SBI: ನಾರಿ ಶಕ್ತಿಗೆ ತಲೆಬಾಗಿದ ಸ್ಟೇಟ್ ಬ್ಯಾಂಕ್, ಗರ್ಭವತಿ ಮಹಿಳೆಯರು 'ಅನರ್ಹ' ಎಂದು ಹೇಳಿದ ಆದೇಶ ವಾಪಸ್

ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಗರ್ಭಿಣಿ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ  (SBI Woman Recruitment) ಪರಿಷ್ಕೃತ ಮಾರ್ಗಸೂಚಿಗಳನ್ನು ಸ್ಥಗಿತಗಿಲಿಸಲು  ಎಸ್‌ಬಿಐ ನಿರ್ಧರಿಸಿದೆ. ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಹಳೆಯ ನಿಯಮಗಳೇ ಅನ್ವಯಿಸಲಿದೆ ಎಂದು ಬ್ಯಾಂಕ್ (SBI) ಹೇಳಿದೆ.

Written by - Nitin Tabib | Last Updated : Jan 29, 2022, 10:39 PM IST
  • ಇತ್ತೀಚೆಗಷ್ಟೇ SBI ಹೊಸ ಮಾರ್ಗಸೂಚಿ ಜಾರಿಗೊಳಿಸಿತ್ತು.
  • ನಿಯಮ ಮಹಿಳೆಯರ ವಿರುದ್ಧವಾಗಿದೆ ಎಂದು ಹೇಳಿದ್ದ ಕಾರ್ಮಿಕ ಸಂಘಟನೆ.
  • ವಿರೋಧದ ಬಳಿಕ ಮಹಿಳಾ ಶಕ್ತಿಗೆ ತಲೆಬಾಗಿದೆ ಬ್ಯಾಂಕ್
SBI: ನಾರಿ ಶಕ್ತಿಗೆ ತಲೆಬಾಗಿದ ಸ್ಟೇಟ್ ಬ್ಯಾಂಕ್, ಗರ್ಭವತಿ ಮಹಿಳೆಯರು 'ಅನರ್ಹ' ಎಂದು ಹೇಳಿದ ಆದೇಶ ವಾಪಸ್ title=
SBI Woman Recruitment (File Photo)

SBI Recruitment New Rule Withdraw - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಕೂಡ ಮಹಿಳಾ ಶಕ್ತಿ ಮತ್ತು ಹಕ್ಕುಗಳ ಮುಂದೆ ತಲೆಬಾಗಿದೆ. ಭಾರೀ ಪ್ರತಿಭಟನೆಯ ನಂತರ ಗರ್ಭಿಣಿಯರು ಉದ್ಯೋಗಕ್ಕೆ ಅನರ್ಹರು ಎಂಬ ಮಾರ್ಗಸೂಚಿಯನ್ನು ಬ್ಯಾಂಕ್ ಹಿಂಪಡೆದಿದೆ.

ಡಿಸೆಂಬರ್‌ನಲ್ಲಿ ಹೊರಡಿಸಿದ್ದ ಈ ಸುತ್ತೋಲೆಯಲ್ಲಿ, ಎಸ್‌ಬಿಐ 3 ತಿಂಗಳಿಗಿಂತ ಹೆಚ್ಚು ಗರ್ಭಿಣಿ ಮಹಿಳೆಯನ್ನು ನೇಮಕಾತಿಗೆ ತಾತ್ಕಾಲಿಕವಾಗಿ ಅನರ್ಹ ಎಂದು ಹೇಳಿತ್ತು. ಅಂತಹ ಮಹಿಳೆ ಮಗುವಿಗೆ ಜನ್ಮ ನೀಡಿದ 4 ತಿಂಗಳ ನಂತರ ಮಾತ್ರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ (State Bank Of India) ಹೇಳಿತ್ತು. ಕಾರ್ಮಿಕ ಸಂಘಟನೆಗಳು ಮತ್ತು ದೆಹಲಿ ಮಹಿಳಾ ಆಯೋಗ  (Delhi Women Commission) ಇದರ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿದ್ದವು. ಎಲ್ಲೆಡೆಯಿಂದ ಟೀಕೆಗಳು ಕೇಳಿ ಬಂದ ನಂತರ, ಬ್ಯಾಂಕ್ ಶನಿವಾರ ಈ ವಿವಾದಾತ್ಮಕ ಆದೇಶವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದೆ. ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದಂತೆ ಹಳೆಯ ನಿಯಮಗಳು ಮಾತ್ರ ಅನ್ವಯಿಸಲಿವೆ ಎಂದು ಎಸ್‌ಬಿಐ ಹೇಳಿದೆ. ಈ ನಿಯತಾಂಕಗಳಲ್ಲಿನ ಬದಲಾವಣೆಯ ಹಿಂದಿನ ಉದ್ದೇಶವು ಅನೇಕ ಅಸ್ಪಷ್ಟ ಅಂಶಗಳನ್ನು ತೆರವುಗೊಳಿಸುವುದಾಗಿದೆ ಎಂದು ಬ್ಯಾಂಕ್ (SBI Rule Change) ಹೇಳಿದೆ.

