ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ, ಏಮ್ಸ್ ನಲ್ಲಿ ಕೊನೆಯುಸಿರು

Raju Srivastava Death:  ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಆಗಸ್ಟ್ 10 ರಂದು ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿತ್ತು. 

Written by - Ranjitha R K | Last Updated : Sep 21, 2022, 11:54 AM IST
  • ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ
  • ಏಮ್ಸ್ ನಲ್ಲಿ ಕೊನೆಯುಸಿರೆಳೆದ ನಟ
  • 42 ದಿನಗಳವರೆಗೆ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದ ಹಾಸ್ಯನಟ
ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ನಿಧನ, ಏಮ್ಸ್ ನಲ್ಲಿ ಕೊನೆಯುಸಿರು  title=
Raju Srivastava Death (file photo)

ನವದೆಹಲಿ : Raju Srivastava Death:  ಹಿರಿಯ ಹಾಸ್ಯನಟ ರಾಜು ಶ್ರೀವಾಸ್ತವ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಆಗಸ್ಟ್ 10 ರಂದು ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿತ್ತು. ನಂತರ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ತಮ್ಮ 58 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 

42 ದಿನಗಳವರೆಗೆ ಏಮ್ಸ್‌ನಲ್ಲಿ ಚಿಕಿತ್ಸೆ : 
ಆಗಸ್ಟ್ 10 ರಂದು, ರಾಜು ಶ್ರೀವಾಸ್ತವ ಅವರು ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ, ಕುಸ್ದು ಬಿದ್ದಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು. ಏಮ್ಸ್‌ಗೆ ದಾಖಲಾದ ನಂತರ, ರಾಜು ಶ್ರೀವಾಸ್ತವ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಯಿತು.  ಆದರೆ ನಂತರವೂ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ರಾಜು ಶ್ರೀವಾಸ್ತವ್ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದು, ಅವರನ್ನು ಲೈಫ್ ಸಪೋರ್ಟ್ ನಲ್ಲಿಡಲಾಗಿತ್ತು. ಕೆಲ ದಿನಗಳ ಹಿಂದೆ ರಾಜು ಶ್ರೀವಾತ್ಸವ್ ಅವರ ಕೈಕಾಲುಗಳಲ್ಲಿ ಚಲನವಲನ ಕಂಡು ಬಂದಿತ್ತಾದರೂ, ಇಂದು ಅವರು ಇಹ ಲೋಕ ತ್ಯಜಿಸಿದ್ದಾರೆ.  

ಇದನ್ನೂ ಓದಿ : MG Cars Price Hike: ಗ್ರಾಹಕರಿಗೆ ದೊಡ್ಡ ಹೊಡೆತ! ಕಾರುಗಳ ಬೆಲೆ ಹೆಚ್ಚಿಸಿದ ಎಂಜಿ

10 ವರ್ಷಗಳಲ್ಲಿ 3 ಬಾರಿ ಆಂಜಿಯೋಪ್ಲ್ಯಾಸ್ಟಿ : 
ರಾಜು ಶ್ರೀವಾಸ್ತವ ಮೊದಲೇ ಹೃದ್ರೋಗದಿಂದ ಬಳಲುತ್ತಿದ್ದರು. 10 ವರ್ಷಗಳಲ್ಲಿ ಮೂರು ಬಾರಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ರಾಜು ಶ್ರೀವಾಸ್ತವ ಅವರು 10 ವರ್ಷಗಳ ಹಿಂದೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದರು. ನಂತರ 7 ವರ್ಷಗಳ ಹಿಂದೆ  ಎರಡನೆಯದಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಮಾಡಿಸಲಾಗಿತ್ತು. ನಂತರ, ಆಗಸ್ಟ್ 10 ರಂದು ಹೃದಯಾಘಾತದ ನಂತರ ಮತ್ತೆ ದೆಹಲಿಯ ಏಮ್ಸ್‌ನಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. 

ಇದನ್ನೂ ಓದಿ : Mamata Banerjee: ಪ್ರಧಾನಿಗಳಿಗೆ ಯಾರ ಮೌಲ್ಯಮಾಪನದ ಅವಶ್ಯಕತೆ ಇಲ್ಲ, ಮಮತಾ CBI-ED ಹೇಳಿಕೆಗೆ ಬಿಜೆಪಿ ತಿರುಗೇಟು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News