ನವದೆಹಲಿ: ಅಮೃತಸರದಲ್ಲಿ ನಡೆದ ರಾಮ್ ಲೀಲಾ ಉತ್ಸವದಲ್ಲಿ ರಾವಣನ ಪಾತ್ರವನ್ನು ದಲ್ಬಿರ್ ಸಿಂಗ್ ಮುಗಿಸಿ ರಾವಣ ದಹನವನ್ನು ನೋಡುವುದಕ್ಕೆ ಸಿದ್ದವಾಗಿದ್ದರು.ಪಟಾಕಿಗಳ ಚಿತ್ತಾರವನ್ನು ನೋಡಲು ಜೋಡಾ ಪಾತಕ್ ನತ್ತ ತೆರಳಿದ್ದಾರೆ.ಈ ವೇಳೆ ರೈಲು ಬರುವುದನ್ನು ನೋಡಿ ನೆರದಿದ್ದ ಸಮೂಹಕ್ಕೆ ಎಚ್ಚರಿಕೆ ನೀಡಲು ತೆರಳಿದಾಗ ರೈಲಿಗೆ ಸಿಕ್ಕು ಸಾವನ್ನಪ್ಪಿದ್ದಾರೆ. ನಿನ್ನೆ ನಡೆದ ರೈಲು ದುರಂತದಲ್ಲಿ ಮೃತಪಟ್ಟವರಲ್ಲಿ ದಲ್ಬೀರ್ ಸಿಂಗ್ ಕೂಡ ಒಬ್ಬರು.
ಈಗ ದಲ್ಬಿರ್ ಸಿಂಗ್ ಸಾವಿನ ಸುದ್ದಿ ತಿಳಿದು ಅವರ ತಾಯಿ, ಪತ್ನಿ ಮತ್ತು ಸಹೋದರರಿಗೆ ನಿಜಕ್ಕೂ ದಿಕ್ಕೇ ತೊಚದಂತಾಗಿದ್ದಾರೆ. ಸುಮಾರು ಒಂದು ದಶಕದಿಂದ ಅವರು ರಾಮ್ಲೀಲಾದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಮ ಮತ್ತು ಲಕ್ಷಣರ ಪಾತ್ರವನ್ನು ಸಿದ್ದಗೊಳಿಸುವುದಕ್ಕಾಗಿ ನಿನ್ನೆ ಬೇಗನೆ ಮನೆಯಿಂದ ಹೊರಟು ಹೋಗಿದ್ದರು ಎಂದು ದಲ್ಬೀರ್ ಸಿಂಗ್ ತಾಯಿ ಹೇಳಿದರು.
#Amritsar: Dalbir Singh (pic 1), who played the role of Ravan in a Ramlila in the city during Dussehra celebrations, died in #AmritsarTrainAccident, yesterday. His mother (pic 3) says, "I appeal to the govt to provide a job to my daughter-in law. She also has a 8-month old baby." pic.twitter.com/MFDHVhwf4G
— ANI (@ANI) October 20, 2018
ಕಳೆದ 20 ವರ್ಷಗಳಿಂದಲೂ ರೈಲ್ವೆ ಟ್ರಾಕ್ ನಿಂದ ಕೇವಲ 50 ಮೀಟರ್ ದೂರದಲ್ಲಿನ ಜೋದಾ ಪಾತಕ್ ನಲ್ಲಿರುವ ಖಾಲಿ ಜಾಗದಲ್ಲಿ ರಾಮ್ ಲೀಲಾ ಆಚರಣೆಯಲ್ಲಿ ಜನರು ಭಾಗವಹಿಸುತ್ತಾ ಬಂದಿದ್ದಾರೆ ಎಂದು ದಲ್ಬಿರ್ ಸಿಂಗ್ ಅವರ ತಾಯಿ ಸಾವನ್ ಕೌರ್ ಹೇಳಿದರು. ಈಗ ಮಗನ ಸಾವಿನಿಂದ ಅನಾತವಾಗಿರುವ ಹೆಂಡತಿ ಮತ್ತು ಆತನ ಎಂಟು ತಿಂಗಳ ಮಗುವಿಗಾಗಿ ತನ್ನ ಸೊಸೆಗೆ ಸರ್ಕಾರ ಕೆಲಸ ನೀಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.