ತನ್ನ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಸಾರಾ ತೆಂಡೂಲ್ಕರ್: ಸೌಂದರ್ಯಕ್ಕಾಗಿ ಈ ಕೆಲಸ ಮಾಡುತ್ತಾರಂತೆ?

ಸಾರಾ ತೆಂಡೂಲ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಸುಂದರವಾಗಿರುವ ರಹಸ್ಯವನ್ನು ಹೇಳಿದ್ದಾರೆ. ಇದರೊಂದಿಗೆ ಸೌಂದರ್ಯಕ್ಕಾಗಿ ಯಾವ ರೀತಿ ಕಾಳಜಿ ವಹಿಸುವುದು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.

Written by - Puttaraj K Alur | Last Updated : Dec 25, 2021, 08:37 AM IST
  • ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟ ಸಾರಾ ತೆಂಡೂಲ್ಕರ್
  • ಚರ್ಮದ ಆರೈಕೆಗೆ ಏನು ಮಾಡಬೇಕೆಂದು ತಿಳಿಸಿಕೊಟ್ಟ ತೆಂಡೂಲ್ಕರ್ ಪುತ್ರಿ
  • ಸಾರಾಳನ್ನು ಗ್ಲಾಮರಸ್ ರಾಣಿ ಎಂದ ಸೋಷಿಯಲ್ ಮೀಡಿಯಾ ಬಳಕೆದಾರರು
ತನ್ನ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಸಾರಾ ತೆಂಡೂಲ್ಕರ್: ಸೌಂದರ್ಯಕ್ಕಾಗಿ ಈ ಕೆಲಸ ಮಾಡುತ್ತಾರಂತೆ? title=
ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ ಸಾರಾ

ನವದೆಹಲಿ: ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಫಿಟ್ನೆಸ್ ವಿಷಯದಲ್ಲೂ ಅವರು ತುಂಬಾ ಕಾಳಜಿವಹಿಸುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮಾಡೆಲಿಂಗ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್(Instagram Post)ನಲ್ಲಿ ತಮ್ಮ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ.

ಸಾರಾ ಈ ಪೋಸ್ಟ್ ಮಾಡಿದ್ದಾರೆ

ಸಾರಾ ತೆಂಡೂಲ್ಕರ್(Sara Tendulkar) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಯಾವುದೋ ವಸ್ತುವಿನ ಜಾಹೀರಾತು ಮಾಡುತ್ತಿರುವುದು ಕಂಡುಬಂದಿದೆ. ಶೀರ್ಷಿಕೆಯಲ್ಲಿ ಬ್ಯೂಟಿ ಪ್ರಾಡಕ್ಟ್ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ತ್ವಚೆಯ ಆರೈಕೆಗೆ ಏನು ಮಾಡಬೇಕು? ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ. ‘ಈ ಉತ್ಪನ್ನವು ಚರ್ಮವನ್ನು ಹೈಡ್ರೀಕರಿಸುವುದನ್ನು ತಡೆಯುತ್ತದೆ ಮತ್ತು ಹೊಳೆಯಲು ಸಹಾಯ ಮಾಡುತ್ತದೆ’ ಎಂದು ಸಾರಾ ಕ್ಯಾಪ್ಶನ್ ಬರೆದಿದ್ದಾರೆ. ‘ಇದು ನನ್ನ ಚರ್ಮವನ್ನು ಸಹ ರಕ್ಷಿಸುತ್ತದೆ’ ಎಂದು ಹೇಳಿರುವ ಸಾರಾ ಅವರ ಈ ಪೋಸ್ಟ್ ವೈರಲ್ ಆಗಿದೆ. ಅನೇಕ ಬಳಕೆದಾರರು ಕಾಮೆಂಟ್‌ಗಳಲ್ಲಿ ಅವರ ಸೌಂದರ್ಯವನ್ನು ಹೊಗಳಿದ್ದಾರೆ. ಈ ವಿಶೇಷ ಉತ್ಪನ್ನದಿಂದ ಅವರ ಚರ್ಮವು ಹೊಳೆಯುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬ್ರೆಜಿಲ್ ನ ಪುಟ್ಬಾಲ್ ದಂತಕಥೆ ಪೀಲೆ ಆಸ್ಪತ್ರೆಯಿಂದ ಬಿಡುಗಡೆ

