ರಾಂಚಿ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು

ಜಾರ್ಖಂಡ್ ನಲ್ಲಿ ಸಾಮೂಹಿಕ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. 

Last Updated : Jul 30, 2018, 02:18 PM IST
ರಾಂಚಿ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣು title=

ರಾಂಚಿ: ಇತ್ತೀಚಿಗೆ ರಾಷ್ಟ್ರ ರಾಜಧಾನಿಯ ಬುರಾರಿಯಲ್ಲಿ ಸಂಭವಿಸಿದ್ದ ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಘಟನೆ ಇನ್ನೂ ಮಾಸಿಲ್ಲ. ಏತನ್ಮಧ್ಯೆ, ಇದೀಗ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಂಚಿಯ ಕಾಂಕೇ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಸಾಮೂಹಿಕ ಆತ್ಮಹತ್ಯೆ ಘಟನೆಯನ್ನು ಪೊಲೀಸರು ತನಿಖೆ ನಡುಸುತ್ತಿದ್ದು, ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. 

ಮಾಹಿತಿ ಪ್ರಕಾರ, ನಿವೃತ್ತ ಸೈನಿಕನ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾಗಲ್ಪುರದ ದೀಪಕ್ ಝಾ ಎಂದು ತಿಳಿದು ಬಂದಿದೆ. ಒಂದು ತಿಂಗಳ ಹಿಂದಷ್ಟೇ ಆರ ಕುಟುಂಬ ಈ ಮನೆಗೆ ಸ್ಥಳಾಂತರಗೊಂಡಿತ್ತು. ಕೆಲವು ದಿನಗಳ ಹಿಂದೆ, ಮಗುವಿನ ಜನ್ಮದಿನವನ್ನು ಕುಟುಂಬವು ಬಹಳ ಉತ್ಸಾಹದಿಂದ ಆಚರಿಸಿತ್ತು. ಆದರೆ ಇದ್ದಕ್ಕಿದ್ದಂತೆ ಏನಾಯಿತು, ಅವರು ಏಕೆ ಆತ್ಮಹತ್ಯೆ ಮಾಡಿಕೊಂಡರು ಎಂದು ಯಾರಿಗೂ ಅರ್ಥವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ರಾತ್ರಿ ಕೂಡ ಎಲ್ಲರನ್ನೂ ನೋಡಿದ್ದೆವು, ಯಾವುದೇ ರೀತಿಯ ಜಗಳ ಕೇಳಿ ಬಂದಿಲ್ಲ ಎನ್ನುತ್ತಾರೆ ನೆರೆಯವರು. ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಮೃತ ದೀಪಕ್ ಝಾ ಅವರ ಮಗಳು ಶಾಲೆಗೆ ಹೋಗುತ್ತಿದ್ದರು, ಶಾಲೆಯ ವ್ಯಾನ್ ಪದೇ ಪದೇ ಹಾರ್ನ್ ಮಾಡುತ್ತಿದ್ದರೂ ಕುಟುಂಬದಿಂದ ಯಾರೂ ಹೊರಗೆ ಬರಲಿಲ್ಲ. ಆಗ ಮನೆ ಮಾಲೀಕರು ಮನೆಯ ಒಳಗೆ ಹೋದರು, ಆ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ  ಎಂದು ಎಸ್ ಪಿ ತಿಳಿಸಿದ್ದಾರೆ.

Trending News