ಇಸ್ರೋ ನೂತನ ಮುಖ್ಯಸ್ಥರಾಗಿ ವಿಜ್ಞಾನಿ ಸಿವನ್ ಕೆ. ನೇಮಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೂತನ ಅಧ್ಯಕ್ಷರಾಗಿ ಹೆಸರಾಂತ ವಿಜ್ಞಾನಿ ಸಿವನ್ ಕೆ. ಅವರನ್ನು ನೇಮಕ ಮಾಡಲಾಗಿದೆ.   

Last Updated : Jan 10, 2018, 09:12 PM IST
ಇಸ್ರೋ ನೂತನ ಮುಖ್ಯಸ್ಥರಾಗಿ ವಿಜ್ಞಾನಿ ಸಿವನ್ ಕೆ. ನೇಮಕ title=

ನವ ದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೂತನ ಅಧ್ಯಕ್ಷರಾಗಿ ಹೆಸರಾಂತ ವಿಜ್ಞಾನಿ ಸಿವನ್ ಕೆ. ಅವರನ್ನು ನೇಮಕ ಮಾಡಲಾಗಿದೆ. 

ಸಿವಾನ್ ಕೆ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬಾಹ್ಯಾಕಾಶ ಇಲಾಖೆಯ ನೂತನ ಕಾರ್ಯದರ್ಶಿ ಮತ್ತು ಇಸ್ರೋದ ಮುಖ್ಯಸ್ಥರಾಗಿ ನೇಮಕ ಮಾಡಲು ಸಂಪುಟ ನೇಮಕ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ.

ಜನವರಿ 12, 2015ರಲ್ಲಿ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಕನ್ನಡಿಗ, ಆಲೂರು ಸೀಳಿನ್‌ ಕಿರಣ್‌ ಕುಮಾರ್‌ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ ಸಿವನ್ ಅವರನ್ನು ನೇಮಕ ಮಾಡಲಾಗಿದೆ. 

Trending News