ಬಿಹಾರದ ನಡು ರಸ್ತೆಯಲ್ಲೇ ಶಾಲಾ ಬಾಲಕಿಯನ್ನು ವಿವಸ್ತ್ರಗೊಳಿಸಿದ ಯುವಕರು!

ಆಶ್ಚರ್ಯಕರ ಘಟನೆಯಲ್ಲಿ ಬಿಹಾರದಲ್ಲಿ  ಶಾಲಾ ಬಾಲಕಿಯನ್ನು ನಡು ರಸ್ತೆಯಲ್ಲೇ ವಿವಸ್ತ್ರಗೊಳಿಸಿ ರಿಕಾರ್ಡ್ ಮಾಡಿದ ಘಟನೆ ನಡೆದಿದೆ.

Last Updated : Aug 28, 2018, 06:48 PM IST
 ಬಿಹಾರದ ನಡು ರಸ್ತೆಯಲ್ಲೇ ಶಾಲಾ ಬಾಲಕಿಯನ್ನು ವಿವಸ್ತ್ರಗೊಳಿಸಿದ ಯುವಕರು! title=
ಸಾಂದರ್ಭಿಕ ಚಿತ್ರ

ಪಾಟ್ನಾ: ಆಶ್ಚರ್ಯಕರ ಘಟನೆಯಲ್ಲಿ ಬಿಹಾರದಲ್ಲಿ  ಶಾಲಾ ಬಾಲಕಿಯನ್ನು ನಡು ರಸ್ತೆಯಲ್ಲೇ ವಿವಸ್ತ್ರಗೊಳಿಸಿ ರಿಕಾರ್ಡ್ ಮಾಡಿದ ಘಟನೆ ನಡೆದಿದೆ.

ಸುದ್ದಿಮೂಲಗಳ  ಪ್ರಕಾರ  ಈ ಘಟನೆ  ಬಿಹಾರದ ಸಹರ್ಸಾದಲ್ಲಿ ನಡೆದಿದೆ ಎಂದು  ತಿಳಿದುಬಂದಿದೆ.ಕೆಲವು ಅಪರಿಚಿತ ವ್ಯಕ್ತಿಗಳು ಈ ಕೃತ್ಯವನ್ನು ಎಸೆಗಿದ್ದು ರಸ್ತೆಯಲ್ಲೇ ಆ ಬಾಲಕಿಯನ್ನು ವಿವಸ್ತ್ರಗೊಳಿಸಿ  ಮೊಬೈಲ್ ನಲ್ಲಿ ರಿಕಾರ್ಡ್ ಮಾಡಿದ್ದಾರೆ. ಈ ವೀಡಿಯೋದಲ್ಲಿ  ರಕ್ಷಣೆಗಾಗಿ ಕೂಗುತ್ತಿರುವ ದೃಶ್ಯವು ಸೆರೆಯಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ  ಸಹರ್ಸಾ ಡಿಎಸ್ಪಿ ಪ್ರಭಾಕರ ರಿವಾರಿ " ಬಾಲಕಿಯನ್ನು  ರಸ್ತೆ ಮಧ್ಯದಲ್ಲಿ ವಿವಸ್ತ್ರಗೊಳಿಸುತ್ತಿರುವ ವೀಡಿಯೋ ವೈರಲ್ ಆದ ಮೇಲೆ ಈ ಘಟನೆಗೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.

ವಾಟ್ಸಪ್ ನಲ್ಲಿ ಈ ವೀಡಿಯೋ ಬಂದ ನಂತರ ಎಚ್ಚೆತ್ತುಕೊಂಡ ಪೊಲೀಸರು ತಂತ್ರಕಾರ್ಯಮಗ್ನರಾಗಿದ್ದಾರೆ ಅಲ್ಲದೆ ಎಲ್ಲ ಜಿಲ್ಲಾ ಪೋಲಿಸ್ ಸ್ಟೇಶನ್ ಗಳಿಗೆ ಮಾಹಿತಿಯನ್ನು ರವಾನಿಸಿದ್ದಾರೆ.ಈಗಾಗಲೇ ಈ ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಈಗ ಆರೋಪಿಗಳ ಬಂಧನಕ್ಕಾಗಿ ಬಲೆ ಬಿಸಿದ್ದಾರೆ ಎಂದು  ತಿಳಿದುಬಂದಿದೆ.

Trending News