ಕ್ರಿಮಿನಲ್ ಆರೋಪದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕೇ ಅಥವಾ ಬೇಡವೇ? ನಾಳೆ ಸುಪ್ರೀಂ ತೀರ್ಪು

ಕ್ರಿಮಿನಲ್ ಕೇಸ್ ನ ಆರೋಪ ಎದುರಿಸುತ್ತಿರುವ ಸಂಸದರು ಮತ್ತು ಶಾಸಕರು ಆರೋಪ ಸಾಬಿತಾಗುವ ಮುಂಚೆಯೇ ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರದಂದು ನೀಡಲಿದೆ. 

Last Updated : Sep 24, 2018, 08:31 PM IST
ಕ್ರಿಮಿನಲ್ ಆರೋಪದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕೇ ಅಥವಾ ಬೇಡವೇ? ನಾಳೆ ಸುಪ್ರೀಂ ತೀರ್ಪು   title=

ನವದೆಹಲಿ: ಕ್ರಿಮಿನಲ್ ಕೇಸ್ ನ ಆರೋಪ ಎದುರಿಸುತ್ತಿರುವ ಸಂಸದರು ಮತ್ತು ಶಾಸಕರು ಆರೋಪ ಸಾಬಿತಾಗುವ ಮುಂಚೆಯೇ ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರದಂದು ನೀಡಲಿದೆ. 
 
ಐದು ನ್ಯಾಯಾಧೀಶರನ್ನೋಳಗೊಂಡ ಸಂವಿಧಾನ ಪೀಠವು ಕ್ರಿಮಿನಲ್ ಹಿನ್ನೆಲೆಯಲ್ಲಿ ಶಾಸಕರನ್ನು ವಜಾಗೊಳಿಸಲು ಕೋರಿರುವ ಸಾರ್ವಜನಿಕ ಅರ್ಜಿಯನ್ನು  ಕೇಂದ್ರ ಸರ್ಕಾರ ವಿರೋಧಿಸಿದೆ.ಈಗ ಈ ಅರ್ಜಿಯನ್ನು ಸುಪ್ರೀಂ ಮಂಗಳವಾರದಂದು ನಿರ್ಧರಿಸಲಿದೆ. ಸದ್ಯ ಕ್ರಿಮಿನಲ್ ಕೇಸ್ ಗಳಲ್ಲಿ ಆರೋಪಿಗೆ ಶಿಕ್ಷೆ ಸಾಭಿತಾದ ನಂತರ ಮಾತ್ರ ಎಂಪಿಗಳು ಮತ್ತು ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಈಗಿನ ಕಾನೂನು ಅವಕಾಶ ನೀಡುತ್ತದೆ. 

ಆಗಸ್ಟ್ 28 ರಂದು ವಿಚಾರಣೆಯ ಸಮಯದಲ್ಲಿ ಮತದಾರರಿಗೆ ಅಭ್ಯರ್ಥಿಗಳ ಪೂರ್ವಾಪರವನ್ನು ತಿಳಿಯುವ ಹಕ್ಕು ಇದೆ. ಆದ್ದರಿಂದ ಚುನಾವಣಾ ಆಯೋಗ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಪಕ್ಷದಿಂದ ಟಿಕೆಟ್ ನೀಡದಿರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲು ಪಕ್ಷಗಳಿಗೆ ನಿರ್ದೇಶನವನ್ನು ನೀಡಬಹುದು ಎಂದು ಸುಪ್ರಿಂಕೋರ್ಟ್ ತಿಳಿಸಿತ್ತು.

ಈ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಅಂತಿಮ ತೀರ್ಪನ್ನು ಚುನಾವಣಾ ಸಮಿತಿ ಸೇರಿದಂತೆ ಪಕ್ಷಗಳ ನಂತರ ಮನವಿಗಳ ನಂತರ ವಾದಗಳನ್ನು ಆಲಿಸಿ ಅಂತಿಮ ತೀರ್ಪುನ್ನು ಕಾಯ್ದಿರಿಸಿತ್ತು. ಈಗ ನಾಳೆ ಅಂತಿಮ ತೀರ್ಪುನ್ನು ನೀಡಲಿದೆ.ಈಗ ತೀರ್ಪು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ರಾಜಕಾರಣಿಗಳ ವಿರುದ್ಧ ಬಂದಿದ್ದೆ ಆದಲ್ಲಿ ಅದು ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಲಿದೆ ಎನ್ನಲಾಗಿದೆ

Trending News