ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಎಚ್ಚರ! ಸದ್ಯದಲ್ಲೇ ರದ್ದಾಗಲಿದೆ ಈ ಸೇವೆ

2015ರಲ್ಲಿ ತನ್ನ ಮೊಬೈಲ್ ವ್ಯಾಲೆಟ್ SBI Buddy ಅನ್ನು 13 ಭಾಷೆಗಳಲ್ಲಿ ಪ್ರಾರಂಭಿಸಿತ್ತು.

Last Updated : Oct 28, 2018, 02:49 PM IST
ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಎಚ್ಚರ! ಸದ್ಯದಲ್ಲೇ ರದ್ದಾಗಲಿದೆ ಈ ಸೇವೆ title=

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮೊಬೈಲ್ ವ್ಯಾಲೆಟ್ SBI Buddy ಸೇವೆಯನ್ನು ರದ್ದುಗೊಳಿಸಲು ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ. ದೇಶದಲ್ಲೇ ಅತಿ ದೊಡ್ಡ ಬ್ಯಾಂಕ್ ಎನಿಸಿರುವ ಎಸ್‌ಬಿಐ ಇದೀಗ ಮೊಬೈಲ್ ವ್ಯಾಲೆಟ್ ಸೇವೆ ನಿಲ್ಲಿಸುತ್ತಿರುವುದಾಗಿ ಗ್ರಾಹಕರಿಗೆ ಮಾಹಿತಿ ನೀಡಿದೆ. 

ಈಗಾಗಲೇ ಬ್ಯಾಲೆನ್ಸ್ ಇಲ್ಲದ ಮೊಬೈಲ್ ವ್ಯಾಲೆಟ್ಗಳನ್ನು ಮುಚ್ಚಿರುವ ಎಸ್‌ಬಿಐ, ನವೆಂಬರ್ 30ರೊಳಗೆ ಮೊಬೈಲ್ ವ್ಯಾಲೆಟ್ SBI Buddyಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್'ನಲ್ಲಿ ಗ್ರಾಹಕರಿಗೆ ತಿಳಿಸಿದೆ. 

2015ರಲ್ಲಿ ತನ್ನ ಮೊಬೈಲ್ ವ್ಯಾಲೆಟ್ SBI Buddy ಅನ್ನು 13 ಭಾಷೆಗಳಲ್ಲಿ ಪ್ರಾರಂಭಿಸಿದ್ದ ಎಸ್‌ಬಿಐ, ಮಾಸ್ಟರ್ ಕಾರ್ಡ್ ಸೇವೆ ಒದಗಿಸುವುದಲ್ಲದೆ, ಆಕ್ಸೆಂಚರ್ ಈ ಸೇವೆಯ ತಾಂತ್ರಿಕ ಪಾಲುದಾರಿಕೆ ಹೊಂದಿತ್ತು. ಅಷ್ಟಕ್ಕೂ ಮೊಬೈಲ್ ವ್ಯಾಲೆಟ್ ಸೇವೆಯನ್ನು ಒದಗಿಸಿದ ಬ್ಯಾಂಕ್ ಗಳಲ್ಲಿ ಎಸ್ಬಿಐ ಮೊದಲನೆಯದೆನಲ್ಲ. ಇದಕ್ಕೂ ಮೊದಲು HDFC ಪೇಜೈಪ್ ಮತ್ತಿ ಐಸಿಐಸಿಐ ಪಾಕೆಟ್ ಹೆಸರುಗಳಲ್ಲಿ ಮೊಬೈಲ್ ವ್ಯಾಲೆಟ್ ಸೇವೆ ಆರಂಭಿಸಿದ್ದವು. ಎಸ್ಬಿಐಯ ಈ ಮೊಬೈಲ್ ವಾಲೆಟ್ ಎಸ್ಬಿಐ ಗ್ರಾಹಕರಿಗೆ ಮಾತ್ರವಲ್ಲದೆ ಎಲ್ಲಾ ಬ್ಯಾಂಕುಗಳ ಗ್ರಾಹಕರಿಗೆಯೂ ಸಹ ಲಭ್ಯವಿತ್ತು. 2017 ರ ಕೊನೆಯಲ್ಲಿ ಎಸ್ಬಿಐ 12.505 ಮಿಲಿಯನ್ ನೋಂದಾಯಿತ ಮೊಬೈಲ್ ವ್ಯಾಲೆಟ್ ಬಳಕೆದಾರರನ್ನು ಹೊಂದಿತ್ತು.

ಎಸ್‌ಬಿಐ ತನ್ನ ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿರುವ ಬೆನ್ನಲ್ಲೇ, SBI YONO ಆಪ್ ಆರಂಭಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಮೊಬೈಲ್ ಚಂದಾದಾರರು ಮತ್ತು ಟೆಕ್ಕಿಗಳನ್ನು ಗಮನದಲ್ಲಿಟ್ಟುಕೊಂಡು ಎಸ್ಬಿಐ ಈ ಅಪ್ಲಿಕೇಶನ್ ಪ್ರಾರಂಭಿಸಿದೆ. ಅದೇ ಸಮಯದಲ್ಲಿ, ತನ್ನ ಗ್ರಾಹಕರನ್ನು ಹೆಚ್ಚಿಸಲು ಬ್ಯಾಂಕ್ ರಿಲಯನ್ಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ My Life App, ಎಸ್ಬಿಐ ಮತ್ತು ಜಿಯೋ ಪೇಮೆಂಟ್ ಬ್ಯಾಂಕ್ನ ಸಹಾಯದಿಂದ ನಿಮಗೆ ಹಣಕಾಸಿನ ಸೇವೆಗಳನ್ನು ಒದಗಿಸಲಿದೆ.

Trending News