ಶಿವಸೇನೆಯ ಆದಿತ್ಯ ಠಾಕ್ರೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನ: ವರದಿ

ಇದೇ ಶುಕ್ರವಾರ ಅಥವಾ ಶನಿವಾರ ನಡೆಯಲಿರುವ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಆದಿತ್ಯ ಠಾಕ್ರೆ ಅವರನ್ನು ಉಪಮುಖ್ಯಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದೆ ಎಂದು ಪಕ್ಷದ ಆತಂರಿಕ ಮೂಲಗಳು ತಿಳಿಸಿವೆ.

Last Updated : Jun 13, 2019, 10:46 AM IST
ಶಿವಸೇನೆಯ ಆದಿತ್ಯ ಠಾಕ್ರೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನ: ವರದಿ title=
ಆದಿತ್ಯ ಠಾಕ್ರೆ

ಮುಂಬೈ: ಆದಿತ್ಯ ಠಾಕ್ರೆ ಅವರಿಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಶಿವಸೇನೆ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಆದಿತ್ಯ ಠಾಕ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ.

ಇದೇ ಶುಕ್ರವಾರ ಅಥವಾ ಶನಿವಾರ ನಡೆಯಲಿರುವ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಆದಿತ್ಯ ಠಾಕ್ರೆ ಅವರನ್ನು ಉಪಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿದೆ ಎಂದು ಪಕ್ಷದ ಆತಂರಿಕ ಮೂಲಗಳು ತಿಳಿಸಿವೆ ಎಂದು ಡಿಎನ್ಎ ಪತ್ರಿಕೆ ವರದಿ ಮಾಡಿದೆ. ಸದ್ಯ ಮಹಾರಾಷ್ಟ್ರ ಸರ್ಕಾರದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್ ಹೊರತುಪಡಿಸಿ ಅತಿ ಹೆಚ್ಚು ಬೇಡಿಕೆಯುಳ್ಳ ನಾಯಕನಾಗಿ ಆದಿತ್ಯ ಠಾಕ್ರೆ ಎರಡನೇ ಸ್ಥಾನದಲ್ಲಿದ್ದಾರೆ.

ಶಿವಸೇನೆಯ ಪ್ರಸ್ತಾಪವನ್ನು ಬಿಜೆಪಿ ಅನುಮೋದಿಸಿದ್ದೇ ಆದಲ್ಲಿ, ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗುತ್ತಿರುವ ಅತಿ ಚಿಕ್ಕ ವಯಸ್ಸಿನ ರಾಜಕೀಯ ನಾಯಕ ಎಂಬ ಕೀರ್ತಿಗೆ 29 ವರ್ಷ ವಯಸ್ಸಿನ ಆದಿತ್ಯ ಪಾತ್ರರಾಗಲಿದ್ದಾರೆ. ಅಷ್ಟೇ ಅಲ್ಲದೆ, ಶಿವಸೇನಾದಲ್ಲಿ ಪೀಳಿಗೆಯ ಬದಲಾವಣೆಯ ಆರಂಭವನ್ನೂ ಸಹ ಇದು ಸೂಚಿಸಲಿದೆ. 

Trending News