ಸಾರಾ ಸೌಂದರ್ಯದ ಬಗ್ಗೆ ಮೆಚ್ಚುಗೆ

ಸಾರಾ ತೆಂಡೂಲ್ಕರ್ ಅವರ ಈ ಪೋಸ್ಟ್ ವೈರಲ್(Sara Tendulkar Beauty) ಆಗಿದೆ. ಅನೇಕ ಬಳಕೆದಾರರು ಈ ಬಗ್ಗೆ ಚೆನ್ನಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಾರಾ ಸೌಂದರ್ಯವನ್ನು ಜನ ಕೊಂಡಾಡುತ್ತಿದ್ದಾರೆ. ಅನೇಕ ಜನರು ಶುಬ್ಮಾನ್ ಗಿಲ್ ಅವರ ಜೊತೆಗಿನ ಸ್ನೇಹ-ಸಂಬಂಧವನ್ನು ಇದೇ ವೇಳೆ ಸಾರಾಗೆ ನೆನಪಿಸಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕ ಬಳಕೆದಾರರು ಅವರನ್ನು ಗ್ಲಾಮರಸ್ ರಾಣಿ ಎಂದು ಕರೆದಿದ್ದಾರೆ.

ಶುಭ್‌ಮಾನ್‌ನ ಸಹೋದರಿ ಫಾಲೋ ಮಾಡುವ ಸಾರಾ

ಶುಬ್ಮನ್ ಗಿಲ್(Shubman Gill) ಮತ್ತು ಸಾರಾ ತೆಂಡೂಲ್ಕರ್ Instagram ನಲ್ಲಿ ಒಬ್ಬರಿಗೊಬ್ಬರು ಫಾಲೋವರ್ಸ್ ಆಗಿದ್ದಾರೆ. ಇದಷ್ಟೇ ಅಲ್ಲ ಇಬ್ಬರೂ ಪರಸ್ಪರ ಕುಟುಂಬದ ಸದಸ್ಯರನ್ನು ಫಾಲೋ ಮಾಡುತ್ತಿದ್ದಾರೆ. ಶುಬ್ಮನ್ ಗಿಲ್ ಸಾರಾ ಕುಟುಂಬದ ಎಲ್ಲ ಸದಸ್ಯರನ್ನು ಅನುಸರಿಸುತ್ತಿದ್ದಾರೆ. ಆದರೆ ಸಾರಾ ಅವರು ಗಿಲ್ ಅವರ ಸಹೋದರಿ ಸೆಹ್ನಿಲ್ ಗಿಲ್ ಅವರನ್ನು Instagram ನಲ್ಲಿ ಅನುಸರಿಸುತ್ತಾರೆ. ಸಾರಾ ಇತ್ತೀಚೆಗೆ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ, ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.  

Sara  

ಇದನ್ನೂ ಓದಿ: 'ಭಜ್ಜಿ ಸಂಪೂರ್ಣ ಮ್ಯಾಚ್ ವಿನ್ನರ್'- ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ

ಶುಭಮನ್ ಗಿಲ್-ಸಾರಾ ಡೇಟಿಂಗ್ ಬಗ್ಗೆ ಚರ್ಚೆ

ಇತ್ತೀಚೆಗೆ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್(Shubman Gill) ಅವರ ಡೇಟಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ತಾನು ಇನ್ನೂ ಸಿಂಗಲ್ ಎಂದು ಗಿಲ್ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಜನರೊಂದಿಗೆ ಪ್ರಶ್ನೋತ್ತರ ಸೆಷನ್ ಮಾಡುವ ಮೂಲಕ ಗಿಲ್ ಅವರು ಸಿಂಗಲ್ ಆಗಿರುವ ಬಗ್ಗೆ ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News