ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು!

ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು ಕಾಣಿಸಿಕೊಂಡಿದೆ

Last Updated : Aug 2, 2018, 04:05 PM IST
ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು! title=

ಮುಂಬೈ: ಇದುವರೆಗೂ ಮನೆಯ ಹಿತ್ತಲಿನಲ್ಲಿ, ಮರದಲ್ಲಿ ಅಷ್ಟೇ ಏಕೆ, ಕಾರಿನ ಬಾನೆಟ್, ಬೈಕಿನ ಇಂಜಿನ್, ಹೆಂಚಿನ ಮನೆಯ ಮೇಲ್ಚಾವಣಿಯಲ್ಲಿ ಕಂಡುಬರುತ್ತಿದ್ದ ಹಾವು ಇಂದು ಕಂಡಿದ್ದು ಎಲ್ಲಿ ಗೊತ್ತೇ? ನೂರಾರು ಪ್ರಯಾಣಿಕರು ಇದ್ದ ರೈಲಿನಲ್ಲಿ! ಸುಳ್ಳು ಸುದ್ದಿ ಅನಿಸುತ್ತಿದೆಯೇ? ಆದರೆ ಇಂದು ಖಂಡಿತಾ ಸತ್ಯ.

ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು ಕಾಣಿಸಿಕೊಂಡಿದೆ. ಬೆಳಿಗ್ಗೆ 8.30ಕ್ಕೆ ಥಾಣೆ ನಿಲ್ದಾಣದಿಂದ ಹೊರಟ ತಿಥ್ ವಾಲಾ-ಸಿಎಸ್ಎಂಟಿ ರೈಲಿನ ಕೊನೆಯ ಫಸ್ಟ್ ಕ್ಲಾಸ್ ಕೋಚ್ನಲ್ಲಿ ಸುಮಾರು 2 ಅಡಿ ಉದ್ದದ ಹಸಿರು ಹಾವು ಪ್ಯಾನಿನಲ್ಲಿ ಸುತ್ತಿಕೊಂಡಿದ್ದು ಕಂಡು ಜನ ಹೌಹಾರಿದರು. ಕೂಡಲೇ ರೈಲಿನ ತುರ್ತು ನಿಲುಗಡೆ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಪ್ರಯಾಣಿಕರ ಗಲಾಟೆಯಿಂದ ಹಾವೂ ಕೂಡ ಹೆದರಿ ರೈಲಿನಿಂದ ಹೊರಹೋಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 
 

Trending News