ಜಿಯೋ ದೀಪಾವಳಿ ಆಫರ್; ಕೇವಲ 501 ರೂ.ಗೆ ಪಡೆಯಿರಿ ಸಾಕಷ್ಟು ಪ್ರಯೋಜನ!!!

ಜಿಯೋ ಗಿಫ್ಟ್ ಕಾರ್ಡ್ ಮೂಲಕ ಗ್ರಾಹಕರು 6 ತಿಂಗಳ ಅವಧಿಗೆ ಅನಿಯಮಿತ ಕರೆ, ಪ್ರತಿನಿತ್ಯ 500 ಎಂಬಿ ಡಾಟಾ ಜೊತೆಗೆ 300 ಉಚಿತ ಎಸ್ಎಂಎಸ್ ಸೌಲಭ್ಯವನ್ನೂ ಪಡೆಯಬಹುದು.

Last Updated : Oct 30, 2018, 05:03 PM IST
ಜಿಯೋ ದೀಪಾವಳಿ ಆಫರ್; ಕೇವಲ 501 ರೂ.ಗೆ ಪಡೆಯಿರಿ ಸಾಕಷ್ಟು ಪ್ರಯೋಜನ!!! title=

ನವದೆಹಲಿ: ಸಂಭ್ರಮದ ದೀಪಾವಳಿ ಹಬ್ಬದ ಉಡುಗೊರೆಯಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಈ ಆಫರ್ ಅಡಿಯಲ್ಲಿ ನಿಮ್ಮ ಹಳೆಯ ಫೋನ್ ನೀಡಿ ಹೊಸ ಜಿಯೋ ಫೋನ್ ಪಡೆಯಬಹುದು. ಇದಕ್ಕಾಗಿ ನೀವು ಕೇವಲ 501 ರೂ. ಪಾವತಿಸಬೇಕು ಅಷ್ಟೇ! ಈ ಆಪರ್ ಜಿಯೋ ಗಿಫ್ಟ್ ಕಾರ್ಡ್ ನೊಂದಿಗೆ ಲಭ್ಯ.

ಜಿಯೋ ನೂತನ ಗಿಫ್ಟ್ ಕಾರ್ದಿನ ಒಟ್ಟು ಬೆಲೆ 1,095 ರೂ.ಗಳಾಗಿದ್ದು, ಇದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಉಡುಗೊರೆಯಾಗಿ ನೀಡಬಹುದು. ಈ ರಿಲಯನ್ಸ್ ಜಿಯೋ ಫೋನ್ ಗಿಫ್ಟ್ ಕಾರ್ಡ್ ಅನ್ನು ಅಮೆಜಾನ್ ಇಂಡಿಯಾ ವೆಬ್ಸೈಟ್ ಮತ್ತು ರಿಲಯನ್ಸ್ ಡಿಜಿಟಲ್ ಸ್ಟೋರ್'ನಲ್ಲಿ ಖರೀದಿಸಬಹುದು. ಆದರೆ, ಒಮ್ಮೆ ಈ ಗಿಫ್ಟ್ ಕಾರ್ಡ್ ಖರೀದಿಸಿದ ಬಳಿಕ ಹಿಂದಿರುಗಿಸಲು ಸಾಧ್ಯವಿಲ್ಲ. ಹಾಗೆ ರೀಫಂಡ್ ಸೌಲಭ್ಯವೂ ಇಲ್ಲ ಎನ್ನಲಾಗಿದೆ. 

ಈ ಕಾರ್ಡ್ ಖರೀದಿಸಿದ ಬಳಿಕ ನಿಮ್ಮ ಯಾವುದೇ 2ಜಿ, 3ಜಿ ಅಥವಾ 4ಜಿ ಹಳೆಯ ಫೋನುಗಳನ್ನು ನೀಡಿ ಹೊಸ ಜಿಯೋ ಫೋನ್ ಖರೀದಿಸಬಹುದು. ಇದರಿಂದ 501 ರೂ.ಗೆ ಜಿಯೋ ಫೋನ್ ಖರೀದಿಸುವುದರೊಂದಿಗೆ ಉಳಿದ 594 ರೂ.ಗಳಿಗೆ 6 ತಿಂಗಳ ಅವಧಿಗೆ ನಿಮ್ಮ ಫೋನ್ ನಂಬರ್ ರೀಚಾರ್ಜ್ ಮಾಡಿಸಬಹುದು.

ಜಿಯೋ ಗಿಫ್ಟ್ ಕಾರ್ಡ್ ಮೂಲಕ ಖರೀದಿಸಿದ ಫೋನ್ಗಳಿಗೆ ವಿಶೇಷ ರೀಚಾರ್ಜ್ ಪ್ಲಾನ್ ಘೋಷಿಸಲಾಗಿದ್ದು, ಗ್ರಾಹಕರು ಈ ಪ್ಲಾನ್ ಅಡಿಯಲ್ಲಿ 6 ತಿಂಗಳ ಅವಧಿಗೆ ಅನಿಯಮಿತ ಕರೆ, ಪ್ರತಿನಿತ್ಯ 500 ಎಂಬಿ ಡಾಟಾ ಜೊತೆಗೆ 300 ಉಚಿತ ಎಸ್ಎಂಎಸ್ ಸೌಲಭ್ಯವನ್ನೂ ಪಡೆಯಬಹುದು. ಅಷ್ಟೇ ಅಲ್ಲದೆ ಗ್ರಾಹಕರು ಮಾನ್ಸೂನ್ ಹಂಗಾಮ ಆಫಾರ್ ಅಡಿಯಲ್ಲಿ 101 ರೂ ಗೆ 6 ಜಿಬಿ ಹೆಚುವರಿ ಡಾಟಾ ಪ್ರಯೋಜನವನ್ನೂ ಪಡೆಯಬಹುದು. ಇದೆಲ್ಲಾ ಸೇರಿ ಗ್ರಾಹಕರಿಗೆ ಒಟ್ಟು 90 ಜಿಬಿ ಡಾಟಾ ಸೌಲಭ್ಯ ದೊರೆಯಲಿದೆ. ರಿಲಯನ್ಸ್ ಗಿಫ್ಟ್ ಕಾರ್ಡ್ಗೆ ಬದಲಾಗಿ ಇತರ ಉತ್ಪನ್ನಗಳನ್ನೂ ಗ್ರಾಹಕರು ರಿಲಯನ್ಸ್ ಸ್ಟೋರ್ ನಲ್ಲಿ ಖರೀದಿಸಬಹುದು.

Trending News