ಊಟ ಕೊಡದ ಹೆಂಡತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ..!

ಪತ್ನಿಯಿಂದ ನೊಂದುಕೊಂಡಿರುವ ಪತಿಯ ಮನವಿ ಮೇರೆಗೆ ಎಸ್ಪಿ ಪೂನಂ ಥಾಪಾ ಅವರು ಆತನ ಹೆಂಡತಿಗೆ ಕರೆ ಮಾಡಿ ಬುದ್ದಿವಾದ ಹೇಳಿದ್ದಾರೆ.

Written by - Puttaraj K Alur | Last Updated : Mar 3, 2022, 07:45 PM IST
  • ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ ಪತಿಯಿಂದ ರಕ್ಷಣೆಗೆ ಮನವಿ
  • ಚಿತ್ರಹಿಂಸೆ ನೀಡುತ್ತಿರುವ ಹೆಂಡತಿಯಿಂದ ರಕ್ಷಿಸಿ ಎಂದು ಠಾಣೆ ಮೆಟ್ಟಿಲೇರಿದ ಪತಿ
  • ಊಟ ಕೊಡದ ಪತ್ನಿಯಿಂದ ನನ್ನನ್ನು ಪಾರು ಮಾಡಿ ಎಂದು ಗಂಡನ ಅಳಲು
ಊಟ ಕೊಡದ ಹೆಂಡತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ..! title=
ಪತ್ನಿಯಿಂದ ಪಾರು ಮಾಡಿ ಎಂದು ಗಂಡನ ಅಳಲು

ಭಿಂಡ್: ‘ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ’ ಅನ್ನೋ ಗಾದೆಮಾತನ್ನು ನೀವು ಕೇಳಿಯೇ ಇರ್ತಿರಿ. ಪತಿ-ಪತ್ನಿಯರ ಕೌಟುಂಬಿಕ ಕಲಹದ ಸುದ್ದಿಗಳನ್ನು ನೀವು ಪ್ರತಿದಿನ ಟಿವಿ ಮತ್ತು ಪತ್ರಿಕೆಗಳಲ್ಲಿ ಓದಿರುತ್ತೀರಿ. ಬಹುತೇಕ ಪ್ರಕರಣಗಳಲ್ಲಿ ಹೆಂಡತಿಯ ಮೇಲೆ ಗಂಡ ದೌರ್ಜನ್ಯವೆಸಗಿರುತ್ತಾನೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಮಧ್ಯಪ್ರದೇಶದ ಭಿಂಡ್‌ನಲ್ಲಿ ಪತಿಗೆ ಪತ್ನಿಯೇ ಕಿರುಕುಳ ನೀಡಿರುವ ಘಟನೆ ನಡೆದಿದೆ. ಪತ್ನಿಯ ಕಿರುಕುಳಕ್ಕೆ ನೊಂದ ಪತಿ ಸ್ವತಃ ಮಹಿಳಾ ಕೋಶದ ಡಿಎಸ್ಪಿ(Women's Cell DSP) ಎದುರು ಹಾಜರಾಗಿ ತನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ.

ಸಮಯಕ್ಕೆ ಸರಿಯಾಗಿ ಊಟ ಕೊಡದ ಪತ್ನಿ!

ಭಿಂಡ್‌(Madhya Pradesh's Bhind)ನ ಪುರದಲ್ಲಿ ನೆಲೆಸಿರುವ ಮನೋಜ್‌ಕುಮಾರ್‌ ಎಂಬುವವರ ಪತ್ನಿ ಸೋನಂ ಕಳೆದ 2 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾಳಂತೆ. ಇದರಿಂದ ಸಾಕಷ್ಟು ನೊಂದಿರುವ ಪತಿ ತನ್ನನ್ನು ಹೇಗಾದರೂ ಮಾಡಿ ಪತ್ನಿಯಿಂದ ರಕ್ಷಿಸಿ ಅಂತಾ ಹೇಳಿದ್ದಾನೆ. ಪತ್ನಿ ತನಗೆ ದೈಹಿಕ ಮತ್ತು ಮಾನಸಿಕವಾಗಿ ನಿರಂತರ ಹಿಂಸಿಸುತ್ತಿದ್ದಾಳೆಂದು(Harassment Case) ಆರೋಪಿಸಿದ್ದಾನೆ. ತನಗೆ ಸರಿಯಾದ ಸಮಯಕ್ಕೆ ಹೆಂಡತಿ ಊಟ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ವರದಕ್ಷಿಣೆ ಆರೋಪದ ಮೇರೆಗೆ ಜೈಲಿಗೆ ಹಾಕಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾಳೆಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: PM Mudra Yojana : ಸ್ವಂತ ಉದ್ಯೋಗಕ್ಕೆ ಸರ್ಕಾರ ನೀಡುತ್ತಿದೆ ₹10 ಲಕ್ಷ : 10 ದಿನಗಳಲ್ಲಿ ಕೈಗೆ ಸಿಗುತ್ತೆ ಹಣ!

