YouTube ವಿಡಿಯೋ ವಿಕ್ಷೀಸಿ Abortion ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ, ಮುಂದೆನಾಯ್ತು ತಿಳಿಯಲು ಸುದ್ದಿ ಓದಿ

Lady Performs Self Abortion - ಸಾಮಾಜಿಕ ಮಾಧ್ಯಮ (Social Media) ವೇದಿಕೆಯಾದ YouTube ವೀಡಿಯೊ (YouTube Videos) ವಿಕ್ಷೀಸಿ ಅತ್ಯಾಚಾರ ಸಂತ್ರಸ್ತೆಯೊಬ್ಬಳು ತನ್ನ ಅಬಾರ್ಶನ್ (Abortion) ತಾನೇ ಮಾಡಿಕೊಂಡ ಆಘಾತಕಾರಿ ಸುದ್ದಿ ಮಹಾರಾಷ್ಟ್ರದ (Maharashtra) ನಾಗಪುರ್ (Nagpur) ದಿಂದ ವರದಿಯಾಗಿದೆ. ಈ ಮಗು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಸೇರಿದೆ ಎನ್ನಲಾಗುತ್ತಿದೆ.

Written by - Nitin Tabib | Last Updated : Sep 26, 2021, 01:24 PM IST
  • ಯುಟೂಬ್ ನೋಡಿ ಮನೆಯಲ್ಲಿಯೇ ಅಬಾರ್ಶನ್ ಮಾಡಿಕೊಂಡ ಯುವತಿ.
  • 6 ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ ಆರೋಪ.
  • 6 ವರ್ಷಗಳಲ್ಲಿ 50 ಬಾರಿ ರೇಪ್ ಮಾಡಿದ ಆರೋಪ.
YouTube ವಿಡಿಯೋ ವಿಕ್ಷೀಸಿ Abortion ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ, ಮುಂದೆನಾಯ್ತು ತಿಳಿಯಲು ಸುದ್ದಿ ಓದಿ title=
Lady Performs Self Abortion (Representational Image)

ನವದೆಹಲಿ: Lady Performs Self Abortion - ಮಹಾರಾಷ್ಟ್ರದ (Maharashtra) ನಾಗಪುರ್ (Nagpur) ನಿಂದ ಒಂದು ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಹೌದು, ಅಲ್ಲಿನ 24 ವರ್ಷದ ಮಹಿಳೆಯೊಬ್ಬಳು ಯುಟ್ಯೂಬ್ ವಿಡಿಯೋ (YouTube Videos) ವಿಕ್ಷೀಸಿ ತನ್ನ ಅಬಾರ್ಶನ್ (Self Abortion) ತಾನೇ ಮಾಡಿಕೊಂಡಿದ್ದಾಳೆ. ಘಟನೆ ನಡೆದ ಸಂದರ್ಭದಲ್ಲಿ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಳು ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬರುತ್ತಲೇ ಸಂತ್ರಸ್ತ ಮಹಿಳೆ ತನ್ನ ಪ್ರೇಮಿ ಸೊಹೇಲ್ ವಹಾಬ್ ಖಾನ್ ಮೇಲೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ.

ಕಳೆದ 6 ವರ್ಷಗಳಿಂದ ನಿರಂತರ ರೇಪ್ ನಡೆದಿದೆ
ನಾಗಪುರದ ಯಶೋಧರಾ ನಗರ (Yashodhara Nagar) ನಿವಾಸಿಯಾಗಿರುವ ಸಂತ್ರಸ್ತೆಯ ಪ್ರಕಾರ, ಆಕೆಯ ಪ್ರೇಮಿ 2016 ರಿಂದ ಮದುವೆಯ ಆಮೀಷವೊಡ್ಡಿ ನಿರಂತರವಾಗಿ ರೇಪ್ ಮಾಡುತ್ತಿದ್ದ. ವರದಿಗಳ ಪ್ರಕಾರ ಆರೋಪಿ ಸೊಹೇಲ್ (Sohail Vahab Khan) ಮಹಿಳೆಯನ್ನು ಸುತ್ತಾಡಿಸುವ ನೆಪ ಹೇಳಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿದ್ದ. ಈ ರೀತಿ ಆತ  ಮಹಿಳೆಯ ಮೇಲೆ ಸುಮಾರು 50ಕ್ಕೂ ಹೆಚ್ಚು ಬಾರಿ ರೇಪ್ ನಡೆಸಿದ್ದಾನೆ. ತಮ್ಮಿಬ್ಬರ ನಡುವೆ ನಡೆದ ಪ್ರೇಮ ಪ್ರಣಯದ ಕುರಿತು ಮಹಿಳೆ ತನ್ನ ಪೋಷಕರಿಗೂ ಕೂಡ ಮಾಹಿತಿ ನೀಡಿದ್ದಳು. ಆದರೆ, ಪ್ರೇಮಿ ಅವರಿಗೂ ಕೂಡ ತನ್ನ ಮಾತಿನಿಂದ ಮರುಳಾಗಿಸಿ ಪೊಲೀಸರಿಂದ ಪಾರಾಗುತ್ತಿದ್ದ.

