Shraddha Murder Case: ಶ್ರದ್ಧಾ ಹತ್ಯೆಗೆ ವಾಟರ್ ಬಿಲ್ ನಂಟು! ಅಗೆದಷ್ಟು ಬಯಲಾಗುತ್ತಿದೆ ‘ಪೀಸ್ ವಾಲಾ’ನ ದುಷ್ಕೃತ್ಯ

Delhi Shraddha Murder Case Investigation: ಸದ್ಯ ಶ್ರದ್ಧಾ ರುಂಡಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಆರೋಪಿಯನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಸ್ಟಡಿಯನ್ನು ವಿಸ್ತರಿಸುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಲಿದ್ದಾರೆ.

Written by - Bhavishya Shetty | Last Updated : Nov 17, 2022, 02:22 PM IST
    • ಅಫ್ತಾಬ್ ಅಮೀನ್ ಪೂನವಾಲಾನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು
    • ಶ್ರದ್ಧಾ ಕೊಲೆಗೆ ನೀರಿನ ಬಿಲ್ ಸಂಪರ್ಕ!
    • ರಕ್ತವನ್ನು ಶುದ್ಧೀಕರಿಸಲು ಸಾಕಷ್ಟು ನೀರು ಬಳಸಿದ್ದನ್ನು ಪೊಲೀಸರು ಕಂಡುಕೊಂಡಿದ್ದಾರೆ
Shraddha Murder Case: ಶ್ರದ್ಧಾ ಹತ್ಯೆಗೆ ವಾಟರ್ ಬಿಲ್ ನಂಟು! ಅಗೆದಷ್ಟು ಬಯಲಾಗುತ್ತಿದೆ ‘ಪೀಸ್ ವಾಲಾ’ನ ದುಷ್ಕೃತ್ಯ title=
shraddha walker

Delhi Shraddha Murder Case Investigation: ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಭಾರೀ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಅಫ್ತಾಬ್ ಅಮೀನ್ ಪೂನವಾಲಾನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಶ್ರದ್ಧಾ ಅವರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಕೆಲ ಪ್ರದೇಶದಲ್ಲಿ ಬಿಸಾಡಿರುವ ಅಫ್ತಾಬ್ ಅಮೀನ್ ನಿಂದ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ ವಿಚಾರಣೆ ವೇಳೆ ಆತ ನೀಡಿದ ಉತ್ತರ ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ.

ಸದ್ಯ ಶ್ರದ್ಧಾ ರುಂಡಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಆರೋಪಿಯನ್ನು ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಸ್ಟಡಿಯನ್ನು ವಿಸ್ತರಿಸುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಲಿದ್ದಾರೆ.

ಇದನ್ನೂ ಓದಿ: Shraddha Murder Case : ಗರ್ಭಿಣಿಯಾಗಿದ್ದಳಾ ಶ್ರದ್ಧಾ!? ಬಗೆದಷ್ಟು ಹೊರಬರುತ್ತಿದೆ ಈ ʻಪೀಸ್‌ʼವಾಲಾನ ಕುಕೃತ್ಯ!

