ಕಾಶಿ ಯಾತ್ರೆಗೆ ತೆರಳಿದ್ದ ಬಸ್ ಅಪಘಾತ: ಬೀದರ್‌ ಮೂಲದ 7 ಮಂದಿ ದುರ್ಮರಣ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಭಾನುವಾರ ಬೆಳಿಗ್ಗೆ ಟ್ರಕ್ ಮತ್ತು ಮಿನಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಏಳು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Written by - Chetana Devarmani | Last Updated : May 29, 2022, 05:27 PM IST
  • ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಟ್ರಕ್ ಮತ್ತು ಮಿನಿ ಬಸ್ ಮುಖಾಮುಖಿ ಡಿಕ್ಕಿ
  • 7 ಪ್ರಯಾಣಿಕರು ಸಾವು, 9 ಮಂದಿ ಗಂಭೀರ ಗಾಯ
  • ಲಿಖಿಂಪುರ-ಬಹ್ರೈಚ್ ರಾಜ್ಯ ರಸ್ತೆಯಲ್ಲಿ ಅಪಘಾತ
ಕಾಶಿ ಯಾತ್ರೆಗೆ ತೆರಳಿದ್ದ ಬಸ್ ಅಪಘಾತ:  ಬೀದರ್‌ ಮೂಲದ 7 ಮಂದಿ ದುರ್ಮರಣ  title=
ರಸ್ತೆ ಅಪಘಾತ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಭಾನುವಾರ ಬೆಳಿಗ್ಗೆ ಟ್ರಕ್ ಮತ್ತು ಮಿನಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಏಳು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: IPL 2022 : ಗುಜರಾತ್‌-ರಾಜಸ್ಥಾನ ಫೈನಲ್‌ ಫೈಟ್‌: ಅಂತಿಮ ಜಿದ್ದಾಜಿದ್ದಿ ನೋಡಲಿದ್ದಾರಾ ಪಿಎಂ ಮೋದಿ?

ಮೋತಿಪುರ್ ಪ್ರದೇಶದ ಲಖಿಂಪುರ-ಬಹ್ರೈಚ್ ರಾಜ್ಯ ರಸ್ತೆಯಲ್ಲಿ ಭಾನುವಾರ ಮುಂಜಾನೆ ರಸ್ತೆ ಅಪಘಾತ ಸಂಭವಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿದ್ದ ಭಕ್ತರಿದ್ದ ಟೆಂಪೋ ಟ್ರಾವೆಲರ್​ ಹಾಗೂ ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿದೆ. ಬೀದರ್​ನ ಗಾಂಧಿಗಂಜ್​​ ಪ್ರದೇಶದ 16 ಮಂದಿ ಅಯೋಧ್ಯೆಗೆ ಶ್ರೀರಾಮ ಜನ್ಮಭೂಮಿ ಪೂಜೆಗೆಂದು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಟೆಂಪೋ ಚಾಲಕ ಸೇರಿ ಏಳು ಮಂದಿ ಯಾತ್ರಾರ್ಥಿಗಳು ಅಸುನೀಗಿದ್ದಾರೆ.  

ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಇಬ್ಬರು ಅಸುನೀಗಿದ್ದಾರೆ. ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.   

ಇದನ್ನೂ ಓದಿ: ಬಾಂಬ್ ನಿಂದ ತುಂಬಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಪೋಲೀಸರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News