ಪೆನ್ನಾ ನದಿಯಲ್ಲಿ ನೀರು ಪಾಲಾದ 7 ಯುವಕರು

ರಾತ್ರಿ 8 ಗಂಟೆ ಸುಮಾರಿಗೆ ಪೊಲೀಸರು ಮತ್ತು ಈಜುಗಾರರು ಶೋಧ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಅವರು ಸ್ಥಳಕ್ಕೆ ಧಾವಿಸಿದ್ದಾರೆ

Last Updated : Dec 18, 2020, 11:35 AM IST
  • ಪೆನ್ನಾ ನದಿಯಲ್ಲಿ ಮುಳುಗಿ ಏಳು ಯುವಕರು ಮೃತ
  • ತಿರುಪತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿವ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ವೇಳೆ ಘಟನೆ
ಪೆನ್ನಾ ನದಿಯಲ್ಲಿ ನೀರು ಪಾಲಾದ 7 ಯುವಕರು  title=
Representational Image

ಕಡಪ: ಗುರುವಾರ ಸಂಜೆ ಸಿದ್ದಾವತಂನ ಪೆನ್ನಾ ನದಿಯಲ್ಲಿ ಮುಳುಗಿ ಏಳು ಯುವಕರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ವರದಿಯಾದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಈಜುಗಾರರ ಶೋಧ ಕಾರ್ಯಾಚರಣೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಅವರಲ್ಲಿ ಇಬ್ಬರು ಶವಗಳು ಪತ್ತೆಹಚ್ಚಿದ್ದಾರೆ.

ವಿಷಯ ತಿಳಿದ ಕೂಡಲೇ ಒಂಟಿಮಿಟ್ಟಾ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಸಿದ್ಧವತಂ ಸಬ್ ಇನ್ಸ್‌ಪೆಕ್ಟರ್, ರಾಜಂಪೆಟೆ ಡಿಎಸ್ಪಿ ಶಿವಭಾಸ್ಕರ್ ರೆಡ್ಡಿ ಜೊತೆಗೆ ಮಂಡಲ್ ಕಂದಾಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದ್ದಾರೆ.

ಜಾತಕವನ್ನು ಓದಿದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ವ್ಯಕ್ತಿ, ಮುಂದೆ...

ಪತ್ತೆಯಾದ ಇಬ್ಬರನ್ನು ಸೋಮಶೇಖರ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾತನಾಡಿದ ರಾಜಂಪೇಟ ಡಿಎಸ್ಪಿ ಜಿ.  ಶಿವ ಭಾಸ್ಕರ್ ರೆಡ್ಡಿ, ತಿರುಪತಿಯಲ್ಲಿ (Tirupati) ವ್ಯಾಸಂಗ ಮಾಡುತ್ತಿರುವ ಶಿವ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಗುರುವಾರ ತಮ್ಮ ತಂದೆಯ ಮೊದಲ ಪುಣ್ಯ ತಿಥಿಯಲ್ಲಿ ಪಾಲ್ಗೊಂಡಿದ್ದರು. ನಂತರ ಎಲ್ಲರೂ ಪೆನ್ನಾ ನದಿಯಲ್ಲಿ (River) ಈಜಲು ಹೋಗಿದ್ದರು. ಸರಿಯಾಗಿ ಈಜು ಬಾರದ 7 ಯುವಕರು ನಂತರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ತುಂಗಾ ನದಿ ದಡದಲ್ಲಿ ಮತ್ಸ್ಯಗಳ ಮಾರಣ ಹೋಮ

ವಿಷಯ ತಿಳಿದ ಕೂಡಲೇ ಒಂಟಿಮಿಟ್ಟಾ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಸಿದ್ಧವತಂ ಸಬ್ ಇನ್ಸ್‌ಪೆಕ್ಟರ್ ಜೊತೆಗೆ ಮಂಡಲ್ ಕಂದಾಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿತು ಎಂದು ತಿಳಿಸಿದ ರಾಜಂಪೆಟೆ ಡಿಎಸ್ಪಿ ಶಿವಭಾಸ್ಕರ್ ರೆಡ್ಡಿ, 8 ಗಂಟೆಯವರೆಗೆಎರಡು ಶವಗಳು ಪತ್ತೆಯಾಗಿವೆ. ಇತರ ಐದು ಶವಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಮುಂದುವರೆದಿದೆ. ಭಾರಿ ಮಳೆ ಮತ್ತು ಗಾಳಿಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.

Trending News