ಮುಂಬೈ ತಾರಾಪುರ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ, 6 ಜನರ ಸಾವು

ಮುಂಬೈ ಬಳಿಯ ತಾರಾಪುರ ವಲಯದ ರಾಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ಘಟಕದಲ್ಲಿ ಉತ್ಪಾದನೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

Last Updated : Jan 11, 2020, 11:20 PM IST
ಮುಂಬೈ ತಾರಾಪುರ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ, 6 ಜನರ ಸಾವು  title=

ನವದೆಹಲಿ: ಮುಂಬೈ ಬಳಿಯ ತಾರಾಪುರ ವಲಯದ ರಾಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಕನಿಷ್ಠ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಮಯದಲ್ಲಿ ಘಟಕದಲ್ಲಿ ಉತ್ಪಾದನೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ  ಬೋಯಿಸಾರ್‌ನ ಎಂಎಸ್‌ಇಡಿಸಿಎಲ್‌ನ ಡೆಪ್ಯೂಟಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಲಕ್ಷ್ಮಣ್ ರಾಥೋಡ್ 'ಸುಮಾರು 1900 ಗಂಟೆಗೆ ನಮಗೆ ಕರೆ ಬಂತು, ಈ ಕಂಪನಿಯ ಅಲ್ಯೂಮಿನಿಯಂ ಶೀಟ್ ಆ ಪ್ರದೇಶದ ಕೋಲ್ವಾಡೆ 11 ಕೆವಿ (ಕಿಲೋ ವೋಲ್ಟ್) ಫೀಡರ್‌ನಲ್ಲಿ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದ ನಂತರ ಮತ್ತು ಇದರ ಪರಿಣಾಮವಾಗಿ, ಯುನಿಟ್ ಬಳಿ ಇರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಪವರ್ ಟ್ರಿಪ್ಪಿಂಗ್ ಕಂಡುಬಂದಿದೆ.

'ವಿದ್ಯುತ್ ಸ್ವಯಂಚಾಲಿತವಾಗಿ ಸ್ಥಗಿತಗೊಂಡಿತು ಮತ್ತು ಸುರಕ್ಷತಾ ಕ್ರಮವಾಗಿ ನಾವು ಎನ್ ವಲಯ ಫೀಡರ್ನ ವಿದ್ಯುತ್ ಸರಬರಾಜನ್ನು ಸಹ ಆಫ್ ಮಾಡಿದ್ದೇವೆ ಮತ್ತು ಇದರ ಪರಿಣಾಮವಾಗಿ ಸುಮಾರು 200 ಘಟಕಗಳಿಗೆ ವಿದ್ಯುತ್ ಇಲ್ಲ ಎಂದು ಅವರು ಹೇಳಿದರು.

ಬೋಯಿಸಾರ್ ಎಂಐಡಿಸಿ ಅಗ್ನಿಶಾಮಕ ದಳ ಮತ್ತು ಪಾಲ್ಘರ್ ನಾಗರಿಕ, ತಾರಾಪುರ ಪರಮಾಣು ವಿದ್ಯುತ್ ಕೇಂದ್ರದ ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಆಗಮಿಸಿವೆ ಎಂದು ರಾಥೋಡ್ ಹೇಳಿದ್ದಾರೆ.ಈಗ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಕಂಪನಿಯು ಅಮೋನಿಯಂ ನೈಟ್ರೇಟ್ ಅನ್ನು ತಯಾರಿಸುತ್ತದೆ ಮತ್ತು ಪಾಲ್ಘರ್ ಮತ್ತು ದಹನು ಗ್ರಾಮಗಳ ಸಮೀಪದಲ್ಲಿ 25 ಕಿ.ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ.

Trending News