ನನ್ನ ಪತ್ನಿ ಇತರರೊಂದಿಗೆ ಫೋನಿನಲ್ಲಿ ನಿರಂತರವಾಗಿ ಮಾತನಾಡುತ್ತಿರುತ್ತಾಳೆ. ಹೀಗೆಕೆ ಮಾಡುವೇ ಎಂದು ಪ್ರಶ್ನಿಸಿದರೆ ಪೋನ್ ಕಟ್ ಮಾಡಿ ತನಗೆ ತಾನೇ ಗಾಯಗೊಳಿಸಿಕೊಳ್ಳುತ್ತಾಳೆ. ನೀನೇ ನನ್ನ ಮೇಲೆ ಹಲ್ಲೆ ಮಾಡಿದ್ದೀಯಾ ಎಂದು ಆರೋಪಿಸಿ ಬೆದರಿಕೆ ಹಾಕುತ್ತಾಳೆ ಎಂದು ಹೇಳಿಕೊಂಡಿದ್ದಾನೆ.

ಅಳಿಯನ ಮಾತು ಕೇಳದ ಅತ್ತೆ..!

ಪತ್ನಿಯಿಂದ ನೊಂದಿರುವ ಮನೋಜ್ ಕುಮಾರ್ ಈ ವಿಚಾರವಾಗಿ(Wife Torturing Husband)ಅನೇಕ ಬಾರಿ ಅತ್ತಿಗೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನನ್ನ ಮಾತಿಗೆ ಅತ್ತೆಯ ಕಡೆಯವರು ಕಿವಿಗೊಡುತ್ತಿಲ್ಲ. ಈ ಬಗ್ಗೆ ಬರೌಲಿ ಪೊಲೀಸ್ ಠಾಣೆ(Police Station)ಗೆ ತೆರಳಿ ಸಾಕಷ್ಟು ಬಾರಿ ಮನವಿ ಮಾಡಿದರೂ ಅಲ್ಲಿಯೂ ಕೇಳಲಿಲ್ಲ ಅಂತಾ ಹೇಳಿದ್ದಾನೆ. ಇದರಿಂದ ನಾನು ಬೇಸತ್ತು ಹೋಗಿದ್ದೇನೆಂದು ಅಸಮಾಧಾನಗೊಂಡಿರುವ ಮನೋಜ್ ಕುಮಾರ್, ಮಹಿಳಾ ಠಾಣೆ ಡಿಎಸ್‌ಪಿ ಪೂನಂ ಥಾಪಾ ಬಳಿ ಬಂದು ಏನಾದರೂ ಮಾಡಿ ತನ್ನನ್ನು ಈ ನರಕದಿಂದ ಪಾರು ಮಾಡಿ ಅಂತಾ ಗೋಗರೆದಿದ್ದಾನೆ. ಪತ್ನಿ ನೀಡುತ್ತಿರುವ ಕಿರುಕುಳದ ಬಗ್ಗೆ ಲಿಖಿತ ದೂರನ್ನೂ ನೀಡಿದ್ದಾನೆ.

ಇದನ್ನೂ ಓದಿ: Russia-Ukraine Crisis: ಮೋದಿ ಸರ್ಕಾರದ ವಿದೇಶಾಂಗ ನೀತಿಗೆ Shashi Tharoor ಫಿದಾ, ಹೇಳಿದ್ದೇನು ಗೊತ್ತಾ?

ವಿಷಯ ಇತ್ಯರ್ಥಪಡಿಸುವ ಭರವಸೆ ನೀಡಿರುವ ಎಸ್ಪಿ

ಪತ್ನಿಯಿಂದ ನೊಂದುಕೊಂಡಿರುವ ಪತಿಯ ಮನವಿ ಮೇರೆಗೆ ಎಸ್ಪಿ ಪೂನಂ ಥಾಪಾ(SP Poonam Thapa) ಅವರು ಆತನ ಹೆಂಡತಿಗೆ ಕರೆ ಮಾಡಿ ಬುದ್ದಿವಾದ ಹೇಳಿದ್ದಾರೆ. ಗಂಡ-ಹೆಂಡತಿ ನಡುವಿನ ಈ ವಿಷಯವನ್ನು ಮಾತುಕತೆ ಮೂಲಕ ಶೀಘ್ರವೇ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News