ಈಗಾಗಲೇ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಆರೋಪಿ ಅಫ್ತಾಬ್ ನೀರಿನ ಬಿಲ್ ಗೆ ಸಂಬಂಧಿಸಿದ ವಿಷಯ ಬಯಲಿಗೆ ಬಂದಿತ್ತು. ಕೊಲೆ ಪ್ರಕರಣದಲ್ಲಿ ನೀರಿನ ಬಿಲ್ ಸಂಪರ್ಕವನ್ನು ಪ್ರಮುಖ ಸುಳಿವನ್ನಾಗಿ ತೆಗೆದುಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಫ್ತಾಬ್ ಅವರ ಫ್ಲಾಟ್ ನ ನೆರೆಹೊರೆಯವರಿಂದ 300 ರೂಪಾಯಿ ನೀರಿನ ಬಿಲ್ ಬಾಕಿ ಇದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ದೆಹಲಿ ಸರ್ಕಾರ ಪ್ರತಿ ತಿಂಗಳು 20 ಸಾವಿರ ಲೀಟರ್ ನೀರನ್ನು ಉಚಿತವಾಗಿ ನೀಡುತ್ತದೆ. ಬಹುತೇಕ ಎಲ್ಲರೂ ಶೂನ್ಯ ಬಿಲ್ ಪಡೆಯುತ್ತಾರೆ. ಆದರೆ ಅಫ್ತಾಬ್ ನೀರಿನ ಬಿಲ್ ರೂ.300 ಬಾಕಿ ಇರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅಫ್ತಾಬ್ ಕೊಠಡಿಯ ಮೇಲೆ ವಾಸಿಸುವ ಇಬ್ಬರು ನೆರೆಹೊರೆಯವರ ನೀರಿನ ಬಿಲ್ ಶೂನ್ಯವಾಗಿದ್ದರೆ, ಅಫ್ತಾಬ್ ಅವರ ಫ್ಲಾಟ್‌ನಲ್ಲಿ ರೂ.300 ನೀರಿನ ಬಿಲ್ ಬಾಕಿ ಇದೆ. ಕೊಲೆಯ ನಂತರ ಅಫ್ತಾಬ್ ರಕ್ತವನ್ನು ಶುದ್ಧೀಕರಿಸಲು ಸಾಕಷ್ಟು ನೀರು ಬಳಸಿದ್ದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ರೂ.300 ನೀರಿನ ಬಿಲ್ ಬಂದಿದೆ. ಪದೇ ಪದೇ ನೀರಿನ ತೊಟ್ಟಿ ನೋಡಲು ಹೋಗುತ್ತಿದ್ದರು ಎಂದು ಸುತ್ತಮುತ್ತಲಿನವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಹತ್ಯೆಗೆ ಬಳಸಿದ ಆಯುಧದ ಬಗ್ಗೆ ಅಫ್ತಾಬ್ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಶ್ರದ್ಧಾ ಅವರ ಮೊಬೈಲ್ ಎಲ್ಲಿದೆ ಎಂದು ಕೇಳಿದಾಗ ಉತ್ತರ ನೀಡಿಲ್ಲ. ಇದರೊಂದಿಗೆ ಪೊಲೀಸರು ನಾರ್ಕೋ ಪರೀಕ್ಷೆಯ ಮೂಲಕ ಈ ನಿಗೂಢವನ್ನು ಭೇದಿಸಲು ಯತ್ನಿಸುತ್ತಿದ್ದಾರೆ.

ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಪೊಲೀಸರು 13 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಸದ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮೂಳೆಗಳ ಡಿಎನ್‌ಎ ಶ್ರದ್ಧಾಳ ತಂದೆಯ ಡಿಎನ್‌ಎಗೆ ಹೊಂದಿಕೆಯಾಗಿದೆ.

ಇದನ್ನೂ ಓದಿ: Shraddha Walkar Murder Case: ಶ್ರದ್ಧಾ ಮೃತದೇಹ ಇಟ್ಟಿದ್ದ ಫ್ರಿಡ್ಜ್ ಇದುವೇ! ಶವದ ಜೊತೆ ಆಹಾರವನ್ನು ಇಟ್ಟಿದ್ದನಂತೆ ಕ್ರೂರಿ!

ಅಫ್ತಾಬ್ ಹತ್ಯೆಗೆ ಬಳಸಿದ್ದ ಆಯುಧ, ಶ್ರದ್ಧಾಳ ಫೋನ್, ಘಟನೆ ವೇಳೆ ಧರಿಸಿದ್ದ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶ್ರದ್ಧಾ ಕೊಲೆ ಪ್ರಕರಣ ಇಂದು ಬಹಳ ನಿರ್ಣಾಯಕವಾಗಲಿದೆ. ಮತ್ತೊಂದೆಡೆ, ಶಿವಸೇನೆ ನಾಯಕರು ಆರೋಪಿ ಅಫ್ತಾಬ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News