ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದ ಪರಿಣಾಮ 12 ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್‌ನ ಮೊರ್‌ಬಿ ಜಿಲ್ಲೆಯಲ್ಲಿ ನಡೆದಿದೆ. ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಇನ್ನಷ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ: iPhone 13ಗೆ ಸೆಡ್ಡು ಹೊಡೆಯಲು ಬಂದಿದೆ Vivoನ ಪ್ರಬಲ ಸ್ಮಾರ್ಟ್‌ಫೋನ್!
ರಮೇಶಭಾಯಿ ನರಸಿಂಹಭಾಯಿ ಖಿರಾನಾ, ಶ್ಯಾಂಭಾಯಿ ರಮೇಶಭಾಯಿ ಕೋಲಿ, ರಮೇಶಭಾಯಿ ಮೇಘಾಭಾಯಿ ಕೋಲಿ, ದಿಲಾಭಾಯಿ ರಮೇಶಭಾಯಿ ಕೋಲಿ, ದೀಪಕಭಾಯ್ ಸೋಮಾನಿ, ರಾಜುಭಾಯಿ ಜೇರಂಭಾಯ್, ದಿಲೀಪಭಾಯಿ ರಮೇಶಭಾಯ್, ಶೀಟ್ಬೆನ್ ದಿಲೀಪ್ಭಾಯ್, ರಾಜಿಬೆನ್ ಭಾರವಾಡ್, ದೇವಿಬೆನ್ ಭಾರವಾಡ್, ಕಾಜಲ್ಬೆನ್ ಜೇಶಾಭಾಯಿ, ದಕ್ಷಬೆನ್ ರಮೇಶಭಾಯ್ ಕೋಲಿ ಮೃತ ದುರ್ದೈವಿಗಳು.
ಘಟನೆ ಬಗ್ಗೆ ಮಾಹಿತಿ ತಿಳಿದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ "ಮೋರ್ಬಿಯಲ್ಲಿ ಗೋಡೆ ಕುಸಿದು ಸಂಭವಿಸಿದ ದುರಂತ ಹೃದಯ ವಿದ್ರಾವಕವಾಗಿದೆ. ಮೃತ ಕುಟುಂಬಕ್ಕೆ ಬೆಂಬಲವಾಗಿ ಇರುತ್ತೇವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಅಧಿಕಾರಿಗಳು ಎಲ್ಲ ರೀತಿಯ ನೆರವು ನೀಡಲಿದ್ದಾರೆ" ಎಂದು ಭರವಸೆ ನೀಡಿದ್ದಾರೆ. ಇನ್ನು ಪಿಎಂಎನ್‌ಆರ್‌ಫ್ ನಿಂದ ಮೃತ ಕುಟುಂಬಕ್ಕೆ ತಲಾ 2 ಲಕ್ಷ ರೂ ಮತ್ತು ಗಾಯಾಳು ಕುಟುಂಬಕ್ಕೆ 50 ಸಾವಿರ ರೂ. ಧನ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ.
ಇನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಅವರು ಸಹ ತೀವ್ರ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ತ ಕುಟುಂಬಕ್ಕೆ ತಲಾ ರೂ.4 ಲಕ್ಷ ನೆರವು ಹಾಗೂ ಗಾಯಾಳು ಕುಟಂಬಕ್ಕೆ 50 ಸಾವಿರ ರೂ.ನೆರವು ನೀಡುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ವರ್ಲ್ಡ್ ವೈಡ್ KGF 2 ಬಾಕ್ಸ್ ಆಫೀಸ್ ಕಲೆಕ್ಷನ್ ₹1200 ಕೋಟಿಗೂ ಹೆಚ್ಚು!
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗೋಡೆ ಕುಸಿದಿದ್ದು, ಪರಿಣಾಮ ಕೆಲಸಗಾರರು ಅವಶೇಷದಡಿ ಸಿಲುಕಿದ್ದಾರೆ. ತಕ್ಷಣವೇ ಜೆಸಿಬಿ ಸಹಾಯದಿಂದ 12 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನಷ್ಟು ಮಂದಿ ಮಣ್ಣಿನಡಿ ಹೂತುಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.