ಇದನ್ನೂ ಓದಿ-SBI Alert: ಮಾರ್ಚ್ 31ರೊಳಗೆ ಈ ಕೆಲಸ ಮಾಡದಿದ್ದಲ್ಲಿ block ಆಗಲಿದೆ ನಿಮ್ಮ ಅಕೌಂಟ್

ಮಹಿಳಾ ಆಯೋಗ ಜಾರಿಗೊಳಿಸಿತ್ತು ನೋಟಿಸ್ 
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ (Swati Maliwal) ಅವರು ಹೊಸ ಎಸ್‌ಬಿಐ ನಿಯಮಗಳು ಮಹಿಳೆಯರ ವಿರುದ್ಧ ತಾರತಮ್ಯ ಎಂದು ಬ್ಯಾಂಕ್‌ಗೆ ನೋಟಿಸ್ ನೀಡಿದ್ದರು. ಇದು ಹೆರಿಗೆ ಹಕ್ಕುಗಳ ಉಲ್ಲಂಘನೆ ಮತ್ತು ಕೆಲಸದ ಸ್ಥಳದಲ್ಲಿ ಹೆಚ್ಚುತ್ತಿರುವ ತಾರತಮ್ಯ ಎಂದು ಅವರು ಹೇಳಿದ್ದರು. ಸಿಪಿಐ ಸಂಸದ ಬಿನೋಯ್ ವಿಶ್ವಂ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಈ ಮಾರ್ಗಸೂಚಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಲ್ಲದೇ ಅಖಿಲ ಭಾರತ ಎಸ್‌ಬಿಐ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣ ಅವರು ಎಸ್‌ಬಿಐ ಆಡಳಿತ ಮಂಡಳಿಗೆ ಪತ್ರ ಬರೆದು ನಿಯಮ ರದ್ದುಗೊಳಿಸುವಂತೆ ಒತ್ತಡ ಹೇರಿದ್ದರು.

ಇದನ್ನೂ ಓದಿ-ಹೊಸ ಸೇವೆ ಆರಂಭಿಸಿದ SBI, ಎಲ್ಲಾ ಗ್ರಾಹಕರಿಗೂ ಸಿಗಲಿದೆ ಭರ್ಜರಿ ಲಾಭ

ಮಹಿಳಾ ನೌಕರರ ಬಡ್ತಿಗೆ ಇದರಿಂದ ಹೊಡೆತ ಬೀಳುತ್ತಿತ್ತು
ಹೊಸ ನಿಯಮವನ್ನು ಟೀಕಿಸಿದ್ದ ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ​​(AIDWA) ಇದು ಮಹಿಳಾ ಉದ್ಯೋಗಿಗಳ ಬಡ್ತಿಯ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿತ್ತು. ಹೊಸ ನೇಮಕಾತಿಗಳನ್ನು ತೆಗೆದುಕೊಳ್ಳುವ ಮೂಲಕ, ಈ ನಿಯಮವನ್ನು ಡಿಸೆಂಬರ್ 21, 2021 ರಿಂದ ಜಾರಿಗೆ ತರಲಾಗಿತ್ತು, ಆದರೆ ಬಡ್ತಿಯ ಸಂದರ್ಭದಲ್ಲಿ, ಇದು ಏಪ್ರಿಲ್ 1, 2022 ರಿಂದ ಅನ್ವಯಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಮಹಿಳಾ ಉದ್ಯೋಗಿಗಳ ಬಡ್ತಿಯ ಮೇಲೆ ಅದರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅದು ಹೇಳಿತ್ತು.

ಇದನ್ನೂ ಓದಿ-SBI Alert: 40 ಕೋಟಿ ಗ್ರಾಹಕರಿಗೆ SBI ಎಚ್ಚರಿಕೆ! ಈ ಕಾರಣದಿಂದಾಗಿ ನಿಮ್ಮ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News