ಚೆನ್ನೈ: ತಿರುಚಿರಾಪಲ್ಲಿಯಿಂದ ಹೊರಟಿದ್ದ ಸಿಂಗಪೂರ್ ಖಾಸಗಿ ವಿಮಾನವು ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡ್ ಆಗಿರುವ ಘಟನೆ ಸೋಮವಾರ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನವು ಸುರಕ್ಷಿತವಾಗಿ ಇಳಿಯಿತು. ಈ ಘಟನೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಎಲ್ಲಾ 170 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ಅವರು ಹೇಳಿದರು. ವಿಮಾನವು ಇನ್ನೂ ಭಾರತೀಯ ವಾಯುಪ್ರದೇಶದಲ್ಲಿರುವಾಗಲೇ ವಿಮಾನದಲ್ಲಿ 'ಸ್ಪಾರ್ಕ್' ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸ್ಪಾರ್ಕ್' ಕಂಡ ತಕ್ಷಣ, ಪೈಲಟ್ಗಳು ತುರ್ತು ಲ್ಯಾಂಡಿಂಗ್ಗಾಗಿ ಚೆನ್ನೈ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದರು. ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡಲಾಯಿತು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಟ್ಯಾಂಡ್ಬೈ ಮೇಲೆ ಇರಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಂತರ ಪ್ರಯಾಣಿಕರಿಗೆ ನಗರದ ಹೋಟೆಲ್ಗಳಲ್ಲಿ ವಸತಿ ಸೌಕರ್ಯ ಒದಗಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.