ಸ್ಮೃತಿ ಇರಾನಿ ಡಿಗ್ರಿ ವಿವಾದ ; ಇದು ಗಂಭೀರ ವಿಷಯ, ಅವರ ನಾಮಪತ್ರ ರದ್ದುಪಡಿಸಿ -ಕಾಂಗ್ರೆಸ್

ಚುನಾವಣಾ ಆಯೋಗಕ್ಕೆ ಸ್ಮೃತಿ ಇರಾನಿ ಅಫಿದಾವಿತ್ತನಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಅವರ ಚುನಾವಣಾ ನಾಮಪತ್ರವನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

Last Updated : Apr 12, 2019, 06:25 PM IST
ಸ್ಮೃತಿ ಇರಾನಿ ಡಿಗ್ರಿ ವಿವಾದ ; ಇದು ಗಂಭೀರ ವಿಷಯ, ಅವರ ನಾಮಪತ್ರ ರದ್ದುಪಡಿಸಿ -ಕಾಂಗ್ರೆಸ್ title=

ನವದೆಹಲಿ: ಚುನಾವಣಾ ಆಯೋಗಕ್ಕೆ ಸ್ಮೃತಿ ಇರಾನಿ ಅಫಿದಾವಿತ್ತನಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ಅವರ ಚುನಾವಣಾ ನಾಮಪತ್ರವನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ "ಇದು ತಮಾಷೆ ಅಲ್ಲ, ಗಂಭೀರ ವಿಷಯ, ಜನರು ಮೂರ್ಖರಾಗುತ್ತಾರೆ.ಇದು ಭ್ರಷ್ಟ ಅಭ್ಯಾಸ, ಆದ್ದರಿಂದ ಅವರ ನಾಮ ನಿರ್ದೇಶನವನ್ನು ರದ್ದುಗೊಳಿಸಬೇಕು.ಅವರು ಪ್ರಜಾಪ್ರಭುತ್ವವನ್ನು ಮೋಸಗೊಳಿಸಿರುವವರು ಚುನಾಯಿತರಾಗುವ ಹಕ್ಕನ್ನು ಹೊಂದಿದ್ದಾರೆಯೇ? ಬಿ.ಎ., ಬಿಕಾಂ , ಯಾಲೆ ... ಮೋದಿ ಜಿ ರಾಷ್ಟ್ರವನ್ನು ನಂತರ ಉಳಿಸಿರುವಂತೆ, ಮೊದಲು ನಿಮ್ಮ ಮತ್ತು ಸ್ಮೃತಿ ಇರಾನಿಯವರ ಡಿಗ್ರಿಯನ್ನು ತಿಳಿಸಿರಿ" ಎಂದು ಸವಾಲು ಹಾಕಿದ್ದಾರೆ. 

ನಿನ್ನೆ ಸ್ಮೃತಿ ಇರಾನಿ ತನ್ನ ಮೂರು ವರ್ಷಗಳ ಪದವಿ ಕೋರ್ಸ್ ಪೂರ್ಣಗೊಂಡಿಲ್ಲ ಎಂದು ತಮ್ಮ ಮತ ಪ್ರಮಾಣ ಪತ್ರದಲ್ಲಿ ಘೋಷಿಸಿದ್ದರು.ಅವರು 2017 ರಲ್ಲಿ ರಾಜ್ಯಸಭೆಗೆ ಅಫಿಡವಿಟ್ನಲ್ಲಿ ಇದೇ ಘೋಷಣೆ ಮಾಡಿದ್ದಾರೆ. ಆದರೆ 2014 ರ ಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಅಮೇಥಿಯಿಂದ ಸ್ಪರ್ಧಿಸಿದಾಗ ಅವರು "ಬ್ಯಾಚುಲರ್ ಆಫ್ ಕಾಮರ್ಸ್ ಪಾರ್ಟ್ -1, ಓಪನ್ ಲರ್ನಿಂಗ್ (ಕರ್ಸ್ಪಾಂಡೆನ್ಸ್) ಸ್ಕೂಲ್ ಆಫ್ ದೆಹಲಿ 1994" ಎಂದು ಹೇಳಿದ್ದಾರೆ.

ಇನ್ನು 2004 ರಲ್ಲಿ ಅವರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಿರುದ್ಧ ದೆಹಲಿಯ ಚಾಂದನಿ ಚೌಕದಿಂದ ಸ್ಪರ್ಧಿಸಿದಾಗ ಅವರ ಅಫಿಡವಿಟ್ ನಲ್ಲಿ ಬಿ.ಎ. 1996, ದೆಹಲಿ ವಿಶ್ವವಿದ್ಯಾಲಯ (ಸ್ಕೂಲ್ ಆಫ್ ಕರೆಸ್ಪಾಂಡೆನ್ಸ್) ಎಂದು  ಹೇಳಿಕೊಂಡಿದ್ದರು.

Trending News