ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ (ಜೂನ್ 1) ಜಾರಿ ನಿರ್ದೇಶನಾಲಯದ ವಶದಲ್ಲಿರುವ ಆರೋಗ್ಯ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಬೆಂಬಲಕ್ಕೆ ಧಾವಿಸುತ್ತಾ ದೆಹಲಿಯಲ್ಲಿ ಮೊಹಲ್ಲಾ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದಕ್ಕೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಬೇಕೆಂದು ಹೇಳಿದ್ದಾರೆ.
ಇದನ್ನು ಓದಿ: ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?
ಸೋಮವಾರದಂದು ಇಡಿ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಿ, ಈಗ ಅವರನ್ನು ಜೂನ್ 9 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.
ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿಶ್ವದ ಜನರು ಭೇಟಿ ನೀಡುತ್ತಿರುವ ಮೊಹಲ್ಲಾ ಚಿಕಿತ್ಸಾಲಯದ ಮಾದರಿಯನ್ನು ಅವರು ನೀಡಿದ್ದರಿಂದ ದೇಶವು ಹೆಮ್ಮೆಪಡಬೇಕು, ಇದಕ್ಕಾಗಿ ಅವರಿಗೆ ಪದ್ಮಭೂಷಣ ಅಥವಾ ಪದ್ಮವಿಭೂಷಣದಂತಹ ಉನ್ನತ ಪ್ರಶಸ್ತಿಗಳನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನು ಓದಿ: Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ
ಈ ಹಿಂದೆ ಸಿಬಿಐ ತನ್ನ ಸಚಿವರಿಗೆ ಕ್ಲೀನ್ ಚಿಟ್ ನೀಡಿತ್ತು, ಈಗ ಇಡಿ ತನಿಖೆ ನಡೆಸಲಿದೆ ಮತ್ತು ಜೈನ್ ಮತ್ತೆ ಕ್ಲೀನ್ ಹೊರಬರುತ್ತಾರೆ ಎಂದು ಅವರು ಹೇಳಿದರು.ಸತ್ಯೇಂದ್ರ ಜೈನ್ ಅವರು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದಲ್ಲಿ ಆರೋಗ್ಯ, ಅಧಿಕಾರ ಮತ್ತು ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
ಸೋಮವಾರದಂದು ಜೈನ್ ಬಂಧನದ ನಂತರ, ಹಿರಿಯ ಎಎಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ದೆಹಲಿ ಆರೋಗ್ಯ ಸಚಿವರನ್ನು ಹಿಮಾಚಲ ಪ್ರದೇಶದ ಎಎಪಿ ಉಸ್ತುವಾರಿಯನ್ನಾಗಿ ಮಾಡಿದ್ದರಿಂದ ಈ ಬಂಧನವಾಗಿದೆ ಎಂದು ಹೇಳಿದ್ದರು, ಅಲ್ಲಿ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿದೆ ಆರೋಪಿಸಿದರು.
ಇನ್ನೊಂದೆಡೆಗೆ ಸತ್ಯೇಂದ್ರ ಜೈನ್ ಬೆಂಬಲ ನಿಂತಿರುವ ಕೇಜ್ರಿವಾಲ್ ಅವರು ಜೈನ್ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ."ನಾನು ಜೈನ್ ವಿರುದ್ಧದ ಪ್ರಕರಣವನ್ನು ಅಧ್ಯಯನ ಮಾಡಿದ್ದೇನೆ. ಇದು ಸಂಪೂರ್ಣವಾಗಿ ನಕಲಿ ಮತ್ತು ರಾಜಕೀಯ ಕಾರಣಗಳಿಂದ ಪ್ರೇರೇಪಿಸಲ್ಪಟ್ಟಿದೆ 'ಎಂದು ಅವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.