Sindhu Netra : ಚೀನಾ, ಪಾಕ್, ಸಪ್ತಸಾಗರ, ಸಮಸ್ತ ಹಿಮಾಲಯದ ಮೇಲೆ ಭಾರತದ`ನಿಗೂಢ ಕಣ್ಣು'

ಭಾರತ ಭಾನುವಾರ ಪಿಎಸ್ ಎಲ್ ವಿ  51 ಲಾಂಚರ್ ಮೂಲಕ 18 ಉಪಗ್ರಹಗಳನ್ನು ಕಕ್ಷೆಗೆ ರವಾನಿಸಿದೆ. ಭಾರತದ ಸೇನೆ ಆಕಾಶದಲ್ಲಿಟ್ಟುರುವ ರಹಸ್ಯ ಕಣ್ಣು  ಈಗ ಚೀನಾ, ಲಡಾಕ್, ಪಾಕಿಸ್ತಾನ, ಹಿಮಾಲಯ, ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ, ದಕ್ಷಿಣಾ ಚೀನಾ ಸಾಗರ, ಬಂಗಾಲ ಕೊಲ್ಲಿಯನ್ನು ಸೂಕ್ಷವಾಗಿ ಗಮನಿಸುತ್ತಿದೆ.   

Written by - Ranjitha R K | Last Updated : Mar 1, 2021, 10:58 AM IST
  • ವೈರಿಗಳ ಮೇಲೆ ಆಕಾಶದಲ್ಲೇ ಕಣ್ಣಿಟ್ಟಿದೆ ಭಾರತೀಯ ಸೇನೆ
  • ಚೀನಾ, ಲಡಾಕ್, ಪಾಕಿಸ್ತಾನ, ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ, ದಕ್ಷಿಣಾ ಚೀನಾ ಸಾಗರ, ಬಂಗಾಲ ಕೊಲ್ಲಿಯನ್ನು ಸೂಕ್ಷವಾಗಿ ಗಮನಿಸುತ್ತಿದೆ.
  • ಇಲ್ಲಾಗುವ ಅತ್ಯಂತ ಸಣ್ಣ ಬದಲಾವಣೆ ಕೂಡಾ ಸೇನೆಯ ಹೆಡ್ ಕ್ವಾಟರ್ಸ್ ಮುಟ್ಟುತ್ತದೆ. ಇದಕ್ಕೆಲ್ಲಾ ಕಾರಣ `ಸಿಂಧು ನೇತ್ರ'..!
Sindhu Netra : ಚೀನಾ, ಪಾಕ್, ಸಪ್ತಸಾಗರ, ಸಮಸ್ತ ಹಿಮಾಲಯದ ಮೇಲೆ ಭಾರತದ`ನಿಗೂಢ ಕಣ್ಣು' title=
ವೈರಿಗಳ ಮೇಲೆ ಆಕಾಶದಲ್ಲೇ ಕಣ್ಣಿಟ್ಟಿದೆ ಭಾರತೀಯ ಸೇನೆ (file photo)

ನವದಹೆಲಿ : ಭಾರತದ ಸೇನೆ ಆಕಾಶದಲ್ಲಿಟ್ಟುರುವ ರಹಸ್ಯ ಕಣ್ಣು (Spy Satellite) ಈಗ ಚೀನಾ, ಲಡಾಕ್, ಪಾಕಿಸ್ತಾನ, ಹಿಮಾಲಯ, ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ, ದಕ್ಷಿಣಾ ಚೀನಾ ಸಾಗರ, ಬಂಗಾಲ ಕೊಲ್ಲಿಯನ್ನು ಸೂಕ್ಷವಾಗಿ ಗಮನಿಸುತ್ತಿದೆ. ಇಲ್ಲಾಗುವ ಅತ್ಯಂತ ಸಣ್ಣ ಬದಲಾವಣೆ ಕೂಡಾ ಸೇನೆಯ ಹೆಡ್ ಕ್ವಾಟರ್ಸ್ ಮುಟ್ಟುತ್ತದೆ. ಇದಕ್ಕೆಲ್ಲಾ ಕಾರಣ `ಸಿಂಧು ನೇತ್ರ'..!