ವಿಚಿತ್ರ ಸಲಹೆ ನೀಡಿದ ಪ್ರೇಮಿ
ಸಂತ್ರಸ್ತ ಮಹಿಳೆಯ ಪ್ರಕಾರ ಸೊಹೇಲ್ ಆಕೆಗೆ ಅಬಾರ್ಶನ್ (Abortion) ಮಾಡಿಸಲು ಒತ್ತಾಯಿಸಿದ್ದಾನೆ. ಇದಕ್ಕೆ ಕಾರಣ ಎಂದರೆ ಆತ ಮೊದಲೇ ಒಂದು ವಿವಾಹವಾಗಿದ್ದಾನೆ ಹಾಗೂ ಒಂದು ಮಗುವಿಗೆ ತಂದೆ ಕೂಡ ಆಗಿದ್ದಾನೆ. ಮಹಿಳೆಯ ಪ್ರಕಾರ ಸೊಹೇಲ್ ಖುದ್ದು ಯೂಟ್ಯೂಬ್ ವಿಡಿಯೋ ವಿಕ್ಷೀಸಿ ಭ್ರೂಣವನ್ನು ದೇಹದಿಂದ ಹೊರಹಾಕುವ ವಿಚಿತ್ರ ಸಲಹೆ ನೀಡಿದ್ದಾನೆ. ಸೆಲ್ಫ್ ಅಬಾರ್ಶನ್ ವೇಳೆ ಮಹಿಳೆ ಮನೆಯ ಕಿಚನ್ ನಲ್ಲಿರುವ ಉಪಕರಣಗಳನ್ನು (Kitchen Utentiels) ಬಳಸಿದ್ದಾಳೆ. ಈ ರೀತಿ ಅವಳು ತನ್ನ ಗರ್ಭನಾಳವನ್ನು (Detach Fetus By Cutting Cord) ಕತ್ತರಿಸಿ ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಿದ್ದಾಳೆ.

ಇದನ್ನೂ ಓದಿ-Bihar Boat Capsized:ಬಿಹಾರದ ಮೋತಿಹಾರಿಯಲ್ಲಿ ಭೀಕರ ದೋಣಿ ದುರಂತ, 22 ಜನರು ನೀರುಪಾಲು, ಒಂದು ಶವ ಪತ್ತೆ

ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದಾದರು ಹೇಗೆ?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮಹಿಳೆ 7 ತಿಂಗಳ ಗರ್ಭಿಣಿಯಾಗಿದ್ದಳು. ಆದರೆ, ಆಕಸ್ಮಿಕವಾಗಿ ಜಾರಿ ಬಿದ್ದ ಬಳಿಕ, ಅವಳಿಗೆ ವಿಪರೀತ ನೋವು ಕಾಣಿಸಿಕೊಂಡಿದೆ ಮತ್ತು ಸಮಯಕ್ಕೂ ಮುನ್ನವೇ ಡಿಲೆವರಿ ಆಗಲು ಆರಂಭಗೊಂಡಿದೆ. ಈ ವೇಳೆ ಆರೋಪಿ ಸೊಹೇಲ್ ಅವಳಿಗೆ ವಿಡಿಯೋ ನೋಡಿ ಅಬಾರ್ಶನ್ ಸಲಹೆ ನೀಡಿದ್ದಾನೆ. ಮಹಿಳೆ ಯುಟ್ಯೂಬ್ (YouTube) ನೋಡಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಮಗು ಜೀವಂತವಾಗಿ ಉಳಿದಿಲ್ಲ. ಬಳಿಕ ಸ್ಥಳಕ್ಕೆ ಧಾವಿಸಿದ ಸೊಹೇಲ್ ಆಕೆಯ ಮನವೊಲಿಸಿ ನವಜಾತ ಶಿಶುವನ್ನು ಹತ್ತಿರದಲ್ಲಿಯೇ ಇರುವ ಸ್ಮಶಾನಭೂಮಿಯಲ್ಲಿ ಹೂತಿದ್ದಾನೆ.

ಇದನ್ನೂ ಓದಿ-Coronavirusನ ಅತ್ಯಂತ ಅಪಾಯಕಾರಿ ರೂಪಾಂತರಿ R.1 ಪತ್ತೆ, ಎಚ್ಚರಿಕೆ ನೀಡಿದ ತಜ್ಞರು

ಈ ಘಟನೆಯ ಕುರಿತು ಕುಟುಂಬ ಸದಸ್ಯರಿಗೆ ಮಾಹಿತಿ ಸಿಗುತ್ತಲೇ ಅವರು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಬಳಿಕ ತಾಜ್ ನಗರ್ ಸ್ಮಶಾನಭೂಮಿಯಿಂದ ಶಿಶುವಿನ ಅವಶೇಷಗಳನ್ನು ಹೊರತೆಗೆಯಲು ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ (Government Medical College And Hospital Nagpur) ತಜ್ಞರ ತಂಡವನ್ನು ಕರೆಸಲಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆರೋಪಿ ಈಗಾಗಲೇ ಎರಡು ಬಾರಿ ಮದುವೆಯಾಗಿದ್ದಾನೆ. ಸದ್ಯ ಪ್ರಕರಣದಲ್ಲಿ ಪೊಲೀಸರು ಆತನ ವಿರುದ್ಧ ಸಾಕ್ಷಾಧಾರಾಗಳನ್ನು ಕಲೆಹಾಕುವಲ್ಲಿ ನಿರತರಾಗಿದ್ದು, ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-Weird News: ಐ-ಡ್ರಾಪ್ ಎಂದು ತಿಳಿದು ಗರ್ಲ್ ಫ್ರೆಂಡ್ ಕಣ್ಣಿಗೆ ಗ್ಲೂ ಹಾಕಿದ ಭೂಪ, ಮುಂದೇನಾಯ್ತು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News