Shocking: ಕೇವಲ 900 ರೂ.ಗಾಗಿ ತಂದೆಯನ್ನೇ ಹೊಡೆದು ಕೊಂದ ಮಗ..!

ಕೇವಲ 900 ರೂ. ಹಣಕ್ಕಾಗಿ ತಂದೆಯನ್ನೇ ಮಗನೊಬ್ಬ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  

Written by - Zee Kannada News Desk | Last Updated : Feb 7, 2022, 04:49 PM IST
  • ಕೇವಲ 900 ರೂ.ಗಾಗಿ ತಂದೆಯನ್ನೇ ಮನಬಂದಂತೆ ಥಳಿಸಿ ಹತ್ಯೆ ಮಾಡಿದ ಪುತ್ರ
  • ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
  • ಹಣ ಕೊಡಲು ನಿರಾಕರಿಸಿದ ತಂದೆಗೆ ಮನಬಂದಂತೆ ಹಲ್ಲೆ ನಡೆಸಿದ್ದ ಪಾಪಿ ಪುತ್ರ
Shocking: ಕೇವಲ 900 ರೂ.ಗಾಗಿ ತಂದೆಯನ್ನೇ ಹೊಡೆದು ಕೊಂದ ಮಗ..! title=
ತಂದೆಯನ್ನೇ ಮನಬಂದಂತೆ ಥಳಿಸಿ ಹತ್ಯೆ ಮಾಡಿದ ಪುತ್ರ

ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ಪ್ರತಿದಿನವೂ ಅನೇಕ ಅಪರಾಧ ಘಟನೆಗಳ ಸುದ್ದಿಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಅಂತಹದ್ದೇ ಮತ್ತೊಂದು ಅಪರಾಧ ಸುದ್ದಿ ವಾಣಿಜ್ಯ ನಗರಿಯನ್ನು ಬೆಚ್ಚಿಬೀಳಿಸಿದೆ. ಕೇವಲ 900 ರೂ. ಹಣಕ್ಕಾಗಿ ತಂದೆಯನ್ನೇ ಮಗನೊಬ್ಬ ಹೊಡೆದು ಸಾಯಿಸಿರುವ ಘಟನೆ ನಡೆದಿದೆ. ಪಾಲ್ಘರ್(Palghar) ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  

ಹಣ ನೀಡಲು ನಿರಾಕರಿಸಿದ ತಂದೆಯ ಹತ್ಯೆ!  

ಆರೋಪಿಯನ್ನು 35 ವರ್ಷದ ರವೀಂದ್ರ ಮಾಲಿ ಎಂದು ಗುರುತಿಸಲಾಗಿದೆ. ತಂದೆಯ ಬಳಿ ಆರೋಪಿ ಹಣ ಕೇಳಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ತಂದೆಯನ್ನು ಥಳಿಸಿ ಹತ್ಯೆ ಮಾಡಿದ್ದಾನೆ. ಜವಾಹರ್ ಪ್ರದೇಶದ ರಂಜನಪದ(Ranjanpada)ದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಗ್ರಾಮಾಂತರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿ ತಿಳಿಸಿದ್ದಾರೆ. ಆರೋಪಿಯ ತಂದೆ 70 ವರ್ಷದ ಜಾನು ಮಾಲಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದ ಯೋಜನೆಯಡಿ ತಿಂಗಳಿಗೆ ಪಡೆಯುತ್ತಿದ್ದ 900 ರೂ. ಜಮಾ ಆಗಿತ್ತು. ಈ ಹಣವನ್ನು ತನಗೆ ನೀಡುವಂತೆ ಆರೋಪಿ ರವೀಂದ್ರ ಕೇಳಿದ್ದ. ಆದರೆ ಹಣ ನೀಡಲು ಆತನ ತಂದೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆತ ಮನಬಂದಂತೆ ಅವರನ್ನು ಥಳಿಸಿದ್ದಾನೆ.  

ಇದನ್ನೂ ಓದಿ: ಪಿಂಚಣಿದಾರರೆ ಗಮನಿಸಿ : NPS ನಿಯಮಗಳಲ್ಲಿ ಭಾರಿ ಬದಲಾವಣೆ!

ಚಿಕಿತ್ಸೆ ಫಲಕಾರಿಯಾಗದೆ ಸಾವು

ಮಗನಿಂದ ಹಲ್ಲೆಗೊಳಗಾದ ತಂದೆ ಜಾನು ಮಾಲಿಯನ್ನು ಮೊಖಾಡದ ಸರ್ಕಾರಿ ಆಸ್ಪತ್ರೆ(Government Hospital)ಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯಸ್ಥಿತಿ ಹದಗೆಟ್ಟ ನಂತರ ನಾಸಿಕ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಘಟನೆಯ ನಂತರ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: "ಧರ್ಮ ಸಂಸತ್ ನಲ್ಲಿನ ಹೇಳಿಕೆಗಳು ಹಿಂದೂಗಳ ಮಾತಲ್ಲ, ಹಿಂದುತ್ವ ಸಂವಿಧಾನದ ಪೀಠಿಕೆಯ ಪ್ರತಿಬಿಂಬ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News