ಏನಿದು ಸಿಂಧುನೇತ್ರ..!?
ನಿಮಗೆ ಗೊತ್ತಿದೆ. ಭಾರತ ಭಾನುವಾರ ಪಿಎಸ್ ಎಲ್ ವಿ  51 ಲಾಂಚರ್ ಮೂಲಕ 18 ಉಪಗ್ರಹಗಳನ್ನು ಕಕ್ಷೆಗೆ ರವಾನಿಸಿದೆ. ಈ ಪಟ್ಟಿಯಲ್ಲಿ ಕಕ್ಷೆಗೆ ಸೇರಿ, ಕಕ್ಷೆ ಸುತ್ತುತ್ತಿದೆ `ಸಿಂಧು ನೇತ್ರ' (Sindhu Netra)ಎನ್ನುವ ಗೂಢಚರ್ಯೆ ಉಪಗ್ರಹ (Spy Satellite). DRDO  ಸೇನೆಯ ಗೂಢಚರ್ಯೆ ಮಿಶನ್ ಗಾಗಿ ವಿಶೇಷವಾಗಿ ಸಿಂಧುನೇತ್ರವನ್ನು ರೂಪಿಸಿದೆ.

ಇದನ್ನೂ ಓದಿ : ISRO PSLV C51 Launched: ISRO ನಿಂದ PSLV C-51/Amazonia-1 ಯಶಸ್ವಿ ಉಡಾವಣೆ

ಸಿಂಧು ನೇತ್ರದ ಕಣ್ಣು ಎಲ್ಲೆಲ್ಲಿದೆ ಗೊತ್ತಾ..?
ಸಿಂಧು ನೇತ್ರ ಸಾಮಾನ್ಯ ಗುಪ್ತಚರ ಉಪಗ್ರಹ ಅಲ್ಲ. ಅದರ ಕಣ್ಣು ಎಲ್ಲೆಲ್ಲಿದೆ ಎಂದು ಗೊತ್ತಾದರೆ ನಿಮಗೆ ನಮ್ಮ ಸೇನೆಯ ಸಾಮರ್ಥ್ಯದ ಬಗ್ಗೆ ಹೆಮ್ಮೆ ಉಂಟಾಗುತ್ತದೆ. ಸಿಂಧು ನೇತ್ರದ ಸಾಮರ್ಥ್ಯ ನೋಡಿ.

