ಮ ಮಾಹಿತಿಯನ್ನು ಆಧಾರ್ ಕಾರ್ಡ್‌ (Aadhaar Card)ನಲ್ಲಿ ನವೀಕರಿಸಬೇಕಾದರೆ, ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ title=

ನವದೆಹಲಿ : ಸಾರ್ವಜನಿಕರ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ನಿಯಮಗಳನ್ನು ಆಗಾಗ್ಗೆ ತಿದ್ದುಪಡಿ ಮಾಡುತ್ತದೆ. ಹಾಗಾಗಿ ನಿಮ್ಮ ಮಾಹಿತಿಯನ್ನು ಆಧಾರ್ ಕಾರ್ಡ್‌ (Aadhaar Card)ನಲ್ಲಿ ನವೀಕರಿಸಬೇಕಾದರೆ, ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸದಿದ್ದರೆ ನಿಮಗೆ ಅನೇಕ ಸೇವೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್‌ನಲ್ಲಿ ತಕ್ಷಣ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು. ಯುಐಡಿಎಐ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಒಂದು ಮಾರ್ಗವನ್ನು ನೀಡಿದೆ.

ಹೈಟೆಕ್ ಆದ 'Aadhaar'

ಯುಐಡಿಎಐ (ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ನೀವು ಆಧಾರ್‌ನಲ್ಲಿ ನಿಮ್ಮ ಇತ್ತೀಚಿನ ಮೊಬೈಲ್ ಸಂಖ್ಯೆಯನ್ನು ಇನ್ನೂ ನವೀಕರಿಸದಿದ್ದರೆ ನೀವು ಅದನ್ನು ಯಾವುದೇ ದಾಖಲೆಗಳಿಲ್ಲದೆ ನವೀಕರಿಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹತ್ತಿರದ ಯಾವುದೇ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ವಿನಂತಿಯನ್ನು ನೀಡಿ.

ಅಪ್ಡೇಟ್ ಮಾಡದಿದ್ದರೆ ಎದುರಿಸಬೇಕಾಗುವ ತೊಂದರೆಗಳು:
ಯಾವುದೇ ಪರಿಶೀಲನಾ ಪ್ರಕ್ರಿಯೆಗೆ ನೀವು ಆಧಾರ್ (Aadhaar) ಸಂಖ್ಯೆಯನ್ನು ಬಳಸಿದರೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ಈ ಒಟಿಪಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆಧಾರ್‌ನಲ್ಲಿ  ನಿಮ್ಮ ತಪ್ಪು ಅಥವಾ ಹಳೆಯ ಸಂಖ್ಯೆ ನೀಡಿದ್ದರೆ, ನಿಮಗೆ ಒಟಿಪಿ ಸಿಗುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಇದಲ್ಲದೆ ನಾವು ಯಾವುದೇ ಡಾಕ್ಯುಮೆಂಟ್‌ಗೆ ಆಧಾರ್ ಅನ್ನು ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ.

ಈಗ ಆಧಾರ್‌ನಲ್ಲಿ ಉಚಿತ ಅಪ್ಡೇಟ್ಗೆ ಬ್ರೇಕ್, ಎಷ್ಟು ವೆಚ್ಚವಾಗಲಿದೆ ಎಂದು ತಿಳಿಯಿರಿ

ಸಂಖ್ಯೆಯನ್ನು ಕೇವಲ 50 ರೂಪಾಯಿಗಳಿಗೆ ನವೀಕರಿಸಲಾಗುತ್ತದೆ:
ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೀವು ಆಧಾರ್ ಅನ್ನು ಲಿಂಕ್ ಮಾಡಲು ಬಯಸಿದರೆ ನೀವು ನಿಮ್ಮ ಹತ್ತಿರವಿರುವ ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಇಲ್ಲಿ ನೀವು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. 

ಈ ಸಂಖ್ಯೆಯನ್ನು ಸಂಪರ್ಕಿಸಬಹುದು:-
ಆಧಾರ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನೀವು ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಬಹುದು. ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನಿಮ್ಮ ದೂರು ಅಥವಾ ಸಮಸ್ಯೆಯನ್ನು ಇ-ಮೇಲ್ ಮೂಲಕ help@uidai.gov.in ಗೆ ಬರೆಯಬಹುದು.  ಹೀಗೆ ಮಾದುವುದರಿಂದ ಆಧಾರ್ ಕಾರ್ಡಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ಯುಐಡಿಎಐ ಪ್ರಯತ್ನಿಸುತ್ತದೆ.

Trending News