ನವದೆಹಲಿ: ಗುಜರಾತ್ನ ವಡೋದರಾ ಜಿಲ್ಲೆಯ ಹೋಟೆಲ್ನ ಒಳಚರಂಡಿಯನ್ನು ಸ್ವಚ್ಛಗೊಳಿಸುವಾಗ ಉಸಿರುಕಟ್ಟುವಿಕೆಯಿಂದ ನಾಲ್ಕು ಕಾರ್ಮಿಕರು ಸೇರಿದಂತೆ ಏಳು ಮಂದಿ ಶನಿವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಡೋದರಾ ನಗರದಿಂದ 30 ಕಿ.ಮೀ ದೂರದಲ್ಲಿರುವ ದಾಭೋಯ್ ತಹಸಿಲ್ನ ಫರ್ತಿಕುಯಿ ಗ್ರಾಮದ ಹೋಟೆಲ್ವೊಂದರಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದವರಲ್ಲಿ ಹೋಟೆಲ್ನ ಮೂವರು ಉದ್ಯೋಗಿಗಳೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.
"ಒಬ್ಬ ಪೌರ ಕಾರ್ಮಿಕ ಮ್ಯಾನ್ಹೋಲ್ನಿಂದ ಹೊರಬರಲು ವಿಫಲವಾದಾಗ, ಇತರರು ಒಳಗೆ ಹೋಗಿದ್ದಾರೆ ಆಗ ಎಲ್ಲರೂ ಉಸಿರುಕಟ್ಟುವಿಕೆಯಿಂದ ಸಾವನ್ನಪ್ಪಿದರು" ಎಂದು ಜಿಲ್ಲಾಧಿಕಾರಿ ಕಿರಣ್ ಜಾವೇರಿ ಪಿಟಿಐಗೆ ತಿಳಿಸಿದ್ದಾರೆ.