1.  ದಕ್ಷಿಣ ಚೀನಾ (China) ಸಾಗರದಲ್ಲಿ ಅಮೆರಿಕ ಮತ್ತು ಚೀನಾ ಯುದ್ದಕ್ಕೆ ಕಾಲ್ಕೆರೆದು ನಿಂತಿವೆ. ಸಮಸ್ತ ದಕ್ಷಿಣ ಚೀನಾ ಸಾಗರದ ಮೇಲಿದೆ ಸಿಂಧು ನೇತ್ರದ ಕಣ್ಣು
2. ಸಮುದ್ರಗಳ್ಳರಿಂದ ಆವೃತವಾಗಿರುವ ಆಡೆನ್ ಕೊಲ್ಲಿಯ ಮೇಲೂ ನಿಗಾ ಇಟ್ಟಿದೆ.
3. ಆಫ್ರಿಕಾ (Africa) ಖಂಡದ ಸಮುದ್ರದ ಮೇಲೂ ಕಣ್ಣಿಟ್ಟಿದ್ದು, ಖತರ್ನಾಕ್  ಪೈರೇಟ್ಸ್ ಚಲನವಲನಗಳನ್ನು ಗಮನಿಸುತ್ತಿದೆ. 
4. ಹೆಚ್ಚು ಹೇಳುವ ಅಗತ್ಯವೇ ಇಲ್ಲ. ಪಾಕಿಸ್ತಾನದ (Pakistan) ಸೇನಾ ಚಲನವಲನ, ಭಯೋತ್ಪಾದಕರ ತರಬೇತಿ ಶಿಬಿರ, ಪಾಕ್ಏರ್ ಬೇಸ್, ಸಮುದ್ರ ತೀರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. 
5. ಚೀನಾ ಜೊತೆ ನಾವು ಸುಮರು 4000 ಕಿ.ಮಿ ಗಡಿ ಹಂಚಿಕೊಂಡಿದ್ದೇವೆ. ಅಲ್ಲಾಗುವ ಬದಲಾವಣೆಯನ್ನು ಕ್ಷಣದಲ್ಲಿ ಗಮನಿಸಿ ರವಾನಿಸುತ್ತದೆ ಸಿಂಧು ನೇತ್ರ.
6. ಲಡಾಖ್ (Ladakh) ಸೇರಿ ಸಮಸ್ತ ಹಿಮಾಲಯದ ಶ್ವೇತ ಹಿಮದ ಇಂಚಿಂಚೂ ಅದರ ಕಣ್ಗಾವಲಿನಲ್ಲಿದೆ. 
7. ಚೀನಾ ವಿರುದ್ಧ ಯುದ್ದವ್ಯೂಹದಲ್ಲಿ ಅತ್ಯಂತ ಮಹತ್ವದ್ದೆನಿಸಿದ ಮಲಕ್ಕಾ ಜಲಸಂಧಿಯ ಕ್ಷಣ ಕ್ಷಣದ ಅಪ್ ಡೇಟ್ ಸಿಂಧು ನೇತ್ರ ಮಾಡುತ್ತದೆ.
8. ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರದಲ್ಲಿ ಸಂಚರಿಸುವ ಮರ್ಚಂಟ್ ನೇವಿ ಜೊತೆಗೆ ಯಾವ ರೀತಿಯ ಯುದ್ಧನೌಕೆ ಎಲ್ಲಿಗೆ ಸಾಗುತ್ತಿದೆ ಎಂಬುದನ್ನೂ ಇದು ಟ್ರ್ಯಾಕ್ ಮಾಡುತ್ತದೆ.
9. ಚೀನಾ, ಪಾಕಿಸ್ತಾನದ ಯುದ್ದ ನೌಕೆಗಳ ಚಲನವಲನದ ಸುಳಿವು ಸದ್ದಿಲ್ಲದೆ ನೀಡುತ್ತಾಳೆ ಈ ಸಿಂಧು ನೇತ್ರೆ. 
10. ಆಳ ಸಾಗರದಲ್ಲಿ ಯಾವುದೇ ಅಸಹಜ ಚಲನವಲನ (ಸಬ್ ಮೆರಿನ್ ಚಲನೆ)ವನ್ನೂ ಇದು ಟ್ರ್ಯಾಕ್ ಮಾಡುತ್ತದೆ. 

ಇದನ್ನೂ ಓದಿ : Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!

ಹಿಮಾಲಯದ ಹಿಮಶಿಖರದ ಮೇಲೆ ಭಾರತ-ಚೀನಾ ಯುದ್ದಕ್ಕೆ ಮಲೆತು ನಿಂತಾಗ ಇಂತಾದ್ದೊಂದು ರಹಸ್ಯ ಸೆಟಲೈಟ್ (Satellite) ಅಗತ್ಯವನ್ನು ನಮ್ಮ ಸೇನೆ ಮನಗಂಡಿತ್ತು. ಯಾಕಂದರೆ, ನರಿಬುದ್ದಿಯ ಚೀನಾದ ಸಮಸ್ತ ಚಲನವಲನದ ಮೇಲೆ ಕಣ್ಗಾವಲಿಡುವ ಅಗತ್ಯವಿತ್ತು. ವಿದೇಶಿ ಉಪಗ್ರಹಗಳ ಮೇಲೆ ಅವಲಂಬನೆ ಅಷ್ಟೊಂದು ಸೂಕ್ತ ಆಗಿರಲಿಲ್ಲ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯತತ್ಪರವಾದ DRDO. ಅತಿಕಡಿಮೆ ಸಮಯದಲ್ಲಿ ಅತ್ಯಂತ ಪವರ್‍ ಫುಲ್ ಉಪಗ್ರಹ ರೂಪಿಸಿ, ಕಕ್ಷೆಗೆ ರವಾನಿಸಿದೆ. ಇದು ಭೂಮಿ, ಸಾಗರ, ಹಿಮಶಿಖರದ ಅತ್ಯಂತ ಸ್ಪಷ್ಟ ಹೈರೆಸಲ್ಯೂಶನ್ ಫೋಟೋ ರವಾನಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News