ನವದೆಹಲಿ: ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ(ED)ವು ವಶಕ್ಕೆ ತೆಗೆದುಕೊಂಡಿದೆ. ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನಿವಾಸದಲ್ಲಿ 9 ಗಂಟೆಗಳ ಕಾಲ ಶೋಧ ನಡೆಸಿದ ನಂತರ ಇ.ಡಿ ಅವರನ್ನು ವಶಕ್ಕೆ ಪಡೆದಿದೆ. ಕೇಂದ್ರೀಯ ಸಂಸ್ಥೆಯ ತಂಡವು ಸಂಜಯ್ ರಾವತ್ ಅವರೊಂದಿಗೆ ಕಚೇರಿಗೆ ತಲುಪಿದೆ.
ಇಡಿ ಕಚೇರಿಯನ್ನು ತಲುಪಿದ ಬಳಿಕ ಜೀ ನ್ಯೂಸ್‌ನೊಂದಿಗೆ ಮಾತನಾಡಿದ ಸಂಜಯ್ ರಾವತ್, ‘ತಮ್ಮ ವಿರುದ್ಧ ಸುಳ್ಳು ಆರೋಪಗಳು ಮತ್ತು ಸುಳ್ಳು ಪುರಾವೆ ತೋರಿಸುವ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಹೇಳಿದರು. ‘ಈ ಕ್ರಮ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ನಾನೂ ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಬಿಡುವುದಿಲ್ಲ. ನನ್ನನ್ನು ಬಂಧಿಸಲು ಷಡ್ಯಂತ್ರ ನಡೆಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ: ಪೆಟ್ರೋಲ್-ಡೀಸೆಲ್ ಬೆಲೆಗಳ ಮೇಲೆ ಭಾರೀ ಪರಿಣಾಮ!
ಸಂಜಯ್ ರಾವುತ್‍ಗೆ ಹೆಚ್ಚಾದ ಸಂಕಷ್ಟ!
ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಇಡಿ ಕಚೇರಿಗೆ ಕರೆದೊಯ್ಯುವ ಮುನ್ನ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಜಾರಿ ನಿರ್ದೇಶನಾಲಯ (ED) ಶಿವಸೇನಾ ಸಂಸದರ ಮನೆಯಲ್ಲಿ 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಸಂಜಯ್ ರಾವತ್ ಅವರ 'ಮೈತ್ರಿ' ನಿವಾಸದ ಮೇಲೆ ಇಡಿ ದಾಳಿ ನಡೆಸಿದಾಗ ಶಿವಸೇನಾ ಸಂಸದನಿಗೆ ದೊಡ್ಡ ಸಂಕಷ್ಟ ಎದುರಾಗಿದೆ.
ರಾವುತ್ ಮುಂಬೈ ಮನೆ ದಾಳಿ
ಮುಂಬೈನಲ್ಲಿರುವ ರಾವುತ್ ಅವರ ಮನೆ ಮೇಲೆ 12 ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದಕ್ಕೂ ಮೊದಲು ಶಿವಸೇನಾ ನಾಯಕ ಇ.ಡಿ ನೀಡಿದ 2 ಸಮನ್ಸ್‌ಗಳಿಗೆ ಪ್ರತಿಕ್ರಿಯಿಸಲಿಲ್ಲ. ನಂತರ ಅವರ ದಾದರ್ ಫ್ಲಾಟ್‌ನಲ್ಲಿ ದಾಳಿ ನಡೆಸಲಾಯಿತು, ಇದನ್ನು ರಾವುತ್ ಪತ್ನಿ ವರ್ಷಾ ರಾವುತ್ ಮನಿ ಲಾಂಡರಿಂಗ್ ಮೂಲಕ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
#WATCH | Mumbai: Detained Shiv Sena leader Sanjay Raut at the terrace of the ED office building after he was brought there by ED officials in connection with Patra Chawl land scam case pic.twitter.com/Z09Y12nQX6
— ANI (@ANI) July 31, 2022
ಇದನ್ನೂ ಓದಿ: ಪತ್ರಾ ಚಾವ್ಲ್ ಭೂ ಹಗರಣ : ಸಂಜಯ್ ರಾವತ್ ಮನೆ ತಲುಪಿದ ಇಡಿ ತಂಡ
ಯಾವ ಪ್ರಕರಣದಲ್ಲಿ ಕ್ರಮ..?
ಮುಂಬೈನಲ್ಲಿನ ‘ಚಾಲ್’ ಮರುಅಭಿವೃದ್ಧಿಯಲ್ಲಿನ ಅಕ್ರಮಗಳು ಮತ್ತು ಅವರ ಪತ್ನಿ ಮತ್ತು ಇತರ 'ಸಹಚರರು' ಒಳಗೊಂಡ ವಹಿವಾಟುಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ರಾವತ್ ಅವರನ್ನು ಇ.ಡಿ ಕರೆಸಿತ್ತು. ಈ ಸಂಬಂಧ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ರಾವತ್ ಅವರು ಜುಲೈ 1ರಂದು ಮುಂಬೈನ ಏಜೆನ್ಸಿಯ ಮುಂದೆ ಹಾಜರಾಗಿದ್ದರು. ಇದರ ನಂತರ ಸಂಸ್ಥೆಯು 2 ಬಾರಿ ಅವರಿಗೆ ಸಮನ್ಸ್ ನೀಡಿತ್ತು.
‘ನಾನು ಶಿವಸೇನೆ ಬಿಡುವುದಿಲ್ಲ’
ಏತನ್ಮಧ್ಯೆ ರಾಜ್ಯಸಭಾ ಸದಸ್ಯರಾದ ರಾವುತ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ರಾಜಕೀಯ ಸೇಡು ತೀರಿಸಿಕೊಳ್ಳಲು ನನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ‘ಯಾವುದೇ ಹಗರಣದೊಂದಿಗೆ ನನಗೆ ಸಂಬಂಧವಿಲ್ಲವೆಂದು ನಾನು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುತ್ತೇನೆ’ ಎಂದು ಇ.ಡಿ ಕ್ರಮದ ನಂತರ ಅವರು ಟ್ವೀಟ್ ಮಾಡಿದ್ದಾರೆ. ‘ನಾನು ಸಾಯುತ್ತೇನೆ ಹೊರತು, ಶಿವಸೇನೆಯ ಪಕ್ಷವನ್ನು ಬಿಡುವುದಿಲ್ಲ’ವೆಂದು ಅವರು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.